_ ದುರಿತವನಕುಠಾರಿ ದುರ್ಜನ ಕುಲವೈರಿ _ ,_ _ಶ್ರೀಲಕ್ಷ್ಮೀನೃಸಿಂಹ ಸುಳಾದಿ_ ,_ಶ್ರೀ ಜಗನ್ನಾಥದಾಸರ ರಚನೆ , ರಾಗ ನಾಟ
_ ದುರಿತವನಕುಠಾರಿ ದುರ್ಜನ ಕುಲವೈರಿ _ ,_ _ಶ್ರೀಲಕ್ಷ್ಮೀನೃಸಿಂಹ ಸುಳಾದಿ_ ,_ಶ್ರೀ ಜಗನ್ನಾಥದಾಸರ ರಚನೆ ,
#ದುರಿತವನಕುಠಾರಿ #ದುರ್ಜನ #ಕುಲವೈರಿ #ಶ್ರೀಲಕ್ಷ್ಮೀನೃಸಿಂಹ #ಸುಳಾದಿ #ಶ್ರೀ #ಜಗನ್ನಾಥದಾಸರ #ರಚನೆ , #ರಾಗನಾಟ
ಏನ್ ಆಶ್ಚರ್ಯ ಪಢರಪುರದ ಗರ್ಭಗುಡಿಗೆ ಪರದೆ ಹಾಕಿಕೊಂಡಿತು - ಶ್ರೀ ವಿಜಯದಾಸರ ಪವಾಡ
ಒಮ್ಮೆ ಶ್ರೀ ವಿಜಯದಾಸಪ್ರಭುಗಳು ಚೀಕಲಪರವಿಯಲ್ಲಿ ಇದ್ದಾರೆ.ಆಗ ಪಂಢರಪುರ ದಲ್ಲಿ ಆಷಾಢ ಶುದ್ದ ಏಕಾದಶಿಯ ಕಾಲ. ಅಂದು ವಿಠ್ಠಲನ ಉತ್ಸವ ಅಲ್ಲಿ ವಿಜ್ರಂಭಣೆಯಿಂದ ನಡೆಯುತ್ತಿದೆ.
ಆದರೆ ಕೆಲವು ಶಿಷ್ಯರು ಶ್ರೀ ವಿಜಯ ಪ್ರಭುಗಳ ಜೊತೆಯಲ್ಲಿ ಚೀಕಲಪರವಿಯಲ್ಲಿ ಇದ್ದಾರೆ.
ಕೆಲವರು ಪಂಢರಾಪುರಕ್ಕೆ ವಿಜಯ ದಾಸರ ಅಪ್ಪಣೆ ಪಡೆದು ಹೋಗಿದ್ದಾರೆ.
*ಶ್ರೀ ಶ್ರೀಪಾದರಾಜರು ಪ್ರತಿಷ್ಠಿತ ಅಶ್ವತ್ಥ ಶ್ರೀ ನರಸಿಂಹ ದೇವರ ಕಟ್ಟಿಇರುವ ಚೀಕಲಪರ್ವಿಯಲ್ಲಿನ ಕೆಲ ಶಿಷ್ಯರು , ನಾವು ಸಹ ಪಂಢರಾಪುರಕ್ಕೆ ಹೋಗಿದ್ದರೆ ಶ್ರೀಪಾಂಡುರಂಗದೇವರ ದರುಶನ ಆಗುತ್ತಾ ಇತ್ತು .ಆಗಲಿಲ್ಲವಲ್ಲ ಅಂತ ಮನದೊಳಗೆ ಭಕ್ತಿಯಿಂದ ಪೇಚಾಡಿ ಕೊರಗುತ್ತಾ ಇದ್ದಾರೆ.
ಆದರೆ ಅವರೆಲ್ಲರೂ ಮನದೊಳಗೆ ಹೋಗಬೇಕು ಅಂದು ಕೊಂಡಿದ್ದು ಗುರು ವಿಜಯದಾಸರ ಅರಿವಿ ಬಂದಿತ್ತು.
ತಕ್ಷಣ ನಮ್ಮ ಶ್ರೀವಿಜಯಪ್ರಭುಗಳು ತಮ್ಮ ಶಿಷ್ಯ ವೃಂದವನ್ನು ಕುರಿತು ನೀವೆಲ್ಲರು ಮುಸುಕು ಹಾಕಿಕೊಳ್ಳಿರಿ ಎಂದರು.
*ತಕ್ಷಣ ಎಲ್ಲಾರು ಗುರುಗಳು ಆದೇಶದಂತೆ ತಮ್ಮ ಮೋರೆಗೆ ಮುಸುಕು ಹಾಕಿಕೊಂಡರು.ಅದೇ ಕಾಲದಲ್ಲಿ ದೂರದ ಪಂಢರಪುರದ ಗರ್ಭಗುಡಿಯಲ್ಲಿ ಪರದೆ ಹಾಕಿತ್ತು .ಕಾರಣಾಂತರಗಳಿಂದ ಎಷ್ಟು ಹೊತ್ತು ಆದರು, ಅಲ್ಲಿ ಹೋಗಿದ್ದ ದಾಸರ ಶಿಷ್ಯರಿಗೆ ಮತ್ತು ಭಕ್ತರಿಗೆ ಶ್ರೀಪಾಂಡುರಂಗನ ದರುಶನ ಆಗಲೇ ಇಲ್ಲ.
*ಉತ್ಸವ ಕಾಲದಲ್ಲಿ ಶ್ರೀ ವಿಜಯದಾಸರು ಪಂಡರಾಪುರಕ್ಕೆ ತಮ್ಮ ಯೋಗ ಶಕ್ತಿ ಇಂದ ಹೋದರು
ಮತ್ತು ಅದೇ ಸಮಯದಲ್ಲಿ ಚೀಕಲಪರವಿಯಲ್ಲಿ ಸಹ ಇದ್ದರು. ಎರಡು ಕಡೆ ಅವರು ತಮ್ಮ ತಪಸ್ಸು ಶಕ್ತಿ ಇಂದು ಇದ್ದರು.
ಶ್ರೀ ಮೋಹನ ದಾಸರ ಕರೆತರಲು ಯಮನಪುರಕ್ಕೆ ಹೋದವರಿಗೆ ಪಂಢರಪುರಕ್ಕೆ ಹೋಗುವದು ಅಸಾಧ್ಯವೇ ಅಲ್ಲ
*ಶ್ರೀ ವಿಜಯಪ್ರಭುಗಳು ವಿಠ್ಠಲ ನ ಮುಂದೆ ನಿಂತು ಅಲ್ಲಿ ಪಾಂಡುರಂಗನ ನಾನಾ ವಿಧವಾದ ಸ್ತೋತ್ರ ಮಾಡಲು ಹಾಕಿದ ಪರದೆಯು ತನ್ನಿಂದ ತಾನೇ ಇದ್ದಕ್ಕಿದ್ದಂತೆ ಪರದೆ ತೆರೆಯಿತು.
ಜನ ನೋಡುತ್ತಾರೆ. ಶ್ರೀವಿಜಯಪ್ರಭುಗಳಿಗೆ ಶ್ರೀಪಾಂಡುರಂಗನು ದರುಶನ ಕೊಡುತ್ತಿದ್ದಾನೆ.
ದಾಸರು ತಮ್ಮ ಶಿಷ್ಯರಿಗೆ ಸಹ ಆ ಸಂದರ್ಶನ ಆನಂದವನ್ನು ದಾಸರು ಮಾಡಿಸಿದ್ದರು..*.
ಹಿಡಿಸಲಾರದ ಆನಂದ ಅವರ ಶಿಷ್ಯ ವೃಂದಕ್ಕೆಲ್ಲರಿಗು
ಆಯಿತು.ಹಿಡಿಸಲಾರದ ಆನಂದ ಅವರ ಶಿಷ್ಯ ವೃಂದಕ್ಕೆಲ್ಲರಿಗು..
ಅದೇ ಸಮಯದಲ್ಲಿ ಚೀಕಲಪರವಿಯಲ್ಲಿ ಇದ್ದ ದಾಸರು ತಮ್ಮ ಶಿಷ್ಯರಿಗೆ "ತೆಗೆಯಿರಿ ಮುಸುಕು"* ಎಂದೆನ್ನಲು ಅಂಗದ ಮುಸುಕು ತೆರೆಯಲು ಭಕ್ತರು ಕಂಡಿದ್ದು ಶ್ರೀ ಅಶ್ವತ್ಥ ನರಸಿಂಹ ದೇವರರಿರುವಲ್ಲಿ ಕಂಡಿದ್ದು. ಆ ಪುಂಡಲೀಕ ವರದನಾದ ಪಾಂಡುರಂಗನ ದಿವ್ಯ ಮೂರುತಿಯನ್ನು".. ಆಬ್ಬಾಬ್ಬ ದಾಸರ ಲೀಲೆ ಆನಂತ.
* ದಾಸರಿಗೆ ಯಾವುದು ಅಸಾಧ್ಯ.*
ಇದನ್ನು ಶ್ರೀ ಭಾಗಣ್ಣದಾಸರು ತಮ್ಮ ಕೃತಿಯಲ್ಲಿ ವರ್ಣನೆ ಮಾಡುತ್ತಾರೆ.
*ಅಂಗದ ಮುಸುಕು ತೆಗದನೋ ಕ್ಷೇತ್ರದಿ ಪಾಂಡುರಂಗ| ವಿಜಯರಾಯ||*
*|ವಿ|* ಎಂದು ನುಡಿಯಲು *ವಿಷ್ಣು ದಾಸನಾಗುವನು*
*|ಜ|* *ಯೆನಲು ಜನನ ಹಾನಿ*
*|ಯ|* ಎಂದು ಕೊಂಡಾಡೆ *ಯಮ ಭಟರು ವೋಡುವರು*.
*|ರಾಯ|*
*ಎಂದೆನಲು ಹರಿ ಕಾವ ವರವೀವ..*.
.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏