ಪೋಸ್ಟ್‌ಗಳು

ವೇತನ ಆಯೋಗ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಮಕ್ಕಳಿಗೆ ದೊರೆಯಬೇಕಾದ ವಿದ್ಯಾರ್ಥಿ ವೇತನ ವಿಳಂಭವಾಗುತ್ತಿದೆ- ಮಕ್ಕಳ ಹಕ್ಕುಗಳ ಆಯೋಗ*===============

*ಮಕ್ಕಳಿಗೆ ದೊರೆಯಬೇಕಾದ ವಿದ್ಯಾರ್ಥಿ ವೇತನ ವಿಳಂಭವಾಗುತ್ತಿದೆ- ಮಕ್ಕಳ ಹಕ್ಕುಗಳ  ಆಯೋಗ* =============== ಕರ್ನಾಟಕ, ಫೆಬ್ರುವರಿ.18: ಜಿಲ್ಲೆಯಲ್ಲಿ 1 ಲಕ್ಷ ವಿದ್ಯಾರ್ಥಿಗಳ ಆಧಾರ ವಿವರವನ್ನು ಸಾಪ್ಟವೇರನಲ್ಲಿ ದಾಖಲಿಸದೇ ಇರುವುದಕ್ಕೆ ಮಕ್ಕಳಿಗೆ ದೊರೆಯಬೇಕಾದ ವಿದ್ಯಾರ್ಥಿ ವೇತನ ವಿಳಂಭವಾಗುತ್ತಿದೆ, ಸಿಆರ್‌ಪಿ, ಬಿಆರ್‌ಪಿ ಹಾಗೂ ಬಿಇಓ ಗಳು ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ತಿಳಿಸಿದರು.  ಅವರು ಜಿಲ್ಲಾ ಪಂಚಾಯತದಲ್ಲಿAದು ಉಚಿತ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಸಮರ್ಪಕ ಅನುಷ್ಠಾನದ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಂವಾದ ಹಾಗೂ ಪುನಶ್ವೇತನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.   ಜಿಲ್ಲೆಯಲ್ಲಿ ಒಟ್ಟು 3.33 ಲಕ್ಷ ವಿದ್ಯಾರ್ಥಿಗಳು ಇದ್ದು, ಎಲ್ಲ ಮಕ್ಕಳ ಡಾಟ್‌ಬೇಸ್ ವಿವರ ದಾಖಲಾಗಬೇಕಿದೆ. ಸಾಕಷ್ಟು ಮಕ್ಕಳ ಶಿಕ್ಷಣಕ್ಕೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳಿಗೆ ತಲುಪದೇ ಇದ್ದರೆ ಯೋಜನೆಗಳು ಸಾಕಾರಗೊಳ್ಳದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ನಿರ್ಲಕ್ಷ, ಬೇಜಬ್ದಾರಿ ತೋರದೇ ಕ್ರೀಯಾಶೀಲರಾಗಿ ಪ್ರಾಮಾಣಿಕವಾಗಿ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸೇವೆ ಸಲ್ಲಿಸುವಂತೆ ತಿಳಿಸಿದರು.  ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಸಹ ಮು...