*ಮಹಿಳೆಯರಿಂದ ಮಹಿಳೆಯರಿಗಾಗಿ ವಿಶೇಷ ಮಹಿಳಾ ದಿನಾಚರಣೆ
*ಮಹಿಳೆಯರಿಂದ ಮಹಿಳೆಯರಿಗಾಗಿ ವಿಶೇಷ ಮಹಿಳಾ ದಿನಾಚರಣೆ* ======= ಕರ್ನಾಟಕ, ಮಾರ್ಚ್.10: ಮಹಿಳೆ ಜಗತ್ತಿನ ಅದ್ಭುತ ಶಕ್ತಿಯಾಗಿದ್ದು, ಸರಕಾರಿ ಸೇವೆ ಮಾಡುವ ಮಹಿಳೆಯರು ಕುಟುಂಬ ಹಾಗೂ ಕಚೇರಿ ಎರಡನ್ನು ಸರಿದೂಗಿಸಿಕೊಂಡು ಹೊಗುತ್ತಾರೆಂದು ಜಿಲ್ಲಾದಿಕಾರಿ ಶಿಲ್ಪಾ ಶರ್ಮಾ ಅಭಿಪ್ರಾಯಪಟ್ಟರು. ಇಂದು ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಲಾದ ವಿಶೇಷ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡುತ್ತಾ, ವೇದಿಕೆಯಲ್ಲಿ ಎಲ್ಲರೂ ಮಹಿಳೆಯರೇ ಸ್ಥಾನವನ್ನು ಅಲಂಕರಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ಮುಂಬರುವ ಎಲ್ಲ ದಿನಮಾನಗಳಲ್ಲಿ ಎಲ್ಲ ಕಾರ್ಯಕ್ರಮಗಳಲ್ಲಿ ಶೇ.50 ರಷ್ಟು ಮಹಿಳೆಯರು ವೇದಿಕೆಯಲ್ಲಿ ಉಪಸ್ಥಿತರಿರಬೇಕೆಂದರು. women video ಕೆಲಸ ಮಾಡುವ ಮಹಿಳೆಯರು ಕಚೇರಿಗೆ ಬರುವ ಮುನ್ನ ಮನೆಯಲ್ಲಿಯ ಎಲ್ಲ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ ಕಚೇರಿಗೆ ಹಾಜರಾಗುತ್ತಾರೆ. ಸರಕಾರಿ ಸೇವೆಯ ಮಾಸಿಕ ವೇತನ ಆರ್ಥಿಕತೆಯ ದೃಷ್ಟಿಯಿಂದ ಪರಿಗಣಿಸಲಾಗುತ್ತದೆಯಾದರೂ ಅವರ ಕೌಟುಂಬಿಕ ಮನೆಗೆಲಸ ಲೆಕ್ಕಕ್ಕೆ ಬರುವುದಿಲ್ಲ. ಅಡುಗೆ, ಮನೆಗೆಲಸ ಮಾಡಿ ಕಚೇರಿಗೆ ಬರುವ ಮಹಿಳೆಯರ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳೆಯರು ಮನೆಯಲ್ಲಿ ಗಂಡು, ಹೆಣ್ಣು ಮಕ್ಕಳಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡದೆ ಸರಿಸಮಾನವಾಗಿ ಪರಿಗಣಿಸಿದರೆ ಮುಂಬರುವ ದಿನಮಾನಗಳಲ್ಲಿ ಪ್ರತಿ ಕ್ಷೇತ್ರದಲ್ಲಿ ಶೇ.50 ರಷ್ಟು ಮಹ...