ಒಂದೇ ವರ್ಷ 266 ವ್ಹಿಲಿಂಗ್ ಪ್ರಕರಣಗಳಲ್ಲಿ 179 ಜನರನ್ನು ಬಂಧಿಸಲಾಗಿದೆ - ಗೃಹ ಸಚಿವ
ಕಲಾಪ full video ಒಂದೇ ವರ್ಷ 266 ವ್ಹಿಲಿಂಗ್ ಪ್ರಕರಣಗಳಲ್ಲಿ 179 ಜನರನ್ನು ಬಂಧಿಸಲಾಗಿದೆ - ಗೃಹ ಸಚಿವ ****** ಕರ್ನಾಟಕ, ಮಾರ್ಚ್ 06 :*ವಿಧಾನ ಪರಿಷತ್ ಸದಸ್ಯರಾದ ಎಸ್. ಎಲ್.ಭೋಜೇಗೌಡ ಅವರು ಇಂದು ಪ್ರಶ್ನೋತ್ತರ ಕಲಾಪ ವೇಳೆ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಕೇಳಿದ ವಿವಿಧ ಪ್ರಶ್ನೆಗಳಿಗೆ ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಉತ್ತರಿಸಿರುವ ಪ್ರಮುಖ ಅಂಶಗಳು:-* ರಾಜ್ಯಾದ್ಯಂತ 136 ವ್ಹಿಲಿಂಗ್ ಪ್ರಕರಣಗಳನ್ನು ದಾಖಲಿಸಿ, ಈ ಪ್ರಕರಣಗಳಲ್ಲಿ 128 ಜನರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. 2024ರಲ್ಲಿ 266 ಪ್ರಕರಣಗಳಲ್ಲಿ 179 ಜನರನ್ನು ಬಂಧಿಸಲಾಗಿದೆ. 2025ರಲ್ಲಿ ಈವರೆಗೆ 47 ಪ್ರಕರಣಗಳಲ್ಲಿ 30 ಜನರನ್ನು ಬಂಧಿಸಲಾಗಿದೆ. ಮಾರಕಸ್ತ್ರಗಳನ್ನು ಹಿಡಿದು ಪುಂಡಾಟಿಕೆ ನಡೆಸಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ. 2023ರಲ್ಲಿ 68 ಪ್ರಕರಣ ದಾಖಲಿಸಿ, 147 ಆರೋಪಿಗಳನ್ನು ಬಂಧಿಸಲಾಗಿದೆ. 2024ರಲ್ಲಿ 66 ಪ್ರಕರಣಗಳಲ್ಲಿ 187 ಆರೋಪಿಗಳು , 2025ರ ಫೇಬ್ರವರಿವರೆಗೆ 26 ಕೇಸ್ ದಾಖಲಿಸಿ 86 ಕಿಡಿಗೇಡಿಗಳನ್ನು ಬಂಧಿಸಲಾಗಿದೆ. ಇಂತ ಪ್ರಕರಣಗಳು ಬೆಳಕಿಗೆ ಬಂದ ತಕ್ಷಣ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಂಡು, ಕಠಿಣ ಶಿಕ್ಷೆ ಆಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ 2023ರಲ್ಲಿ ವ್ಹಿಲಿಂಗ್ ಮಾಡಿದವರ ವಿರುದ್ಧ 242 ...