ಎಲ್ಲಿದೆ ಶ್ರೀ ಕಮಂಡಲ ಗಣಪತಿ ದೇವಸ್ಥಾನ*
*ಎಲ್ಲಿದೆ ಶ್ರೀ ಕಮಂಡಲ ಗಣಪತಿ ದೇವಸ್ಥಾನ* ಶ್ರೀ ಕಮಂಡಲ ಗಣಪತಿ ದೇವಸ್ಥಾನವು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಿಂದ 4 ಕಿಲೋಮೀಟರ್ ದೂರದಲ್ಲಿರುವ ಕೆಸವೆ ಎಂಬ ಪುಟ್ಟಗ್ರಾಮದಲ್ಲಿದೆ. ಕಮಂಡಲ ಗಣಪತಿ ದೇವಸ್ಥಾನವು ಒಂದು ಪ್ರಾಚೀನ ದೇವಾಲಯವಾಗಿದೆ . ಕೊಪ್ಪ ತಾಲೂಕು ಸಹ್ಯಾದ್ರಿ ಬೆಟ್ಟಗಳಿಂದ ಆವೃತವಾಗಿದ್ದು ಸಮುದ್ರ ಮಟ್ಟದಿಂದ 763 ಮೀಟರ್ ಎತ್ತರದಲ್ಲಿದೆ. ಆಹ್ಲಾದಕರ ಹವಾಮಾನ ಮತ್ತು ಸುಂದರ ನೋಟಗಳನ್ನು ಈ ಸ್ಥಳ ಹೊಂದಿದೆ. #ಕಮಂಡಲ #ಗಣಪತಿ #ದೇವಸ್ಥಾನದಇತಿಹಾಸ #ಶನಿ #ಗ್ರಹ #ದುಷ್ಟಪರಿಣಾಮ #ಪರಶಿವನ #ಪಾರ್ವತಿದೇವಿ #ಮುಕ್ತಿಪಡೆಯಲು #ಭೂಲೋಕ #ತಪಸ್ಸು #ganeshchaturthi #ganeshutsav #ganeshfestival #ganesha🙏 #ganaseguidores #ganapati #ganapath #jaiganesh ಕಮಂಡಲ ಗಣಪತಿ ದೇವಸ್ಥಾನದ ಇತಿಹಾಸ:- ಶ್ರೀ ಶನೀಶ್ವರ ಗ್ರಹದ ದುಷ್ಟ ಪರಿಣಾಮಗಳಿಂದ, ಪರಶಿವನ ಮಡದಿ ಪಾರ್ವತಿ ದೇವಿಯು ಒಮ್ಮೆ ತೊಂದರೆಗೀಡಾದಳು. ಶನಿಯ ಹಿಡಿತದಿಂದ ಮುಕ್ತಿ ಪಡೆಯಲು, ದೇವರುಗಳ ಸಲಹೆಯಂತೆ ಭೂಲೋಕದಲ್ಲಿ ತಪಸ್ಸು ಮಾಡಲು ದೇವಿಯು ನಿರ್ಧರಿಸಿದಳು. ಹೀಗೆ ಅವಳು ನಿರ್ಧರಿಸಿದ ಸ್ಥಳ ಈ ದೇವಾಲಯವಾಗಿದೆ, ತನ್ನ ತಪಸ್ಸಿಗೆ ಇರುವ ಅಡೆತಡೆಗಳನ್ನು ತೆಗೆದುಹಾಕಲು, ಪಾರ್ವತಿ ದೇವಿಯು ಮೊದಲು ಗಣೇಶನಿಗೆ ಪೂಜೆ ಸಲ್ಲಿಸಲು ಬಯಸಿದಳು. ಹೀಗೆ ಪೂಜೆ ಸಲ್ಲಿಸ...