*ಇತಿಹಾಸದಿಂದ ಮಾನವನ ಪ್ರಗತಿಯಲ್ಲಿ ಸಾಕು ಪ್ರಾಣಿಗಳಿಗಳ ಮಹತ್ವ*
*ಇತಿಹಾಸದಿಂದ ಮಾನವನ ಪ್ರಗತಿಯಲ್ಲಿ ಸಾಕು ಪ್ರಾಣಿಗಳಿಗಳ ಮಹತ್ವ* ಭಾರತ, ಮಾರ್ಚ್ 09:ಮಾನವ ನಿರ್ಮಿತ ಯಂತ್ರಗಳನ್ನು ಎಳೆಯಲು, ಹೊಲಗಳನ್ನು ಬೇಸಾಯ ಮಾಡಲು ಸಾಕು ಪ್ರಾಣಿಗಳಿಗಳು ಸಹಾಯ ಮಾಡಿವೆ.ಮಾನವರಿಗೆ ಅತಿ ಅವಶ್ಯಕವಾದ ಆಹಾರ ಮತ್ತು ಬಟ್ಟೆಗಳನ್ನು ಈ ಸಾಕುಪ್ರಾಣಿಗಳು ಒದಗಿಸಿವೆ. ಜನರನ್ನು ಮತ್ತು ಅವರ ಸಾಮಗ್ರಿಗಳನ್ನು ಹೊರೆಗಳನ್ನು ಸಾಗಿಸಲು ಬಳಕೆಯಾಗಿವೆ. ಸಾಕುಪ್ರಾಣಿಗಳು ತಮ್ಮ ಮಾಲೀಕರನ್ನು ಹಾಗೂ ಸುತ್ತಮುತ್ತಲಿನ ಜನರನ್ನು ವಿನೋದ ಪಡಿಸಿವೆ . Domestic animals video #ಸಾಕುಪ್ರಾಣಿ #ಮೂಳೆ #ಹುಲ್ಲು #ಆಹಾರ #ನಾಗರಿಕತೆ 1.ಪುರಾತತ್ತ್ವ ಶಾಸ್ತ್ರದ ಆಧಾರಗಳು:- ಮಾನವ ಪ್ರಾಣಿಗಳ ಪಳಗಿಸುವಿಕೆಯ ಕ್ರಿಯೆಗೆ ಆಧಾರವಾಗಿ ಅನೇಕ ಪುರಾತತ್ತ್ವ ಶಾಸ್ತ್ರದ ಆಧಾರಗಳು ದೊರೆಯುತ್ತವೆ . ಮುಖ್ಯವಾಗಿ ಪ್ರಾಣಿಗಳ ಅಸ್ಥಿಪಂಜರದಲ್ಲಿನ ರೂಪವಿಜ್ಞಾನದ ಬದಲಾವಣೆಗಳನ್ನು ಅವಲಂಬಿಸಿದೆ. ಅಸ್ಥಿಪಂಜರದಲ್ಲಿನ ಮುಖದ ರಚನೆ ಮತ್ತು ಕೊಂಬುಗಳ ಆಕಾರ, ಪ್ರಾಣಿಗಳ ಮೂಳೆಗಳಲ್ಲಿನ ಬದಲಾವಣೆಯು ಪುರಾತತ್ತ್ವ ಶಾಸ್ತ್ರದ ಸ್ಥಳಗಳಲ್ಲಿ ಪ್ರಾಣಿಗಳ ಸಾಕಣೆಯನ್ನು ಯಶಸ್ವಿಯಾಗಿ ಗುರುತಿಸಲು ಕಾರಣವಾಗಿದೆ. ಇದರ ಜೊತೆಗೆ, ಪುರಾತತ್ತ್ವಜ್ಞರು ಪ್ರಾಣಿಗಳ ಸಾಕಣೆಯ ಇತಿಹಾಸದ ಪ್ರಕ್ರಿಯೆಯನ್ನು ಪತ್ತೆಹಚ್ಚಲು ಹ...