*ವಕೀಲರಿಗೆ ಬೇಷರತ್ತಾಗಿ ಕ್ಷಮೆ ಕೋರಿದ:ಸಂಪಾದಕ ವಿಶ್ವೇಶ್ವರ ಭಟ್ವ*

*ವಕೀಲರಿಗೆ ಬೇಷರತ್ತಾಗಿ ಕ್ಷಮೆ ಕೋರಿದ:ಸಂಪಾದಕ ವಿಶ್ವೇಶ್ವರ ಭಟ್ವ*

 ಕರ್ನಾಟಕ, ಮಾರ್ಚ್ 05 :ಸಂಪಾದಕ ವಿಶ್ವೇಶ್ವರ ಭಟ್ವರು  2012 ರಲ್ಲಿ ನಡೆದ ಬೆಂಗಳೂರಿನ ಸಿಟಿ  ಸಿವಿಲ್ ಕೊರ್ಟ ಆವರಣದಲ್ಲಿ ನಡೆದ ವಕೀಲರ ಹಾಗೂ ಮಾದ್ಯಮವರ ಮದ್ಯ ನಡೆದ ಘಟನೆಯಲ್ಲಿ  ವಕೀಲರನ್ನು ಗುಂಡಾ ಎಂದು ಕರೆದು ಸುದ್ದಿ ಪ್ರಸಾರ ಮಾಡಿದ್ದರು.


 ಇಂದು ಧಾರವಾಡ ವಕೀಲರ ಸಂಘದಲ್ಲಿ ಜರುಗಿದ ಸಭೆಯ ತಿರ್ಮಾನದಂತೆ  ಸುವರ್ಣ ನ್ಯೂಸ್  24×7  ಅಂದಿನ ಸಂಪಾದಕರಾದ ವಿಶ್ವೇಶ್ವರ ಭಟ್ ಹಾಗೂ ಇತರರ ವಿರುದ್ದ  ವಕೀಲರಾದ  ಕೆ.ಎಚ್.ಪಾಟೀಲರವರು ದಾಖಲಿಸಿದ್ದ  ಮಾನಹಾನಿ ಪ್ರಕರದಣಲ್ಲಿ ಇಂದು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆಯುಲು ಬಂದಾಗ ಅರೋಪಿಗಳಿಗೆ ಜಾಮೀನು ನೀಡಲು  ಧಾರವಾಡ ವಕೀಲರ ಸಂಘದವರು  ಪ್ರಬಲ ವಿರೊದ ವ್ಯಕ್ತ ಪಡಿಸಿದರು.

 ಅರೋಪಿತಾರಾದ ವಿಶ್ವೇಶ್ವರ ಭಟ್ ಹಾಗೂ ಸೇಲ್ವ್ ರಾಜ್ ರವರು ಧಾರವಾಡ ಜಿಲ್ಲಾ ನ್ಯಾಯಾಲಯದ ಮುಂದೆ  ನೇರೆದಿದ್ದ ಪತ್ರಕರ್ತರು ಹಾಗೂ ಮಾದ್ಯಮದ  ಮೂಲಕ  ಕರ್ನಾಟಕ  ರಾಜ್ಯದ ಸಮಸ್ತ ವಕೀಲರಿಗೆ ಬೇಷರತ್ತಾಗಿ ಕ್ಷೇಮೆ ಕೊರಿದರು.
 
13‌ ವರ್ಷಗಳ ಸುದೀರ್ಘ ಕಾನೂನು ಹೊರಾಟ ಸುಪ್ರೀಂ ಕೊರ್ಟ ಅಂಗಳಕ್ಕು ತಲುಪಿತ್ತು.
ಹೈಕೋರ್ಟ್ ಹಾಗೂ ಸುಪ್ರೀಂ ಕೊರ್ಟನಲ್ಲಿ  ಪರಭಾವಗೊಂಡಿದ್ದ ಅರೋಪಿತರು ಅನಿವಾರ್ಯವಾಗಿ  ಧಾರವಾಡ ನ್ಯಾಯಾಲಯಕ್ಕೆ ಹಾಜರಾಗಿ ಪ್ರಕರಣ ಎದುರಿಸುವ ಸಂದರ್ಭ ಎದುರಾಗಿತ್ತು.

ಅರೋಪಿತರಾದ ವಿಶ್ವೇಶ್ವರ ಭಟ್ ಹಾಗೂ ಸೇಲ್ವರಾಜರವರು  ಧಾರವಾಡ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ  ಇಂದು ಮಾಧ್ಯಮವರ ಸಮ್ಮುಖದಲ್ಲಿ ಇಡಿ ವಕೀಲರ ಸಮುದಾಯದ   ಕ್ಷೇಮೆ ಕೊರಿದ್ದು ವಕೀಲರ ಕಾನೂನು ಹೋರಾಟಕ್ಕೆ ಸಂದ ಗೆಲುವು. 

ಇನ್ನು ಮುಂದೆ ವಕೀಲರ ಹಾಗೂ ವಕೀಲರ ಸಮುದಾಯದ  ಬಗ್ಗೆ  ಮಾನಹಾನಿಕಾರವಾಗಿ  ಮಾತನಾಡುವವರಿಗೆ ಈ ಪ್ರಕರಣ ಎಚ್ಚರಿಕೆಯ ಗಂಟೆಯಾಗಿದೆ .

 #highcourt #sumprecourt #judgement #judge #Dsla #law #ipc #crpc #act #rules 
 #ವಕೀಲ #ಸುವರ್ಣ #ನ್ಯೂಸ್ #ಮಾಧ್ಯಮ #ಕ್ಷಮೆ #ನ್ಯಾಯಾಲಯ #ಸಿವಿಲ್ #ಕೋರ್ಟ್ #police #crime #station #inspector #constable #accused #arrest #chethana #Riya #riyamshee #Muniswamy #gowda 
https://humanityisagreatreligion.quora.com/?invite_code=dFNHmeBV1JzjWl7eQ7lg
 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ ಉದ್ಯಮ

*ಮೇಕೆ, ಆಡು, ವಾತಾ , ಇವುಗಳ ವ್ಯತ್ಯಾಸ ನಿಮಗೆ ತಿಳಿದಿದೆಯೇ* ?

*ರಾಹುಲ್ ಗಾಂಧಿ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಬೆಂಬಲ ಹಿಂಪಡೆಯಲಿ- ದಿಗ್ವಿಜಯ್ ಸಿಂಗ್ ಸಹೋದರ ಒತ್ತಾಯ*