_ ಸಾಗಿಬಾರಯ್ಯ ಭವರೋಗದ ವೈದ್ಯನೆ _ ,_ಶ್ರೀ ವಿಜಯದಾಸರ ರಚನೆ ,

_ ಸಾಗಿಬಾರಯ್ಯ ಭವರೋಗದ ವೈದ್ಯನೆ _ ,_ಶ್ರೀ ವಿಜಯದಾಸರ ರಚನೆ , _ರಾಗ ಸಾವೇರಿ , ಆದಿತಾಳ.mp3

#ಸಾಗಿಬಾರಯ್ಯ #ಭವರೋಗದ #ವೈದ್ಯನೆ _ ,_ಶ್ರೀ #ವಿಜಯದಾಸರರಚನೆ , _#ರಾಗ #ಸಾವೇರಿ , #ಆದಿತಾಳ #mp3



ವಿಜಯದಾಸಾರ್ಯ ವಿರಚಿತ* 

*ಕದರಿ ಮಹಾತ್ಮೆ ಸುಳಾದಿ* 

*ರಾಗ ಸಿಂಧುಭೈರವಿ* 

*ಧ್ರುವತಾಳ* 

ಜಗದೊಳಗಿದಕೆಲ್ಲಿ ಮಿಗಿಲುಗಾಣೆನೊ ಸರ್ಪ |
ನಗದ ಪ್ರದೇಶ ಇದರ ಅಗಲಾ ಸುತ್ತ ಯೋಜನ |
ಯುಗಯುಗದಲ್ಲಿ ಯಾತ್ರೆಗಳ ಮಾಡಿದ ಪುಣ್ಯ |
ಹಗಲೊಂದು ಕ್ಷಣವಿಲ್ಲಿ ಸುಗುಣನಾಗಿ ಇರಲು |
ಅಗಣಿತದಲ್ಲಿ ಭಕ್ತಗೆ ತಂದು ಕೊಡುವದೂ |
ನಿಗಮಾಸನ್ನುತ ಹರಿ ಮೊಗನ ಹಗೆಗಳಿಗಿಲ್ಲ |
ಖಗರಾಜಾನಿಲ್ಲಿ ತಪಸಿಗನಾಗಿ ಕೃಷ್ಣನ |
ಹೆಗಲಲ್ಲಿ ಪೊತ್ತು ತಿರಗುವ ವರವನ್ನು ಪಡೆದು |
ಪೊಗಳಿದ ಜನ ಕಣ್ಣಿಗೆ ಸುಳಿವ ಸುಲಭಾ ನರ - |
ಮೃಗರೂಪ *ವಿಜಯವಿಠ್ಠಲಾ* ಕದರಿನಿವಾಸ |
ಬಗೆಬಗೆಯಿಂದ ಚನ್ನಿಗನಾಗಿ ಮೆರೆವ ॥ 1 ॥

*ಮಟ್ಟತಾಳ* 

ಪ್ರಹ್ಲಾದಗೆ ಮೆಚ್ಚಿ ಶ್ರೀಹರಿ ಉದುಭವಿಸಿ |
ಅಹಿತ ದಿತಿಸುತನ ಆವಹದೊಳು ಕೊಂದು |
ಸಾಹಸವುಳ್ಳ ಸುರರ ದಾಹನ ಮಾಡುವೆನೆಂದು |
ಅಹೋಬಲದಿಂದ ಈ ಮಹಿಯೊಳಗೆ ಸ್ತೋತ್ರ |
ಮಹಿಧರಕೆ ಬಂದು ವಹಿಲದಲ್ಲಿ ಕೆಡಹಿ
ಖಳರ ಕೊಂದೂ ಗಹಗಹಿಸಲು 
ವಾರಿರುಹ ಭವಬಂದು ಬಿನ್ನಾಹ ಮಾಡುತಿರಲು ಬಹು ಮಹಿಮನಾದ *ವಿಜಯವಿಠ್ಠಲರೇಯಾ* |
ಮಹ ಸಂತೋಷದಲಿ ಬಾಹುಬಲದಿ ಮೆರೆದಾ ॥ 2 ॥

*ತ್ರಿವಿಡಿತಾಳ* 

ಈ ತೆರದಲಿ ಇಲ್ಲಿ ನರಹರಿ ಇರುತಿರೆ |
ಶ್ವೇತ ಮುನೇಶ್ವರ ಬಂದು ವೇಗ |
ತಾ ತಪವನೆ ಮಾಡಿ ಚಿತ್ತ ನಿರ್ಮಳದಲ್ಲಿ |
ಖ್ಯಾತ ಪಡೆದ ವರವಿನಿಂದ |
ಭೂತಳದೊಳಗಿದ್ದು ಅಂದಾರಭ್ಯವಾಗಿ |
ಶ್ವೇತಾರಣ್ಯ ಕಾಣೊ ನಾಮದಲ್ಲೀ |
ಭೀತಿಯಿಂದಲಿ ಭೃಗುನು ಇಲ್ಲಿ ತಪವನೆ ಮಾಡಿ |
ಪಾತಕ ಪರಿಹಾರ ಮಾಡಿಕೊಂಡ |
ಶ್ವೇತವಾಹನನಂದು ಯಾತ್ರಿ ಮಾಡುವಾಗ |
ನೀತಿಯಿಂದಲಿ ಇಲ್ಲೆ ಶುದ್ಧನಾದ |
ಭೂತಾಧಿಪನೆ ಬಲ್ಲ ಇದರ ಮಹಿಮೆಯನ್ನು |
ಪ್ರೀತಿಯಿಂದಲಿ ನಾರದಗರುಹಿದ |
ಮಾತುಳವೈರಿ ಸಿರಿ *ವಿಜಯವಿಠ್ಠಲ* ಮಾಂ - |
ಧಾತಾನಿಂದಲಿ ಪೂಜೆಗೊಂಡು ವರವನಿತ್ತ ॥ 3 ॥

*ಅಟ್ಟತಾಳ* 

ಶ್ವೇತ ಪುಷ್ಕರಣಿಯು ಭವನಾಶಿ ಭೃಗುತೀರ್ಥ |
ಶ್ವೇತವಾಹನ ವಶಿಷ್ಟ ನಾರದತೀರ್ಥ |
ಧಾತಾ ನರಸಿಂಗ ಇಂದ್ರಾದ್ಯಷ್ಟತೀರ್ಥ |
ಪಾತಕಹರ ಋಣಮೋಚನತೀರ್ಥ ಮ - |
ಹಾತಿಶಯವುಳ್ಳ ರಾಮ ಶಂಖಾಚಕ್ರ |
ಶ್ವೇತ ನಾನಾ ಚಂದ್ರ ಸೂರ್ಯತೀರ್ಥ |
ಅಷ್ಟೋತ್ತರ ತೀರ್ಥಗಳಲ್ಲಿ ಉಂಟು ಶು - |
ದ್ಧಾತುಮಾ ಬಂದೊಂದು ಮಜ್ಜನಮಾಡಲು |
ಜ್ಞಾತಿಗಳ ಕೂಡ ಸದ್ಗತಿ ಐದುವ |
ವಾತಾವಿನುತ ಸ್ವಾಮಿ *ವಿಜಯವಿಠ್ಠಲರೇಯಾ* |
ಮಾತೂಮಾತಿಗೆ ನೆನಿಸೆ ಒಲಿದು ಸಂಗಡ ಬಪ್ಪ ॥ 4 ॥

*ಆದಿತಾಳ* 

ಅರ್ಜುನ ನದಿಯಲ್ಲಿ ಸಜ್ಜನರ ಕೂಡ |
ಮಜ್ಜನವನ್ನು ಮಾಡಿ ಹೆಜ್ಜಿಹೆಜ್ಜಿಗೆ ನಿ - |
ರ್ಲಜ್ಯರಾಗಿ ಹರಿಯಾ ಗರ್ಜನೆಯಲಿ ನುಡಿದು |
ಮೂರ್ಜಗದೊಳು ಬಲು ಪೂಜ್ಯವಂತರಾಗಿ |
ಅರ್ಜುನ ಮರದೆಡಿಯಾ ಇಪ್ಪ *ವಿಜಯವಿಠ್ಠಲ* |
ನಿರ್ಜರಾಗಣದೊಡನೆ ಪಾಲಿಸುವಾ ಫಲವರಿತು ॥ 5 ॥

*ಜತೆ* 

ಖಾದ್ರಿ ಪುರಾನಿಲಯಾ ನರಶಿಂಗಾ ಭವಭಂಗ |
ಭದ್ರಾ ಮೂರುತಿ ಜನಾರ್ದನ *ವಿಜಯವಿಠ್ಠಲಾ* 

: ಶುಭ ದಿನ. ಆನಂದಮಯವಾಗಿರಲಿ ಈ ದಿನ.
ಮಾಸ ನಿಯಾಮಕ ಶ್ರೀ ಶ್ರೀಪದ್ಮಾ ಗೋವಿಂದ
ವಾರ ನಿಯಾಮಕ (ಸೋಮವಾರ) ಶ್ರೀ ಲಕ್ಷ್ಮೀ ನರಸಿಂಹ ದೇವರ ಅನುಗ್ರಹ ನಿಮ್ಮ ಹಾಗೂ ನಿಮ್ಮ ಕುಟುಂಬದ ಎಲ್ಲ ಸದಸ್ಯರ ಮೇಲಿರಲಿ

ನರಸಿಂಹ ವಜ್ರಸಿಂಹ
ಸರಸಿಜನಾಭಾ ದಕ್ಷಿಣ ಶರಾಧಿನಿವಾಸಾ ll ಪ ll

ಹಿರಣ್ಯಕಶ್ಯಪು ತಾ ಪ್ರಹ್ಲಾದನಾ ಬಾಧಿಸಲು
ಪರಿಯ ದೈವವೆ ಮೊರೆಹೋಗಲೂ
ಹಿರಿದಾಗಿ ಕೇಳಿ ಹಿತದಲಿ ಬಂದು ಬೊಬ್ಬಿಡಲು 
ಹಿರಣ್ಯಗರ್ಭಾದಿಗಳು ಹಿರಿದು ಚಿಂತಿಸಲೂ ll 1 ll

ಭುಗಿಲೆನೆ ಧಿಗಿಲೆನೆ ದಿಕ್ಕಿನೆಲಿ ಪ್ರತಿ ಶಬ್ದ ಪುಟ್ಟುತಿರೆ
ಪಗಲಿರುಳು ಒಂದೆಂದರು ಸಕಲರು
ಝಗಝಗಿಪ ಬೆಳಗು ಕವಿದದು ಮೂರು ಲೋಕಕ್ಕೆ
ಉಗುರು ಕೊನೆ ಪೊಗಳಿ ವೇದಗಳು ಬೆರಗಾಗಿ ll 2 ll

ರಕ್ಕಸ ನೋಡಲು ಬಗೆದು#Assistant #KSGE #DIPR #YOGi #Government #Employee #fda #sda #clark #sad #dd #ad #jd #Working #Department #information #public #relations #dc #ac #sp
#Commissioner #yogeshagowda #gowda #grade #GovernmentEmployee ಕರುಳು ಕೊರಳಿಗೆ ಮಾಲೆ
ಇಕ್ಕಿ ಭಕ್ತಗೆ ಮೆಚ್ಚಿ ವರವನಿತ್ತಾ
ಕಕ್ಕಸದ ದೈವ ಅನಂತ ಪದುಮನಾಭ
ಮುಕ್ತಿದಾಯಕ ವಿಜಯವಿಠಲ ಮಹದಾ ll 3 ll

ಗುರುಗಳೇ

ಶ್ರುತಿತತಿಗೆ ದೂರ ಉನ್ನತಲೀಲ ಸಾಕಾರ ।
ಸತತ ಭಕ್ತರಾಧಾರ ಅಪ್ರಾಕೃತಶರೀರ ॥
ಯತಿಗಳ ಮನೋಹರ ಮತಿಗೆ ಅಗೋಚರ ।
ಪತಿತಪಾವನ ಸಿರಿಪತಿ *ವಿಜಯವಿಠ್ಠಲನ* ॥ 3 ॥




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ