*ಅದ್ಬುತವಾದ ಹಸಿರು ಲಿಂಕ್ಸ್ ಜೇಡಗಳು ಮತ್ತು ಮಾನವರು*
*ಅದ್ಬುತವಾದ ಹಸಿರು ಲಿಂಕ್ಸ್ ಜೇಡಗಳು ಮತ್ತು ಮಾನವರು*
ಹಸಿರು ಲಿಂಕ್ಸ್ ಜೇಡವು ಮನುಷ್ಯರನ್ನು ಬಹಳ ವಿರಳವಾಗಿ ಕಚ್ಚುತ್ತದೆ, ಮತ್ತು ಅದು ಹಾಗೆ ಮಾಡಿದಾಗ, ಅದರ ವಿಷಕಾರಿ ಕಡಿತವು ನೋವಿನಿಂದ ಕೂಡಿದ್ದರೂ, ಜೀವ ಹಾನಿ ಆಗುವಷ್ಟು ಮಾರಕವಲ್ಲ
#These #spiders #brightgreen #white #redmarkings #onthebody #legsarecovered #largebristles #mostlikely #helpsthem #catchandkeep #eyesight #unique #arrangements #8eyes #hexagonalpattern #smallereyes
ಜೇಡಗಳು ಬಹುತೇಕ ಸ್ಥಳಗಳಲ್ಲಿ ಕಂಡುಬರುತ್ತದೆ, ಮಾನವರ ಇರುವಂತಹ ಸ್ಥಳಗಳಲ್ಲಿ ಕಂಡುಬರುವಂತಹ ಜೇಡಗಳಲ್ಲಿ ಸುಂದರವಾದ ಹಸಿರು ಲಿಂಕ್ಸ್ ಜೇಡ (ಪ್ಯೂಸೆಟಿಯಾ ವಿರಿಡಾನ್ಸ್) ಒಂದಾಗಿದೆ, ಲಿಂಕ್ಸ್ ಸ್ಪೈಡರ್ ಕುಟುಂಬದಲ್ಲಿನ 350 ಅಥವಾ ಅದಕ್ಕಿಂತ ಹೆಚ್ಚು ಜಾತಿಗಳು ಕಂಡು ಬರುತ್ತವೆ , ಇವುಗಳು ಹೆಚ್ಚಾಗಿ ಉಷ್ಣವಲಯದಲ್ಲಿವೆ .
ಅತ್ಯಂತ ಆಕರ್ಷಕ ಆವಿಷ್ಕಾರಗಳಲ್ಲಿ ಒಂದು ಸಾಕಷ್ಟು ದೊಡ್ಡದಾದ, ಹಸಿರು ಜೇಡ (ಮುಂಭಾಗದಿಂದ ಹಿಂಭಾಗದ ಪಾದಗಳು 1¼ ಇಂಚುಗಳು, 3.2 ಸೆಂ.ಮೀ.) ಇವುಗಳನ್ನು ಹಸಿರು ಲಿಂಕ್ಸ್, ಪ್ಯೂಸೆಟಿಯಾ ವಿರಿಡಾನ್ಸ್ ಎಂದು ಕರೆಯಲ್ಪಡುತ್ತದೆ, ಇವು ಬಲೆಗಳನ್ನು ನಿರ್ಮೀಸುವುದಿಲ್ಲ ಬದಲಾಗಿ, ಸಸ್ಯವರ್ಗದ ಮೇಲೆ ಸುತ್ತಾಡುತ್ತವೆ ಅಥವಾ ಕಾಯುತ್ತಾ ಮಲಗಿ ಬೇಟೆಯ ಮೇಲೆ ಹಾರುತ್ತವೆ.
ಇದು ತುಂಬಾ ಅದ್ಭುತವಾದ ಜೇಡವಾಗಿದ್ದು,
ಹಸಿರು ಲಿಂಕ್ಸ್ಗಳು ಜಾಲಗಳನ್ನು ನಿರ್ಮಿಸದಿದ್ದರೂ, ರೇಷ್ಮೆಯನ್ನು ಉತ್ಪಾದಿಸುತ್ತವೆ, ಆದರೆ ಅವು ಬೇಟೆಯಾಡುವಾಗ ಅದನ್ನು ಡ್ರ್ಯಾಗ್ಲೈನ್ಗಳಾಗಿ ಬಳಸುತ್ತವೆ - ಆದ್ದರಿಂದ ಅವು ಎಲೆಯಿಂದ ಬಿದ್ದರೆ, ಅವು ತಮ್ಮ ಡ್ರ್ಯಾಗ್ಲೈನ್ನ ಕೊನೆಯಲ್ಲಿ ನೇತಾಡುತ್ತವೆ ಮತ್ತು ಬೇಗನೆ ತಮ್ಮ ಸ್ಥಾನಕ್ಕೆ ಮರಳಬಹುದು.
ಅವು ಆಹಾರವನ್ನು ಬೇಟೆಯನ್ನು ಹಿಡಿಯಲು ತನ್ನ ಬಲೆ ಬಳಸುವುದಿಲ್ಲ, ಬದಲಾಗಿ ಹೊಂಚು ಹಾಕಿ ದಾಳಿ ಮಾಡುತ್ತದೆ .
ಬೇಟೆಗಾರರು - ಇದು ಸೂರ್ಯಕಾಂತಿ, ತುಳಸಿ ಮೋದಲಾದ ಹಸಿರು ಸಸ್ಯಗಳ ಮೇಲೆ ನೇತಾಡುತ್ತಾ ಭೇಟಿ ನೀಡುವ ಕೀಟಗಳಿಗಾಗಿ ಕಾಯುತ್ತಿರುತ್ತದೆ.
ವಿಶೇಷವಾಗಿ ಹೆಣ್ಣು ಜೇಡಗಳು ಸಾಕಷ್ಟು ದೊಡ್ಡದಾಗಬಹುದು, ದೇಹದ ಉದ್ದದಲ್ಲಿ ಒಂದು ಇಂಚಿನವರೆಗೆ, ಆದರೆ ಆ ಗಾತ್ರದಲ್ಲಿಯೂ ಸಹ ದೊಡ್ಡವು, ಅವು ಹಸಿರು ಬಣ್ಣದಲ್ಲಿರುವ ಕಾರಣ , ಹಸಿರಿನ ಮೇಲೆ ಅವುಗಳ ದೊಡ್ಡ ಮರೆಮಾಚುವಿಕೆ ಅವುಗಳನ್ನು ಗುರುತಿಸುವುದು ಕಷ್ಟಕರವಾಗಿಸುತ್ತದೆ.
ಹೆಣ್ಣು ಜೇಡಗಳು ಪ್ರತಿ ವರ್ಷ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮಾಹೆಗಳಲ್ಲಿ ಒಂದರಿಂದ ಐದು 2-ಸೆಂಟಿಮೀಟರ್ (0.8 ಇಂಚು) ಮೊಟ್ಟೆಯ ಚೀಲಗಳನ್ನು ನಿರ್ಮಿಸುತ್ತದೆ, ಇಂತಹ ಪ್ರತಿಯೊಂದೂ ಚೀಲಗಳು 25 ರಿಂದ 600 ಪ್ರಕಾಶಮಾನವಾದ ಕಿತ್ತಳೆ ಮೊಟ್ಟೆಗಳನ್ನು ಹೊಂದಿರುತ್ತದೆ, ಅವುಗಳನ್ನು ತಾಯಿ ಜೇಡವು ರಕ್ಷಿಸುತ್ತಾಳೆ.
ಗಮನಾರ್ಹವಾಗಿ, ಅದರ ರಕ್ಷಣಾ ವಿಧಾನವೆಂದರೆ ಅದರ ಚೆಲಿಸೆರಾದಿಂದ ವಿಷವನ್ನು ಚಿಮ್ಮುವುದು (ಉಗುಳುವುದು) , ಕೆಲವೊಮ್ಮೆ ಸುಮಾರು ಒಂದು ಅಡಿ (300 ಮಿಮೀ) ದೂರದವರೆಗೆ ಉಗುಳುತ್ತದೆ.
ಮೊಟ್ಟೆಯ ಚೀಲಗಳು ರೇಷ್ಮೆಯಿಂದ ಮಾಡಲ್ಪಟ್ಟಿದೆ ಮತ್ತು ಮೊಟ್ಟೆಯ ಚೀಲಗಳನ್ನು ಸಸ್ಯಗಳಿಗೆ ಲಂಗರು ಹಾಕಲು ರೇಷ್ಮೆಯನ್ನು ಬಳಸಲಾಗುತ್ತದೆ. ನಂತರ ಹೆಣ್ಣು ಮೊಟ್ಟೆಯ ಚೀಲವನ್ನು ಕಾಪಾಡುತ್ತದೆ.
ಸುಮಾರು ಎರಡು ವಾರಗಳ ನಂತರ ಈ ಚೀಲಗಳಿಂದ ಮೊಟ್ಟೆಗಳಿಂದ ಹೊರಬರುತ್ತವೆ, ನಂತರದ ಎರಡು ವಾರಗಳ ನಂತರ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಜೇಡಗಳ ಮರಿಗಳು ಚೀಲದಿಂದ ಹೊರಬರುತ್ತವೆ. ಅವು ಪ್ರೌಢಾವಸ್ಥೆಯನ್ನು ತಲುಪಲು ಎಂಟು ಹಂತಗಳ ಮೂಲಕ ಹಾದು ಹೋಗುತ್ತವೆ .
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏