'ಎಲ್ಲಾ ಸರ್ಕಾರಿ ನೌಕರರೇ ಗಮನಿಸಿ *`ESS’ ಅಪ್ಲೀಕೇಷನ್* ನೋಂದಣಿ ಕಡ್ಡಾಯ'

 'ಎಲ್ಲಾ ಸರ್ಕಾರಿ ನೌಕರರೇ ಗಮನಿಸಿ *`ESS’  ಅಪ್ಲೀಕೇಷನ್*   ನೋಂದಣಿ ಕಡ್ಡಾಯ'

 ಕರ್ನಾಟಕ, ಮಾರ್ಚ್ 02ಎಲ್ಲಾ ಉದ್ಯೋಗಿಗಳು  ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ  ESS’ ಅಪ್ಲೀಕೇಷನ್ ಡೌನ್ಲೋಡ್ ಮಾಡಿಕೊಳ್ಳುವುದರ  ಮೂಲಕ, ತಮ್ಮದೇ ಆದ ಪಾವತಿ ಚೀಟಿ, ರಜೆ ವಿವರಗಳು ಮತ್ತು ಕಡಿತದ ಸಾರಾಂಶವನ್ನು ಮತ್ತು ಇತರೆ ಸೌಲಭ್ಯವನ್ನು ಪಡೆಯುತ್ತಿರುವ ಬಗ್ಗೆ   ವೀಕ್ಷೀಸಬಹುದಾಗಿದೆ.

 ಸರಳೀಕೃತ ESS ಪೋರ್ಟಲ್ ನಿಮ್ಮ ಉದ್ಯೋಗಿಗಳಿಗೆ ಅವರ ಮಾಹಿತಿಯನ್ನು ನಿರ್ವಹಿಸಲು, ಪೇಸ್ಲಿಪ್‌ಗಳನ್ನು ಡೌನ್‌ಲೋಡ್ ಮಾಡಲು, ಸಮಯ-ವಿರಾಮಗಳನ್ನು ವಿನಂತಿಸಲು ಮತ್ತು ಹೆಚ್ಚಿನದನ್ನು ಸಮಯೋಚಿತ ಅಧಿಸೂಚನೆಗಳೊಂದಿಗೆ ಸಕ್ರಿಯಗೊಳಿಸುತ್ತದೆ. ನೈಜ-ಸಮಯದ ಡ್ಯಾಶ್‌ಬೋರ್ಡ್ ಮತ್ತು 24/7 ರಿಮೋಟ್ ಪ್ರವೇಶದೊಂದಿಗೆ ತಮ್ಮ ತಂಡವನ್ನು ನಿರ್ವಹಿಸಲು ನಿಮ್ಮ ಮೇಲ್ವಿಚಾರಕರಿಗೆ ಅಧಿಕಾರ ನೀಡುತ್ತದೆ.


ಆರ್ಥಿಕ ಇಲಾಖೆ ಪತ್ರ ಸಂಖ್ಯೆ: FD-CAM/160/2023 ದಿನಾಂಕ:02/11/2023 ರನ್ವಯ, ಪಿಎಂಜೆಜೆಬಿವೈ ಮತ್ತು ಪಿಎಂಎಸ್‌ಬಿವೈ ವಿಮಾ ವಿವರಗಳನ್ನು ಹೆಚ್‌ಆರ್‌ಎಂಎಸ್‌ ಇಎಸ್‌ಎಸ್‌ ಲಾಗಿನ್‌ https://hrmsess.karnataka.gov.in ನ ಪೋರ್ಟಲ್‌ನಲ್ಲಿ ದಾಖಲಿಸಲು ಸೂಚಿಸಲಾಗಿದೆ.

 ಅದರಂತೆ ಪ್ರತಿ ಸಿಬ್ಬಂದಿಗಳು ಹಾಗೂ ಡಿಡಿಓಗಳು ಈ ಯೋಜನೆಯನ್ನು ಖಚಿತವಾಗಿ ಪಡೆದುಕೊಳ್ಳುವುದು ಹಾಗು ಇಎಸ್‌ಎಸ್‌ ಪೋರ್ಟಲ್‌ನಲ್ಲಿ ಈ ದಾಖಲೆಯನ್ನು ನವೀಕರಿಸುವುದು ಅವರ ಜವಾಬ್ದಾರಿಯಾಗಿರುತ್ತದೆ. 

ಸದರಿ ಪ್ರಗತಿಯನ್ನು ಅಪರ ಮುಖ್ಯ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆರವರು ವೀಕ್ಷಿಸುತ್ತಿರುತ್ತಾರೆ.

 ದಯವಿಟ್ಟು ತಮ್ಮ ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಫಲಾನುಭವಿಗಳನ್ನು ಅಪ್‌ಡೇಟ್‌ ಮಾಡಿದ್ದಲ್ಲಿ ಮಾತ್ರ ಯೋಜನೆಯ ಸದುಪಯೋಗವನ್ನು ಸಿಬ್ಬಂದಿಗಳು ಹಾಗೂ ಅವರ ಕುಟುಂಬವು ಪಡೆಯಬಹುದು.

ಎಲ್ಲಾ ಉದ್ಯೋಗಿಗಳು ESS ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡು, ತಮ್ಮದೇ ಆದ ಪಾವತಿ ಚೀಟಿ, ರಜೆ ವಿವರಗಳು ಮತ್ತು ಕಡಿತದ ಸಾರಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾದ ಸೌಲಭ್ಯವನ್ನು ಪಡೆಯುತ್ತಿರುವ ಬಗ್ಗೆ ಡಿಡಿಓರವರು ಖಚಿತಪಡಿಸಿಕೊಳ್ಳಬೇಕು. ತಮ್ಮ ಎಲ್ಲಾ ಉದ್ಯೋಗಿಗಳು 1ನೇ ಜನವರಿ 2024 ರ ಮೊದಲು ಈ ಪೋರ್ಟಲ್‌ನಲ್ಲಿ ನೋಂದಾಯಿಸಲು ಅನುವು ಮಾಡಿಕೊಡುವ ಜವಾಬ್ದಾರಿ ಡಿಡಿಓರವರದಾಗಿರುತ್ತದೆ

#ess #portal #download #ddo
#hrms #k2 #khajane 
#karnataka #state #jds #bjp #minister #Bengaluru #ರಾಜ್ಯ #ಸಚಿವ #ಜಿಲ್ಲಾಧಿಕಾರಿ #ಅಧಿಕಾರಿ #ಮಂತ್ರಿ #ಸಭೆ #ಕಾರ್ಯಕ್ರಮ #ಅಧ್ಯಕ್ಷ #ಸಮಿತಿ #ಪಂಚಾಯತ್ #ಮಾಧ್ಯಮ #ಒಕ್ಕಲಿಗ #AI #Riya #YOGI #ಆದೇಶ #ಭಾಷೆ #ಚೇತನಾ #ಮುನಿಸ್ವಾಮಿ #ಗೌಡ
https://whatsapp.com/channel/0029VacbYbeCMY0C0whFMu13

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ ಉದ್ಯಮ

*ರಾಹುಲ್ ಗಾಂಧಿ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಬೆಂಬಲ ಹಿಂಪಡೆಯಲಿ- ದಿಗ್ವಿಜಯ್ ಸಿಂಗ್ ಸಹೋದರ ಒತ್ತಾಯ*

*ಮೇಕೆ, ಆಡು, ವಾತಾ , ಇವುಗಳ ವ್ಯತ್ಯಾಸ ನಿಮಗೆ ತಿಳಿದಿದೆಯೇ* ?