*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ ಉದ್ಯಮ
*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ
ಉದ್ಯಮ*
ಕರ್ನಾಟಕ, ಮಾರ್ಚ್ 11:ಕೋಳಿ ಸಾಕಾಣಿಕೆ ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿದೆ. ಹಿಂದೆ ದೇಶೀಯ ಕೋಳಿಗಳಿಂದ ಮೊಟ್ಟೆ ಮತ್ತು ಮಾಂಸ ಉತ್ಪಾದಿಸಲಾಗುತ್ತಿತ್ತು, ಭೂಮಿ ಇಲ್ಲದವರಿಗೂ ಕೋಳಿ ಸಾಕಾಣಿಕೆ ಲಾಭದಾಯಕ ಉದ್ಯಮ. ಕಡಿಮೆ ಖರ್ಚಿನಲ್ಲಿ ಮತ್ತು ಸುಲಭವಾಗಿ ಕೈಗೊಳ್ಳಬಹುದಾದ ಈ ಕೋಳಿ ಸಾಕಾಣಿಕೆಯನ್ನು ಪ್ರಸ್ತುತ ಲಕ್ಷಾಂತರ ಜನರು ಇದನ್ನು ಉದ್ಯಮವನ್ನಾಗಿ ನಡೆಸುತ್ತಿದ್ದಾರೆ.
#ಕೋಳಿ #ಬಾಯ್ಲರ್ #ಮಾಂಸ #ಮೊಟ್ಟೆ #ಇಡುವ #ರುಚಿ #ಫಾರಂ #ನಾಟಿ #ನಾಟಿಕೋಳಿ
ಇತ್ತೀಚೆಗೆ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸರಿಯಾದ ಮಾರ್ಗದರ್ಶನವಿಲ್ಲದ ಕಾರಣ, ಕೆಲವೊಮ್ಮೆ ಉದ್ಯಮಿಗಳು ಕೈಸುಟ್ಟುಕೊಂಡಿರುವ ಉದಾಹರಣೆಗಳೂ ಇವೆ. ಸ್ವಲ್ಪ ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಿದರೆ, ಸಾವಿರ ಕೋಳಿಗಳನ್ನು ಒಬ್ಬನೇ ನಿರ್ವಹಿಸಬಹುದು. ಕೈತುಂಬಾ ಆದಾಯವೂ ಗಳಿಸಬಹುದು.
ಕೋಳಿಗಳಲ್ಲಿ ಮಾಂಸಕೋಳಿ, ಮತ್ತು ಮೊಟ್ಟೆ ಕೊಳಿಗಳೆಂದು ವಿಂಗಡಿಸಲಾಗುತ್ತದೆ. ಕೆಲವರು ಮಾಂಸಕ್ಕಾಗಿ ಸಾಕುತ್ತಾರೆ.ಇನ್ನೂ ಕೆಲವರು ಮೊಟ್ಟೆ ಮತ್ತು ಮಾಂಸಕ್ಕಾಗಿ ಕೋಳಿಗಳನ್ನು ಸಾಕುತ್ತಾರೆ.
1 ಮಾಂಸ ಕೋಳಿಗಳು:-
ಫಾರಂ ಕೋಳಿಗಳ ಮಾಂಸ ಮೃದು ಹಾಗೂ ರುಚಿಕರ. ಅಧಿಕ ಪ್ರೊಟಿನ್ ಹಾಗೂ ಕಡಿಮೆ ಕೊಬ್ಬು ಹೊಂದಿದ ಶಕ್ತಿವರ್ಧಕ ಆಹಾರ. ಇವುಗಳ ಸಾಕಣೆ ಅತ್ಯಂತ ಸುಲಭ ಹಾಗೂ ಸರಳ. ಕೆಲವೇ ದಿನಗಳ ತರಬೇತಿ ಅಥವಾ ಅನುಭವದೊಂದಿಗೆ ಇದನ್ನು ಪ್ರಾರಂಭಿಸಬಹುದು. ಅತಿ ಶೀಘ್ರದಲ್ಲಿ ಬೆಳವಣಿಗೆ ಹೊಂದಿ ಮಾಂಸವನ್ನು ಉತ್ಪಾದಿಸುವ ಉದ್ದೇಶಕ್ಕೆಂದೇ ವಿಶೇಷವಾಗಿ ಅಭಿವೃದ್ಧಿಪಡಿಸಿರುವ ಕುಕ್ಕುಟ ತಳಿಗಳಿವೆ. ಉದಾಹರಣೆಗೆ ಕಾಬ್, ಹಬ್ಬರ್ಡ್, ಹಬ್ಚಿಿಕ್ಸ್ ಇತ್ಯಾದಿ.
ಬಾಯ್ಲರ್ ಕೋಳಿಗಳನ್ನು ಮಾಂಸಕ್ಕಾಗಿಯೇ ಉಪಯೋಗಿಸುತ್ತಾರೆ. ಈ ಕೋಳಿಗಳು ಕೇವಲ ಒಂದು ಒಂದೂವರೆ ತಿಂಗಳುಗಳಲ್ಲಿ ಎರಡು ಎರಡೂವರೆ ಕೆ.ಜಿ ತೂಕ ಪಡೆಯುತ್ತವೆ. ಒಂದು ಕೆ.ಜಿ. ತೂಕ ಬರಲು ಪ್ರತಿ ಕೋಳಿಗೆ 1.6 ಕೆಜಿ ಯಿಂದ 1.75 ಕೆ.ಜಿಯಷ್ಟು ಆಹಾರ ಸಾಕು! ಮೊಟ್ಟೆ ಕೋಳಿಗಳ ಸಾಕಣೆಗೆ ಹೊಲಿಸಿದರೆ ಮಾಂಸದ ಕೋಳಿ ಸಾಕಣೆಯ ಪ್ರಾರಂಭಿಕ ವೆಚ್ಚ ತೀರಾ ಕಡಿಮೆ. ಸಾಕಣೆ ಕಾಲಾವಧಿ ಕೇವಲ 4ರಿಂದ 6 ವಾರಗಳು ಮಾತ್ರ. ಇವುಗಳ ಮಾಂಸಕ್ಕೆ ಬೇಡಿಕೆ ಹೆಚ್ಚು.ಮಾರುಕಟ್ಟೆ ದರ ವಿಪರೀತ ಏರಿಳಿತ ಕಾಣುವುದರಿಂದ ನಷ್ಟವೂ ಆಗುತ್ತದೆ.
ಮಾಂಸದ ಕೋಳಿ ಸಾಕಾಣಿಕೆ ಉದ್ಯೋಗವನ್ನು ಕೈಗೊಳ್ಳಲು ಪರಿಶ್ರಮದೊಂದಿಗೆ ಮುನ್ನೆಚ್ಚರಿಕೆಯೊಂದಿಗೆ ವ್ಯವಹಾರಿಕ ಜ್ಞಾನವೂ ಬೇಕು. ಸತತ ಶುದ್ಧ ನೀರಿನ ಸೌಕರ್ಯ ಬೇಕು. ರಾತ್ರಿಯೆಲ್ಲ ಬೆಳಕಿನ ಅವಶ್ಯಕತೆಯಿರುವುದರಿಂದ ವಿದ್ಯುತ್ ಬೇಕು.
ಈ ಕೋಳಿಮರಿಗಳು ಹುಟ್ಟಿದಾಗ 42ಗ್ರಾಂ ನಿಂದ 45 ಗ್ರಾಂ ತೂಕವಿರುತ್ತವೆ. ಅದನ್ನು ಪಡೆದ ರೈತರು ಪ್ರಾರಂಭದ 10-15 ದಿನಗಳ ಕಾಲ ವಿದ್ಯುತ್ ಬಲ್ಬುಗಳ ಮೂಲಕ ಬೆಚ್ಚಗೆ ಕಾವು ಕೊಟ್ಟು ಪೌಷ್ಟಿಕ ಆಹಾರ ಹಾಕಿ ಸತತವಾಗಿ ನೀರುಣಿಸಿ ಒಂದು ಒಂದೂವರೆ ತಿಂಗಳುಗಳ ತನಕ ಸಾಕಿ ಮಾರಾಟ ಮಾಡುತ್ತಾರೆ. ಕೇವಲ 45 ದಿನಗಳಲ್ಲಿ ಕೋಳಿ ಮರಿಯು ತನ್ನ ತೂಕವನ್ನು 50 ಪಟ್ಟು ಹೆಚ್ಚಿಸಿಕೊಳ್ಳುತ್ತದೆ. ಕೋಳಿಗಳ ಗೊಬ್ಬರ ಹೆಚ್ಚು ಸಾರಜನಕ ಹೊಂದಿದೆ. ಇದನ್ನು ಕಾಂಪೋಸ್ಟ್ ಮಾಡಿ ಕೃಷಿಗೂ ಬಳಸುತ್ತಾರೆ.
ಕೋಳಿಗಳಿಗೆ ಉತ್ತಮ ಸಮತೋಲನ ವಾಗಿರುವ ಆಹಾರವನ್ನು ನೀಡಬೇಕು. ಇದರಿಂದ ಅಧಿಕ ಮೊಟ್ಟೆ ಮತ್ತು ಮಾಂಸ ಪಡೆಯಲು ಸಾಧ್ಯ. ಕೋಳಿ ಸಾಕಾಣೆಯ ಒಟ್ಟು ವೆಚ್ಚದಲ್ಲಿ ಶೇಕಡ 70-75 ರಷ್ಟು ಭಾಗ ಆಹಾರದ್ದಾಗಿರುತ್ತದೆ. ಮಾರಕರೋಗಗಳಾದ ವಿರುದ್ಧ ಮರಿಗಳಿಗೆ ಪಶುವೈದ್ಯರ ಸಲಹೆಯ ಮೇರೆಗೆ ಲಸಿಕೆಯನ್ನು ನೀರಿನಲ್ಲಿ ಕೊಡಬೇಕಾಗುತ್ತದೆ.
2. ಮೊಟ್ಟೆ ಇಡುವ ಫಾರಂ ಕೋಳಿಗಳು:-
ಮೊಟ್ಟೆ ಇಡುವ ಕೋಳಿ ಮರಿಗಳು ಮೊಟ್ಟೆಯಿಡಲು 17 ರಿಂದ 18 ವಾರಗಳನ್ನು ತೆಗೆದುಕೊಳ್ಳುತ್ತದೆ ಇವು ವರ್ಷಕ್ಕೆ 300 ರಿಂದ 330 ರವರೆಗೆ ಕೂಡಾ ಮೊಟ್ಟೆಗಳನ್ನು ಇಡಬಲ್ಲವು. ಇವು ತಾವು ತಿನ್ನುವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆ ಇಡಲು ಉಪಯೋಗಿಸುತ್ತವೆ. ಇವುಗಳ ಆಹಾರ ಬಳಕೆ ಸಾಮರ್ಥ್ಯ 12 ಮೊಟ್ಟೆಗಳಿಗೆ 1.5 ಕಿ.ಗ್ರಾಂ.
3.ನಾಟಿ ಕೋಳಿಗಳು:- ನಾಟಿ ಕೋಳಿಗಳಿಗೆ ಲಾಭವೂ ಹೆಚ್ಚು. ಆದರೆ ದೇಶೀ ಕೋಳಿ ಸಾಕುವುದಿದ್ದರೆ ಹೆಚ್ಚಿನ ಹಣ ಹೂಡುವ ಅಗತ್ಯವಿಲ್ಲ. ವಿಶೇಷ ಆರೈಕೆಯೂ ಬೇಕಾಗಿಲ್ಲ. ಹಳ್ಳಿಗಳಾದರೆ, ಇವುಗಳನ್ನು ಮನೆಯ ಹಿತ್ತಿಲಲ್ಲಿ ಬಿಟ್ಟು ಸಾಕಿಕೊಂಡು ಸಣ್ಣ ಪ್ರಮಾಣದಲ್ಲಿ ನಿರಂತರ ಆದಾಯ ಪಡೆಯಬಹುದು. ಇವುಗಳನ್ನು ಮಾಂಸ ಮತ್ತು ಮೊಟ್ಟೆಗಾಗಿ ಎರಡೂ ಉದ್ದೇಶಕ್ಕೆ ಸಾಕಬಹುದು.
ಮಾಂಸಪ್ರಿಯರನ್ನೊಮ್ಮೆ ಕೇಳಿ ನೋಡಿ. ನಾಟಿ ಕೋಳಿಗಳ ಮಾಂಸದ ರುಚಿ ಫಾರಂ ಕೋಳಿಗಳಿಗಿಲ್ಲ ಎನ್ನುತ್ತಾರೆ. ಹೀಗಾಗಿ ನಾಟಿ ಕೋಳಿಗೆ ಬೇಡಿಕೆ ಜಾಸ್ತಿ. ಇವುಗಳ ಮಾಂಸ ಮತ್ತು ಮೊಟ್ಟೆಗೆ ಫಾರಂ ಕೋಳಿಗಿಂತ ಎರಡಪಟ್ಟು ಬೆಲೆ ಇದೆ. ಸಾಕುವವರ ಮನೆಯಲ್ಲಿಯೂ ಮೊಟ್ಟೆ ಮಾಂಸದ ಬಳಕೆ ಹೆಚ್ಚುವುದರಿಂದ ಕೋಳಿ ಸಾಕಿದ ಕುಟುಂಬಕ್ಕೂ ಉತ್ತಮ ಪೌಷ್ಟಿಕ ಆಹಾರ ದೊರೆಯುತ್ತದೆ. ಇವನ್ನು ಸಾಕಲು ಯಾವುದೇ ಸಿದ್ಧ ಆಹಾರ ಇಲ್ಲವೇ ಔಷಧಗಳ ಅಗತ್ಯವಿಲ್ಲ. ಸ್ವೇಚ್ಛೆಯಿಂದ ಓಡಾಡಿಕೊಂಡು ತಮ್ಮ ಆಹಾರವನ್ನು ತಾವೇ ಹುಡುಕಿಕೊಳ್ಳುತ್ತವೆ. ಹೀಗಾಗಿ ಕಲಬೆರಕೆಯಿಲ್ಲದ ಶುದ್ಧ ಆರೋಗ್ಯಕರ ಮಾಂಸ ಮತ್ತು ಮೊಟ್ಟೆ ಸಿಗುತ್ತದೆ. ಹಾಗೆ ನೋಡಿದರೆ ಇದು ಸಾವಯವ ಕೋಳಿ ಸಾಕಣೆಯೂ ಹೌದು.
ನಾಟಿ ಕೋಳಿಗಳನ್ನು ಹೊಲದಲ್ಲಿ ಬಿಟ್ಟರೆ ಬೆಳೆಗಳಿಗೆ ತಗಲುವ ಕೀಟಗಳನ್ನು ಹಿಡಿದು ತಿನ್ನುತ್ತವೆ. ರೈತರಿಗೆ ಪರೋಪಕಾರಿಯಾಗುತ್ತವೆ. ಮಾತ್ರವಲ್ಲ, ಬೆಳೆ ಕೊಯ್ಲಾದ ಮೇಲೆ, ಹೊಲದಲ್ಲಿ ಅಳಿದುಳಿದ ಕಾಳುಕಡಿ ತಿನ್ನುತ್ತವೆ. ಮನೆಯ ಸುತ್ತಲಿರುವ ತಿಪ್ಪೆಯ ಕಸಕಡ್ಡಿಗಳನ್ನು ತಿಂದು ಸ್ವಚ್ಛತಾಕಾರ್ಯವನ್ನೂ ನಿರ್ವಹಿಸುತ್ತವೆ.
ಕೋಳಿಯ ಹಿಕ್ಕೆ ಅತ್ಯುತ್ತಮ ಗೊಬ್ಬರ. ಇದನ್ನು ಮಾರಾಟ ಮಾಡಬಹುದು ಇಲ್ಲವೇ ಸ್ವಂತ ಜಮೀನಿಗೆ ಉಪಯೋಗಿಸಿ ಬೆಳೆ ಇಳುವರಿ ಹೆಚ್ಚಿಸಿಕೊಳ್ಳಬಹುದು. ನಾಟಿಕೋಳಿಗಳ ಬೆಳವಣಿಗೆಯ ವೇಗವೂ ನಿಧಾನವಾದ್ದರಿಂದ ಇವುಗಳನ್ನು ಒಮ್ಮೆಲೇ ಮಾರಾಟ ಮಾಡುವ ಒತ್ತಡವಿರುವುದಿಲ್ಲ.’
4.ಆಧುನಿಕ ನಾಟಿ ಕೋಳಿಗಳು:-
ಈಗ ನಾಟಿ ಕೋಳಿಗಳಲ್ಲಿಯೇ ಅಭಿವೃದ್ಧಿಪಡಿಸಿದ ಕೋಳಿಗಳು ಸಿಗುತ್ತವೆ. ಉದಾಹರಣೆಗೆ ಗಿರಿರಾಜ, ಗಿರಿರಾಣಿ, ಸ್ವರ್ಣಧಾರಾ ಇತ್ಯಾದಿ. ಇವು ಜವಾರಿ ಕೋಳಿ ತಳಿಗಳ ಎಲ್ಲಾ ಲಕ್ಷಣಗಳನ್ನೂ ಹೊಂದಿವೆ. ಮೊಟ್ಟೆಯೂ ನಾಟಿ ಕೋಳಿಗಳಂತೆ ಕಂದು ಬಣ್ಣದ್ದು. ನಾಟಿ ಕೋಳಿಗಳಿಗಿಂತ ಎರಡು ಮೂರು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಮಾಂಸ ಮತ್ತು ಮೊಟ್ಟೆ ನೀಡಬಲ್ಲವು. ಹೀಗಾಗಿ ಇವುಗಳನ್ನು ಸಾಕುವುದು ಲಾಭಕರ. ಹಳ್ಳಿಗಳಲ್ಲಿ ಮಹಿಳೆಯರೂ ಕೂಡ ಸುಲಭವಾಗಿ ಸಾಕಬಹುದು.
ಗಿರಿರಾಜ ಅಥವಾ ಸ್ವರ್ಣಧಾರಾದಂತಹ ಕೋಳಿಗಳನ್ನು ಎರಡು ತಿಂಗಳು ಸಾಕಿದರೆ ಒಂದೂವರೆ ಕೆ.ಜಿ ತೂಕ ಪಡೆಯಬಲ್ಲವು. ಇನ್ನೂ ಬಲಿತರೆ ಐದಾರು ಕೆ.ಜಿ.ವರೆಗೆ ತೂಗುತ್ತವೆ! ವರ್ಷಕ್ಕೆ 150 ರಿಂದ 200 ಮೊಟ್ಟೆ ಇಡುತ್ತವೆ. ಮೊಟ್ಟೆಯ ಗಾತ್ರವೂ ದೊಡ್ಡದು. ಕಂದು ಬಣ್ಣ, ಮೊಟ್ಟೆಯೊಂದಕ್ಕೆ ಏಳೆಂಟು ರೂಪಾಯಿ ತನಕ ದರ ಸಿಗಬಹುದು. ಹೀಗಾಗಿ 50 ಕೋಳಿ ಸಾಕಿದರೆ ಕೇವಲ ಮೊಟ್ಟೆಗಳ ಮಾರಾಟದಿಂದಲೇ ತಿಂಗಳಿಗೆ ಎರಡೂವರೆಯಿಂದ ಮೂರು ಸಾವಿರ ರೂಪಾಯಿ ಆದಾಯ. ಅದೇ ಪಕ್ಕಾ ಜವಾರಿ ಕೋಳಿ ವರ್ಷಕ್ಕೆ ಸುಮಾರು 50 ಮೊಟ್ಟೆ ಇಡುತ್ತವೆ.
3.ಸ್ವರ್ಣಧಾರ ಕೋಳಿ:-
ಥೇಟ್ ನಾಟಿ ಕೋಳಿ ರೂಪವನ್ನೇ ಹೋಲುವ ಈ ಕೋಳಿಯ ಹೆಸರು ಸ್ವರ್ಣಧಾರ. ಈ ವಿಶೇಷ ತಳಿಯ ಕೋಳಿಯನ್ನು ಸಾಕುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯಬಹುದು.
ಹಳ್ಳಿಯ ನಾಟಿಕೋಳಿಯಲ್ಲಿ 4-5 ವಾರಗಳಲ್ಲಿ 800 ಗ್ರಾಂ ಮಾಂಸ ಸಿಗುವುದಾದರೆ ಸ್ವರ್ಣಧಾರದಲ್ಲಿ 1.5 ಕೆಜಿ ವರೆಗೆ ಮಾಂಸ ಸಿಗುತ್ತದೆ. ಇನ್ನೂ ಆಹಾರದ ವಿಷಯಕ್ಕೆ ಬಂದರೆ ನಾಟಿ ಕೊಳಿ ತರಹ ಸ್ವರ್ಣಧಾರ ಕೋಳಿಗಳನ್ನು ಮನೆ ಹಿತ್ತಲಲ್ಲಿ ಬಿಟ್ಟು ಸಾಕಬಹುದು. ಅಕ್ಕಿ ಗೋಧಿ, ಹುಲ್ಲು, ಹಿತ್ತಲಿನ ಕ್ರಿಮಿ ಕೀಟಗಳನ್ನು ತಿನ್ನುತ್ತವೆ. ಸ್ವರ್ಣಧಾರ ಕೋಳಿ 140-180 ಮೊಟ್ಟ ಇಡುತ್ತದೆ. .
4 ಕೋಳಿಗಳ ಶೆಡ್ ನಿರ್ಮಾಣದಲ್ಲಿ ಗಮನಿಸಬೇಕಾದ ಅಂಶಗಳು:-
ಈ ಪದ್ಧತಿಯಲ್ಲಿ ಕೋಳಿಗಳನ್ನು ಪಂಜರದಲ್ಲಿಟ್ಟು ಸಾಕಲಾಗುತ್ತದೆ. ಒಂದು ಕೋಳಿಗೆ ಸುಮಾರು 70 ಚದರ ಅಂಗುಲ ಸ್ಥಳಾವಕಾಶ ಸಾಕು. ಸಾಮಾನ್ಯವಾಗಿ 18 ಅಂಗುಲ ಉದ್ದ, 15 ಅಂಗುಲ ಅಗಲ ಮತ್ತು 18 ಅಂಗುಲ ಎತ್ತರದ ಒಂದು ಪಂಜರ 4 ಮೊಟ್ಟೆ ಕೋಳಿಗಳಿಗೆ ಸಾಕಾಗುತ್ತದೆ.
ನೀವು ದೊಡ್ಡ ಪ್ರಮಾಣದಲ್ಲಿ ಶೆಡ್ ನಿರ್ಮಾಣ ಮಾಡುವುದಾದರೆ ಬಯಲು ಪ್ರದೇಶವನ್ನು ಆಯ್ಕೆಮಾಡಿಕೊಳ್ಳುವುದು ಉತ್ತಮ. ಏಕೆಂದರೆ ಮುಕ್ತವಾದ ಗಾಳಿ ಬೆಳಕು ಈ ಪ್ರದೇಶದಲ್ಲಿದ್ದರೆ ಕೋಳಿಗಳ ಬೆಳವಣಿಗೆಗೆ ಇದು ತುಂಬಾ ಅನುಕೂಲಕಲವಾಗಿರುತ್ತದೆ. ಇದನ್ನು ನಿರ್ಮಿಸುವಾಗ ನೆಲದಿಂದ ಎತ್ತರವಾಗಿ ಮತ್ತು ಸಮವಾಗಿರುವಂತೆ ನಿರ್ಮಿಸಬೇಕು. ಅಲ್ಲದೇ ಬೇಸಿಗೆಯಲ್ಲಿ ತಂಪಾಗಿರುವಂತೆ ಮತ್ತು ಚಳಿಗಾಲದಲ್ಲಿ ಬೆಚ್ಚಗೆ ಇರುವಂತ ಸ್ಥಳವನ್ನು ಆಯ್ಕೆಮಾಡಬೇಕು ಆದಷ್ಟು ಇಳಿಜಾರಾಗಿರುವ ಪ್ರದೇಶದಲ್ಲಿ ಇದನ್ನು ನಿರ್ಮಿಸುವುದು ಸೂಕ್ತ. ಅಲ್ಲದೇ ಇದಕ್ಕೆ ನೀರಿನ ಪೂರೈಕೆ ಮತ್ತು ಬೆಳಕಿನ ಪೂರೈಕೆ ಇರುವ ಹಾಗೆ ಗಮನಹರಿಸಬೇಕು.
#Okkaliga #gowda #Vokkaliga #ಮಂಡ್ಯ #ಊರು #ಪುರ #ನಗರ #ಕೃಷಿ #book #Muniswamy #Riya #ವಚನ #ದಾಸ #AI #bgs #ದಾಸ #Dasaokkaliga
https://youtube.com/shorts/S_jtz8pRqZI?si=2XAn2K46720Ls5SG
https://maps.app.goo.gl/1D5CWP8dXvHWwcKo9?g_st=ac
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏