ಆದರ್ಶಕ್ಕೆ ಮತ್ತೊಂದು ಹೆಸರು ಡಾ.ವಿಷ್ಣುವರ್ಧನ್- ಚಿತ್ರರಂಗದ ರಾಯಭಾರಿ*


*ಆದರ್ಶಕ್ಕೆ ಮತ್ತೊಂದು ಹೆಸರು

 ಡಾ.ವಿಷ್ಣುವರ್ಧನ್- ಚಿತ್ರರಂಗದ  ರಾಯಭಾರಿ*


ಕರ್ನಾಟಕ, ಏಪ್ರಿಲ್ 25: ಡಾ.ವಿಷ್ಣುವರ್ಧನ್. ಕನ್ನಡ ಚಿತ್ರರಂಗದ ಯಜಮಾನ. ಸಾಂಸ್ಕ್ರತಿಕ ರಾಯಭಾರಿ. ಬದುಕಿದ್ದಷ್ಟು ದಿನ ಯಾರಿಗೂ ನೋವನ್ನ ನೀಡದ ಕರುಣಾಮಯಿ.


#ಕರ್ನಾಟಕ #ಡಾ.#ವಿಷ್ಣುವರ್ಧನ್. #ಕನ್ನಡಚಿತ್ರರಂಗ #ಯಜಮಾನ #ಸಾಂಸ್ಕ್ರತಿಕ #ರಾಯಭಾರಿ  #ಕರುಣಾಮಯಿ #ಸಂಪತ್ #ಕುಮಾರ್ #vishnuvardhan #vishnuvardhansongs #vishnudada_abhimani #vishnu_daada_official #vishnudada #vishnudada😍 
#kannadacinemas #kannadacinema #kannadaactresses😲😲 #kannadaactors #kannadafilmindustry 



  ಇಂದು ಕನ್ನಡದ ಸಿನಿಮಾ ಹಲವು ಭಾಷೆಗಳಲ್ಲಿ ಬಿಡಗಡೆಯಾದರೆ ನಾವು ಅದನ್ನು ಪ್ಯಾನ್ ಇಂಡಿಯಾ ಮೂವಿ ಎನ್ನುತ್ತೇವೆ. ಅದರಂತೆ, ಹಲವು ಭಾಷೆಗಳಲ್ಲಿ ಅಭಿನಯಿಸಿದರೆ ಪ್ಯಾನ್ ಇಂಡಿಯಾ ಸ್ಟಾರ್ ಎನ್ನುತ್ತೇವೆ. ಹಾಗೆ ನೋಡಿದರೆ, ಡಾ ವಿಷ್ಣುವರ್ಧನ್ ಅಂದೇ ಬರೋಬ್ಬರಿ ಐದು ಭಾಷೆಗಳಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಈ ಐದೂ ಭಾಷೆಗಳಲ್ಲಿ ನಟಿಸಿದ್ದಾರೆ. ಆಗ ಈ ಪದ ಪ್ರಯೋಗ ಇರಲಿಲ್ಲ ಅಷ್ಟೇ.

   ರೂಪ, ಅಭಿನಯ, ಸಂಸ್ಕಾರ, ಸಹನೆ, ಸರಳತೆ, ಸಹಿಸುವಿಕೆ, ಕ್ಷಮಿಸುವಿಕೆ ಎಲ್ಲದಕ್ಕೂ ಅತ್ಯುತ್ತಮ ಉದಾಹರಣೆಯೆನ್ನುವಂತಿದ್ದ ವಿಷ್ಣು ಆದರ್ಶಕ್ಕೆ ಮತ್ತೊಂದು ಹೆಸರಾಗಿದ್ದರು.

ಸಂಪತ್ ಕುಮಾರ್ ಎಂಬುದು ಇವರ ಮೊದಲ ಹೆಸರಾಗಿತ್ತು. ಚಿತ್ರರಂಗಕ್ಕೆ ಬಂದ ನಂತರ ಅವರು ವಿಷ್ಣುವರ್ಧನ್ ಎಂದು ಹೆಸರು ಬದಲಾಯಿಸಿಕೊಂಡಿದ್ದರು. ಮೈಸೂರಿನಲ್ಲಿ ಜನಿಸಿದ್ದ ವಿಷ್ಣು 2009ರಲ್ಲಿ ತಮ್ಮ 59ನೇ ವಯಸ್ಸಿನಲ್ಲಿ ನಿಧನರಾದರು.


ತಮ್ಮ 37 ವರ್ಷಗಳ ವೃತ್ತಿಜೀವನದಲ್ಲಿ ಒಟ್ಟೂ 220ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಟ ವಿಷ್ಣುವರ್ಧನ್ ಅವರು ಅತಿ ಹೆಚ್ಚು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 
  ಸಾಹಸಸಿಂಹ ಖ್ಯಾತಿಯ ವಿಷ್ಣುವರ್ಧನ್ ಅವರು ಐದು ಭಾಷೆಗಳಲ್ಲಿ ನಟಿಸಿರುವ ಚಿತ್ರಗಳು ಯಾವವು ಗೊತ್ತೇ?

1ತಮಿಳು ಚಿತ್ರಗಳು:-
ಅಲೈಗಳ್ (1973)
ಮಝೂಲೈ ಪಟ್ಟಾಲಂ (1980)
ಇಯೆಟ್ಟಿ (1985)
ಶ್ರೀ ರಾಘವೇಂದ್ರ (1985)
ವಿದುತಲೈ (1986)
ಪರುವರಾಗಂ (1987)

3. ಹಿಂದಿ ಚಿತ್ರಗಳು:-
ಈಕ್ ನಯಾ ಇತಿಹಾಸ್ (1981)
ಇನ್ಸ್‌ಪೆಕ್ಟರ್ ಧನುಷ್ (1991)
ಅಶಾಂತ್ (1993)
ಝೂಲಿಮ್ (1994)

4. ತೆಲುಗು ಚಿತ್ರಗಳು:+
ಸರ್ದಾರ್ ಧರ್ಮಣ್ಣ (1987)
ಒಕ್ಕಡು ಚಾಲು (2000)

5. ಮಲಯಾಳಂ ಚಿತ್ರಗಳು:-
ಅದಿಮಾ ಚಂಗಾಲ (1981)
ಕೌರವರ್ (1992)

 ಚಿತ್ರರಂಗಕ್ಕೆ ಅದ್ಭುತ ಸಿನಿಮಾಗಳನ್ನು ನೀಡಿರುವ ವಿಷ್ಣುವರ್ಧನ್ ಅವರ ನಟನೆಗೆ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

 ಗಾಯಕರೂ ಆಗಿದ್ದ ವಿಷ್ಣುವರ್ಧನ್ ಅವರು ತತ್ವಜ್ಞಾನಿಯೂ ಆಗಿದ್ದರು, ಅನೇಕರಿಗೆ ಮಾರ್ಗದರ್ಶನ ಕೂಡ ಮಾಡುತ್ತಿದ್ದರು.

ಬೆಂಗಳೂರು ವಿಶ್ವವಿದ್ಯಾಲಯ ವಿಷ್ಣುವರ್ಧನ್ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
#Okkaliga #gowda #Vokkaliga #ಮಂಡ್ಯ #ಊರು #ಪುರ #ನಗರ #ಕೃಷಿ #book #Muniswamy #Riya #YOGI #ಚೇತನಾ #ಆದಿಚುಂಚನಗಿರಿ #ಬಾಲಗಂಗಾಧರ #ನಿರ್ಮಲಾನಂದನಾಥ #ಕುವೆಂಪು #ವಚನ #ದಾಸ #AI #bgs #ದಾಸ #Dasaokkaliga



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ ಉದ್ಯಮ

*ರಾಹುಲ್ ಗಾಂಧಿ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಬೆಂಬಲ ಹಿಂಪಡೆಯಲಿ- ದಿಗ್ವಿಜಯ್ ಸಿಂಗ್ ಸಹೋದರ ಒತ್ತಾಯ*

ಕಳ್ಳತನವಾದ100 ದ್ವಿಚಕ್ರ ವಾಹನಗಳು ಪತ್ತೆ :ಆಯುಕ್ತ ದಯಾನಂದ*