ಪೋಸ್ಟ್‌ಗಳು

*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ ಉದ್ಯಮ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ ಉದ್ಯಮ

*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ   ಉದ್ಯಮ* ಕರ್ನಾಟಕ, ಮಾರ್ಚ್ 11:ಕೋಳಿ ಸಾಕಾಣಿಕೆ ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿದೆ. ಹಿಂದೆ ದೇಶೀಯ ಕೋಳಿಗಳಿಂದ ಮೊಟ್ಟೆ ಮತ್ತು ಮಾಂಸ ಉತ್ಪಾದಿಸಲಾಗುತ್ತಿತ್ತು, ಭೂಮಿ ಇಲ್ಲದವರಿಗೂ ಕೋಳಿ ಸಾಕಾಣಿಕೆ ಲಾಭದಾಯಕ ಉದ್ಯಮ. ಕಡಿಮೆ ಖರ್ಚಿನಲ್ಲಿ ಮತ್ತು ಸುಲಭವಾಗಿ ಕೈಗೊಳ್ಳಬಹುದಾದ ಈ ಕೋಳಿ ಸಾಕಾಣಿಕೆಯನ್ನು ಪ್ರಸ್ತುತ ಲಕ್ಷಾಂತರ ಜನರು ಇದನ್ನು ಉದ್ಯಮವನ್ನಾಗಿ ನಡೆಸುತ್ತಿದ್ದಾರೆ. ಕೋಳಿಗಳ ದೃಶ್ಯ #ಕೋಳಿ #ಬಾಯ್ಲರ್ #ಮಾಂಸ #ಮೊಟ್ಟೆ #ಇಡುವ #ರುಚಿ #ಫಾರಂ #ನಾಟಿ #ನಾಟಿಕೋಳಿ ಇತ್ತೀಚೆಗೆ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸರಿಯಾದ ಮಾರ್ಗದರ್ಶನವಿಲ್ಲದ ಕಾರಣ, ಕೆಲವೊಮ್ಮೆ ಉದ್ಯಮಿಗಳು ಕೈಸುಟ್ಟುಕೊಂಡಿರುವ ಉದಾಹರಣೆಗಳೂ ಇವೆ. ಸ್ವಲ್ಪ ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಿದರೆ, ಸಾವಿರ ಕೋಳಿಗಳನ್ನು ಒಬ್ಬನೇ ನಿರ್ವಹಿಸಬಹುದು. ಕೈತುಂಬಾ ಆದಾಯವೂ ಗಳಿಸಬಹುದು. ಕೋಳಿಗಳಲ್ಲಿ ಮಾಂಸಕೋಳಿ, ಮತ್ತು ಮೊಟ್ಟೆ ಕೊಳಿಗಳೆಂದು ವಿಂಗಡಿಸಲಾಗುತ್ತದೆ. ಕೆಲವರು ಮಾಂಸಕ್ಕಾಗಿ ಸಾಕುತ್ತಾರೆ.ಇನ್ನೂ ಕೆಲವರು ಮೊಟ್ಟೆ ಮತ್ತು ಮಾಂಸಕ್ಕಾಗಿ ಕೋಳಿಗಳನ್ನು ಸಾಕುತ್ತಾರೆ.  1 ಮಾಂಸ ಕೋಳಿಗಳು:- ಫಾರಂ ಕೋಳಿಗಳ ಮಾಂಸ ಮೃದು ಹಾಗೂ ರುಚಿಕರ. ಅಧಿಕ ಪ್ರೊಟಿನ್‌ ಹಾಗೂ ಕಡಿಮೆ ಕೊಬ್ಬು ಹೊಂದಿದ ಶಕ್ತಿವರ್ಧಕ ಆಹಾರ. ಇವುಗಳ ಸಾಕಣೆ ಅತ್ಯಂತ ಸುಲಭ ಹಾಗೂ ಸರಳ. ಕೆಲವೇ ದಿನಗಳ ತರಬೇತಿ ಅಥವಾ ಅನುಭವದೊಂದಿಗೆ ಇದನ...