ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ
ಭಾರತೀಯ ದೇವತೆಗಳ ಮೆಚ್ಚಿನ ಪುಷ್ಪ ಕಮಲ. ಕಮಲದ ಹೂವು ಮನೆಯಲ್ಲಿದ್ದರೆ ಆ ಕುಟುಂಬಕ್ಕೆ ಆಯಸ್ಸು,ಆರೋಗ್ಯ, ಸಕಲ ಸಮೃದ್ಧಿಗಳು ಲಭಿಸುತ್ತವೆ ಎನ್ನುವ ನಂಬಿಕೆಯಿದೆ. ಅದಕ್ಕಾಗಿಯೇ ಅನೇಕ ಮನೆಗಳ ಹಜಾರದ ಮೂಲೆಯೊಂದರಲ್ಲಿ ಸಣ್ಣ ಕಮಲವೊಂದನ್ನು ಇಟ್ಟಿರುತ್ತಾರೆ.
ಈ ಅದೃಷ್ಟದ ಹೂವು ಸದಾ ನಗುತ್ತಾ ಇರಬೇಕು ಅಂದರೆ, . ನಿಮ್ಮ ಮನೆಯ ಕಮಲ ಕಳೆ ಕಳೆಯಾಗಿರುವಂತೆ ಮಾಡಲು ನಾವು ಕೆಲವು ತೋಟಗಾರಿಕಾ ಸಲಹೆಗಳನ್ನು ನಿಮಗಾಗಿ ತಂದಿದ್ದೇವೆ.
ಮನೆ ಕಮಲದ ಗಿಡಗಳಿಗೆ ಹೆಚ್ಚಿನ ಆರೈಕೆ ಬೇಕಾಗುತ್ತದೆ ಏಕೆಂದರೆ ಅವು ತುಂಬಾನೇ ಸೂಕ್ಷ್ಮವಾದವುಗಳು. ಕಮಲ ನೀರಿನಲ್ಲಿ ಬೆಳೆಯುವ ಸಸ್ಯವಾಗಿದ್ದರೂ ಅಗತ್ಯಕ್ಕಿಂತ ಹೆಚ್ಚಿನ ನೀರಿದ್ದರೆ ಈ ಗಿಡಗಳು ಸತ್ತುಹೋಗುತ್ತವೆ! .
ದೊಡ್ಡದಾದ ಪಾತ್ರೆಯಲ್ಲಿ ಕಮಲದ ಆರೈಕೆಯತ್ತ ಮೊದಲ ಹೆಜ್ಜೆಯೆಂದರೆ, ಕಮಲದ ಗಿಡವನ್ನು ಒಂದು ದೊಡ್ಡ ಪಾತ್ರೆಯಲ್ಲಿ ನೆಡುವುದು. ಬಟ್ಟಲು ಎಷ್ಟು ದೊಡ್ಡದಿರುತ್ತದೋ ಗಿಡವೂ ಅಷ್ಟು ದೊಡ್ಡದಾಗಿ ಬೆಳೆಯುತ್ತದೆ.
ಕಮಲದ ಗಿಡಗಳು ತುಂಬಾ ಸೂಕ್ಷ್ಮ ರೀತಿಯವಾಗಿದ್ದು ಅವು ಆರಾಮವಾಗಿ, ಸಮೃದ್ಧವಾಗಿ ಬೆಳೆಯಬೇಕೆಂದರೆ, ಈ ಗಿಡಗಳನ್ನು ಇರಿಸಿದ್ದ ಬಟ್ಟಲಲ್ಲಿ ಯಾವುದೇ ಹೂವುಗಳನ್ನು ಬೆಳೆಸಬೇಡಿ.
ಕಮಲ ಇರಿಸಿದ್ದ ಬಟ್ಟಲಿಗೆ ಒಂದು ಚಿಟಿಕೆ ಉಪ್ಪನ್ನು ಹಾಕಿಡಲು ಮರೆಯದಿರಿ. ಈ ಚಿಟಿಕೆ ಉಪ್ಪು ನಿಮ್ಮ ಕಮಲದ ಗಿಡವನ್ನು ಹೆಚ್ಚು ದಿನಗಳ ಕಾಲ ಬಾಳಿಸಬಲ್ಲದು.
ಕಮಲವು ದೀರ್ಘಕಾಲ ಉಳಿಯಲು , ನೀರನ್ನು ಬದಲಾಯಿಸುವದರಿಂದ ಹಾಗೂ ತಾಜಾ ನೀರನ್ನು ಹಾಕುವದರಿಂದ ಬಟ್ಟಲಲ್ಲಿ ಫಂಗಸ್ ಬೆಳೆಯುವುದನ್ನು ತಪ್ಪಿಸಬಹುದು.
ಬಟ್ಟಲಲ್ಲಿ ನೀರು ತುಂಬಿ ಗಿಡ ಬೆಳೆಸುವದು ಅಂದರೆ ಕೀಟಗಳನ್ನೂ ಬೆಳೆಸಿದಂತೆಯೆ. ಬಟ್ಟಲಿನ ನಿಂತ ನೀರಿನಲ್ಲಿ ಹುಟ್ಟಿಕೊಳ್ಳುವ ಕೀಟಗಳು ನಿಮ್ಮ ಕಮಲದ ಗಿಡವನ್ನು ತಿಂದು ಹಾಕುತ್ತವೆ. ಅದಕ್ಕೆ ಈ ಕೀಟಗಳನ್ನು ಆದಷ್ಟು ದೂರವಿರಿಸಿ.
ಈ ಹೂ ಗಿಡಗಳಿಗೆ ಬಿಸಿಲು ಇಷ್ಟ, ನೆರಳು ಕಷ್ಟ
ಮೇಲಿನ ಕೆಲವು ಸರಳ ಸೂಚನೆಗಳನ್ನು ಪಾಲಿಸಿ ಕಮಲದ ಗಿಡವನ್ನು ದೀರ್ಘಕಾಲದವರೆಗೆ ಚನ್ನಾಗಿ ಬೆಳೆಸಿರಿ.
#ಕಮಲ #ಹೂ #Bharata #mone #budget #election #Chethana #gowda #traffic #Central #government #yogi #riya #AI #ಮುನಿಸ್ವಾಮಿ #ಗಿಡ https://youtube.com/@worldwidepeoplesnewslotus video
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏