ಕಠೋಪನಿಷತ್ತು
*ಕಠೋಪನಿಷತ್ತು ನಚಿಕೇತ ಮತ್ತು ಯಮರ ನಡುವಿನ ಸಂವಾದದ ರೂಪದಲ್ಲಿದೆ* #ಕಠೋಪನಿಷತ್ #ಸಹ #KatopanishadClass
ಸಹ ನಾವವತು । ಸಹ ನೌ ಭುನಕ್ತು । ಸಹ ವೀರ್ಯಂ ಕರವಾವಹೈ । ಇದು ಕಠೋಪನಿಷತ್ತು ನಲ್ಲಿರುವ ಮಂತ್ರ ವಾಗಿದೆ.
https://youtu.be/VZ_VqiFXOu0?si=rnO2f3hXWoPuWE1F
ಕಠೋಪನಿಷತ್ತು , ಧರ್ಮದ ಒಂದು ಪ್ರಮುಖ ಉಪನಿಷತ್ತು. ಇದು ಕೃಷ್ಣ ಯಜುರ್ವೇದಕ್ಕೆ ಸೇರಿದೆ. ಈ ಉಪನಿಷತ್ತು ನಚಿಕೇತ ಮತ್ತು ಯಮರ ನಡುವಿನ ಸಂವಾದದ ರೂಪದಲ್ಲಿದೆ. ಇದರಲ್ಲಿ ಆತ್ಮ, ಪುನರ್ಜನ್ಮ, ಮೋಕ್ಷ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ.
#brahmananda #bharati #Facebook #ನಿತ್ಯಸತ್ಯ #ಕಠೋಪನಿಷದ್ #Katopanishad #YouTube #SAMARTHA PRABODHA
ಕಠೋಪನಿಷತ್ತು ಆತ್ಮದ ಸ್ವರೂಪವನ್ನು ಅರಿಯಲು ಮತ್ತು ಜೀವನದ ಗುರಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಕಠೋಪನಿಷತ್ತು ಎರಡು ಅಧ್ಯಾಯಗಳನ್ನು ಹೊಂದಿದೆ, ಪ್ರತಿಯೊಂದೂ ಮೂರು ಭಾಗಗಳನ್ನು ಹೊಂದಿದೆ.
ಮೊದಲ ಅಧ್ಯಾಯದಲ್ಲಿ, ನಚಿಕೇತನು ಯಮದೇವನಿಂದ ಮೂರು ವರಗಳನ್ನು ಕೇಳುತ್ತಾನೆ ಮತ್ತು ಕೊನೆಯ ವರದಲ್ಲಿ ಅವನು ಆತ್ಮದ ಜ್ಞಾನವನ್ನು ಪಡೆಯುತ್ತಾನೆ. ಎರಡನೇ ಅಧ್ಯಾಯದಲ್ಲಿ, ಯಮನು ಆತ್ಮದ ಸ್ವರೂಪ ಮತ್ತು ಮೋಕ್ಷದ ಬಗ್ಗೆ ವಿವರಣೆ ನೀಡುತ್ತಾನೆ.
ಕಠೋಪನಿಷತ್:-
ಸಹ ನಾವವತು । ಸಹ ನೌ ಭುನಕ್ತು । ಸಹ ವೀರ್ಯಂ ಕರವಾವಹೈ ।
ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ ॥*॥
ಓಂ ಶಾಂತಿಃ ಶಾಂತಿಃ ಶಾಂತಿಃ ॥
ಸಾರಾಂಶ:
ಇದು ಯಜುರ್ವೇದದ ಕಠೋಪನಿಷತ್ತಿನ ಕೊನೆಗೆ ಬಂದಿದೆ. [ಯಜುರ್ವೇದದಲ್ಲಿ ತೈತ್ತಿರೀಯಶಾಖೆಯವರಿಗೆ “ಶಂ ನೋ ಮಿತ್ರಃ ಶಂ ವರುಣಃ...” ಎನ್ನುವ ಎರಡನೇ ಶಾಂತಿ ಮಂತ್ರವೂ ಇದೆ, ಆದರೆ ಕಠ ಶಾಖೆಯ ಯಜುರ್ವೇದಿಗಳಿಗೆ ಇದೊಂದೇ ಶಾಂತಿ ಮಂತ್ರ.
ಸಹ ನಾವವತು: ‘ಅವತು’ ಎನ್ನುವಲ್ಲಿ ‘ಅವ’ ಎಂದರೆ ಪ್ರವೇಶ. “ಓ ಭಗವಂತ, ನೀನು ನನ್ನ ಗುರುವಿನೊಳಗೆ ಕೂತು, ಅವರಿಗೆ ವಿದ್ಯೆಯನ್ನು ಹೇಳುವ ಶಕ್ತಿ ತುಂಬು. ನನ್ನೊಳಗೆ ಕೂತು ಗುರುಗಳು ಹೇಳುವ ಮಾತು ನನಗೆ ಅರ್ಥವಾಗುವಂತೆ ಮಾಡು”.
ಸಹ ನೌ ಭುನಕ್ತು: ‘ಭುನಕ್ತು’ ಎಂದರೆ ಪಾಲಿಸುವುದು ಅಥವಾ ತಿನ್ನುವುದು. “ಓ ಭಗವಂತ, ನಮ್ಮ ಅಧ್ಯಯನ ಕಾಲದಲ್ಲಿ ಯಾವುದೇ ವಿಘ್ನ ಬಾರದಂತೆ ನಮ್ಮನ್ನು ಕೊನೇಯತನಕ ಪಾಲಿಸು. ನಿನ್ನ ರಕ್ಷೆ ಸದಾ ನಮ್ಮೊಂದಿಗಿರಲಿ. ನಮ್ಮಿಬ್ಬರಿಗೂ ಉಣ್ಣುವುದಕ್ಕೂ ತಿನ್ನುವುದಕ್ಕೂ ಬೇಕಾಗಿರುವ ಸಮೃದ್ಧಿಯನ್ನು ಕರುಣಿಸು”.
*ತೈತ್ತಿರೀಯಶಾಖೆಯವರಿಗೆ “ಶಂ ನೋ ಮಿತ್ರಃ ಶಂ ವರುಣಃ...” ಎನ್ನುವ ಎರಡನೇ ಶಾಂತಿ ಮಂತ್ರವೂ ಇದೆ, ಆದರೆ ಕಠ ಶಾಖೆಯ ಯಜುರ್ವೇದಿಗಳಿಗೆ ಇದೊಂದೇ ಶಾಂತಿ ಮಂತ್ರ]. ಇದು ಪಾಠ ಪ್ರಾರಂಭದಲ್ಲಿ ಶಿಷ್ಯರು ಮಾಡುವ ಪ್ರಾರ್ಥನೆ. ಇದಕ್ಕೆ ಗುರುಗಳೂ ಧ್ವನಿಗೂಡಿಸಬಹುದು.
ಏತಚ್ಛ್ರುತ್ವಾ ಸಂಪರಿಗೃಹ್ಯ ಮರ್ತ್ಯಃ ಪ್ರವೃಹ್ಯ ಧರ್ಮ್ಯಮಣುಮೇತಮಾಪ್ಯ ।
ಸ ಮೋದತೇ ಮೋದನೀಯಂ ಹಿ ಲಬ್ಧ್ವಾ ವಿವೃತಂ ಸದ್ಮ ನಚಿಕೇತಸಂ ಮನ್ಯೇ ॥೧೩॥
ಈ ಶ್ಲೋಕದಲ್ಲಿ ‘ಸಂಪರಿಗೃಹ’ ಎನ್ನುವ ಪದ ಬಳಕೆಯಾಗಿದೆ. ಪರಿಗ್ರಹ ಎಂದರೆ ‘ಆತ್ಮಸಾತ್’ ಮಾಡಿಕೊಳ್ಳುವುದು. ಎಲ್ಲವನ್ನೂ ಕೇಳಿ ತಿಳಿದುಕೊಂಡು, ನಿಜವಾದ ದಾರಿ ಯಾವುದೆಂದು ಗುರುತಿಸಿಕೊಂಡು, ಆ ದಾರಿಯಲ್ಲಿ ಹೋಗುವುದು. ಯಾವುದು ಸಮೀಚೀನವಾದದ್ದು ಅದನ್ನು ಗ್ರಹಣ ಮಾಡುವುದು ಸಂಪರಿಗ್ರಹ. ಇದೇ ರೀತಿ ಇಲ್ಲಿ ‘ಪ್ರವೃಹ್ಯ’ ಎನ್ನುವ ಇನ್ನೊಂದು ಪದ ಬಳಕೆಯಾಗಿದೆ. ಪ್ರವೃಹ್ಯ ಎಂದರೆ ಬೇರ್ಪಡಿಸಿ ತಿಳಿಯುವುದು, ಜೀವಕ್ಕಿಂತ ಬೇರೆಯಾದ, ಜೀವನನ್ನು ನಿಯಂತ್ರಿಸುವ ಒಂದು ಶಕ್ತಿ ಇದೆ ಎಂದು ಗುರುತಿಸುವುದು ಪ್ರವೃಹ್ಯ.
ಜ್ಞಾನಿಗಳ ಒಡನಾಟ ಮತ್ತು ಸೇವೆಯಿಂದ ತಿಳಿದಾಗ-ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಇದು ನಿಜವಾದ ಆನಂದದ ಅನುಭವ. “ನಚಿಕೇತನಿಗೆ ಇಂತಹ ಆನಂದದ ಮನೆಯ ಬಾಗಿಲು ತೆರೆದಿದೆ” ಎನ್ನುತ್ತಾನೆ ಯಮ.
ಆಶಾಪ್ರತೀಕ್ಷೇ ಸಂಗತಂ ಸೂನೃತಾಂ ಚೇಷ್ಟಾಪೂರ್ತೇ ಪುತ್ರಪಶೂಂಶ್ಚ ಸರ್ವಾನ್ ।
ಏತದ್ವೃಂಕ್ತೇ ಪುರುಷಸ್ಯಾಲ್ಪಮೇಧಸೋ ಯಸ್ಯಾನಶ್ನನ್ ವಸತಿ ಬ್ರಾಹ್ಮಣೋ ಗೃಹೇ ॥೮॥
ಹಸಿದು ಬಂದ ಅತಿಥಿಯನ್ನು ಸತ್ಕರಿಸದೆ ತಿರಸ್ಕರಿಸುವುದರ ಪರಿಣಾಮ ಏನು ಎನ್ನುವುದನ್ನು ಈ ಶ್ಲೋಕದಲ್ಲಿ ಯಮನ ಪತ್ನಿ ವಿವರಿಸುತ್ತಾಳೆ. “ಒಂದು ವೇಳೆ ಅತಿಥಿಯನ್ನು ಬೈದು ಕಳುಹಿಸಿದರೆ ನಿಮ್ಮ ಆಶಾ ಪ್ರತೀಕ್ಷಗಳು ಮಣ್ಣುಪಾಲಾಗುತ್ತವೆ, ಗೆಳೆಯರು ನಿಮ್ಮಿಂದ ದೂರವಾಗುತ್ತಾರೆ, ಯಾರೂ ನಿನ್ನನ್ನು ನೋಡಿ ಒಳ್ಳೆಯ ಮಾತನಾಡುವುದಿಲ್ಲ. ನಿಮ್ಮ ಇಷ್ಟಾ-ಪೂರ್ತಾ-ಸರ್ವಸ್ವವೂ ನಾಶವಾಗುತ್ತದೆ” ಎನ್ನುತ್ತಾಳೆ ಆಕೆ. . ಒಟ್ಟು ಆರು ಇಷ್ಟಗಳು ಹಾಗೂ ಆರು ಪೂರ್ತಗಳನ್ನು ಶಾಸ್ತ್ರಕಾರರು ಪಟ್ಟಿ ಮಾಡಿದ್ದಾರೆ.
“ಅಗ್ನಿಹೋತ್ರಂ ತಪಃ ಸತ್ಯಂ ವೇದಾನಾಂಚಾನುಪಾಲನಂ ಆತಿಥ್ಯಂ ವೈಶ್ವಾದೇವಂ ಚ ಇಷ್ಟಂ ಇತಿ ಅಭಿಧೀಯತೆ” –
(೧) ನಿತ್ಯ ಅಗ್ನಿ ಮುಖದಲ್ಲಿ ಆರಾಧನೆ(ಅಗ್ನಿಹೋತ್ರ),
(೨) ಉಪವಾಸ, ಬ್ರಹ್ಮಚರ್ಯ, ಇತ್ಯಾದಿ ನೈಷ್ಠಿಕ ಜೀವನ ಬದುಕುವುದು(ತಪಃ),
(೩) ಪ್ರಾಮಾಣಿಕವಾದ ಬದುಕು(ಸತ್ಯ),
(೪) ನಿರಂತರ ವೇದಾಧ್ಯಯನ ಹಾಗೂ ವೇದೋಕ್ತ ಕರ್ಮಾನುಷ್ಠಾನ,
(೫) ಹಸಿದವರಿಗೆ ಅನ್ನ ನೀಡಿ ಸತ್ಕರಿಸುವುದು(ಆತಿಥ್ಯ),
(೬) ದೇವತೆಗಳ ಆತಿಥ್ಯ –ಇವು ಆರು ಇಷ್ಟಗಳು.
ಹಾಗೆ
(೧) ಸಮಾಜದ ಉಪಯೋಗಕ್ಕಾಗಿ ಬಾವಿ ತೊಡಿಸುವುದು,
(೨) ಇಳಿಬಾವಿಯನ್ನು ಕಟ್ಟುವುದು,
(೩) ಸ್ನಾನದ ಕೆರೆಯನ್ನು ಕಟ್ಟುವುದು,
(೪) ಊರಿನ ಕ್ಷೇಮಕ್ಕೋಸ್ಕರ ದೇವಸ್ಥಾನ ಕಟ್ಟುವುದು,
(೫) ಸಾರ್ವಜನಿಕ ಅನ್ನದಾನ ಮತ್ತು
(೬) ಗಿಡ ಮರಗಳನ್ನು ಬೆಳೆಸುವುದು- ಇವು ಆರು ಪೂರ್ತಗಳು.
ಇಲ್ಲಿ ಯಮನ ಪತ್ನಿ ಹೇಳುತ್ತಾಳೆ: “ಒಂದು ವೇಳೆ ಅತಿಥಿಯನ್ನು ತಿರಸ್ಕರಿಸಿದರೆ ಅದರಿಂದ ಇಷ್ಟಾ ಮತ್ತು ಪೂರ್ತಾದ ಎಲ್ಲಾ ಪುಣ್ಯ ಫಲಗಳೂ ನಷ್ಟವಾಗುತ್ತದೆ”
ಭಗವಂತನ ಉಪಾಸನೆ :-
ಉಪಾಸನೆಯ ಒಂದು ವಿಶೇಷ ಮುಖವನ್ನು ವಿವರಿಸಿದ್ದಾನೆ ಯಮ.
ಭಗವಂತನನ್ನು ಮಾತಿನ ಮೂಲಕ ತಿಳಿಯಲು ಸಾಧ್ಯವಿಲ್ಲ. ಗುರುಗಳ ಉಪದೇಶ ಕೂಡಾ ನೇರವಾಗಿ ಭಗವಂತನನ್ನು ತೋರಿಸಲಾರದು. ಪ್ರವಚನ ಕೇಳಿದಾಗ ಅದರಿಂದ ಭಗವಂತನನ್ನು ಹೇಗೆ ಉಪಾಸನೆ ಮಾಡಬೇಕು ಎನ್ನುವ ಮಾರ್ಗದರ್ಶನವಷ್ಟೇ ಸಿಗುತ್ತದೆ ಹೊರತು, ಅದರಿಂದ ದೇವರು ಕಾಣಿಸಿಕೊಳ್ಳುವುದಿಲ್ಲ. ಮನಸ್ಸುಗಳಿಗೆ ಅನಂತವಾದ ಭಗವಂತನನ್ನು ಗ್ರಹಿಸಲು ಸಾಧ್ಯವಿಲ್ಲ. ಹೀಗಿರುವಾಗ ನಮ್ಮ ಕಣ್ಣಿನಿಂದ ಅವನನ್ನು ಕಾಣುವುದು ಸಾಧ್ಯವೇ? ಎಂದು ಪ್ರಶ್ನಿಸುತ್ತಾನೆ ಯಮ. ಇಂತಹ ಭಗವಂತನನ್ನು ಯಾರು ಕಾಣಬಲ್ಲರು ಎಂದರೆ ಯಮ ಹೇಳುತ್ತಾನೆ: “ಅಸ್ತೀತಿ ಬ್ರುವತಃ” ಎಂದು. ಅಂದರೆ: ‘ಭಗವಂತ ಇದ್ದಾನೆ’ ಎಂದು ಹೇಳುವವರು ಕಾಣಬಲ್ಲರು ಎಂದರ್ಥ. ಯಾರು ದೇವರು ಇಲ್ಲಾ ಎನ್ನುತ್ತಾನೋ, ಅವನ ಪಾಲಿಗೆ ದೇವರು ಖಂಡಿತಾ ಗೋಚರನಾಗುವುದಿಲ್ಲ. ದೇವರು ಇದ್ದಾನೆ ಎನ್ನುವ ಭಾವ ಒಳಗಿನಿಂದ ದೃಢವಾಗುವ ತನಕ ಏನೇ ಸಾಧನೆ ಮಾಡಿದರೂ ಭಗವಂತನ ಸಾಕ್ಷಾತ್ಕಾರವಾಗುವುದಿಲ್ಲ. ಹಾಗಾಗಿ ಮೊದಲು ದೇವರು ಇದ್ದಾನೆ ಎನ್ನುವುದು ನಮ್ಮ ಮನಸ್ಸಿನಲ್ಲಿ ಗಟ್ಟಿಯಾಗಬೇಕು. ಗಟ್ಟಿಯಾದ ನಂತರ ಅವನನ್ನು ತಿಳಿಯಲು ಪ್ರಯತ್ನ ಮಾಡಬೇಕು.
ಜಗತ್ತಿನಲ್ಲಿ ನಮಗೆ ತಿಳಿದಿರುವ/ತಿಳಿಯದಿರುವ ಯಾವ ಯಾವ ವಸ್ತುಗಳಿವೆ, ಆ ಎಲ್ಲಾ ವಸ್ತುಗಳಿಗಿಂತ ಭಗವಂತ ಅಧಿಕ ಎಂದರ್ಥ. ಯಾರು ಭಗವಂತನನ್ನು ‘ಅಸ್ತಿಃ’ ಎಂದು ತಿಳಿದಿದ್ದಾರೋ, ಅವರು ಭಗವಂತನನ್ನು ಕಾಣಬಲ್ಲರು.
ಮಾಡುವಾಗ ಅವನ ಪರಿವಾರ ಸಮೇತ ಉಪಾಸನೆ ಮಾಡಬೇಕು ಎಂದು ಹಿಂದೆ ಹೇಳಿದ್ದನ್ನು ಇನ್ನೂ ಸ್ಪಷ್ಟವಾಗಿ, ತಾರತಮ್ಯ ಪೂರ್ವಕ ಇಲ್ಲಿ ವಿವರಿಸಲಾಗಿದೆ. ಈ ವಿಚಾರವನ್ನು ಯಮ ಹಿಂದೆಯೇ ವಿವರಿಸಿದ್ದಾನೆ. ದೇವತೆಗಳು ನಮ್ಮ ಮತ್ತು ಭಗವಂತನ ನಡುವಿನ ಮೆಟ್ಟಿಲುಗಳಿದ್ದಂತೆ. ಅವರನ್ನು ತರತಮ ಭಾವದಿಂದ ಅನುಸಂಧಾನ ಮಾಡಿ ಕೊನೇ ಮೆಟ್ಟಿಲಿನಲ್ಲಿ ಭಗವಂತನನ್ನು ಕಾಣಬೇಕು.
ದೇವತಾ ತಾರತಮ್ಯ ಎನ್ನುವುದು ಅಧ್ಯಾತ್ಮದಲ್ಲಿ ಅತ್ಯಂತ ಮುಖ್ಯ ವಿಷಯ.
ನಮ್ಮ ದೇಹಕ್ಕಿಂತ ನಮ್ಮ ಇಂದ್ರಿಯಗಳು ಶ್ರೇಷ್ಠ,
ಇಂದ್ರಿಯಗಳಿಗಿಂತ ಮನಸ್ಸು ಶ್ರೇಷ್ಠ,
ಮನಸ್ಸಿಗಿಂತ ಸತ್ವ(ಬುದ್ಧಿ) ಶ್ರೇಷ್ಠ,
ಸತ್ವಕ್ಕಿಂತ ಆತ್ಮ ಶ್ರೇಷ್ಠ,
ಆತ್ಮನಿಗಿಂತ ಶ್ರೇಷ್ಠ ಅವ್ಯಕ್ತ,
ಅವ್ಯಕ್ತಕ್ಕಿಂತ ಪರಮ ಪುರುಷ ಭಗವಂತ ಶ್ರೇಷ್ಠ.
ಇಲ್ಲಿ ಕೊನೆಯಲ್ಲಿ ಅವ್ಯಕ್ತತತ್ವ(ಶ್ರೀಲಕ್ಷ್ಮಿ) ಮತ್ತು ಪರಮಪುರುಷ ಭಗವಂತನನ್ನು ಹೇಳಿರುವುದರಿಂದ, ಈ ಶ್ಲೋಕದಲ್ಲಿ ಹೇಳಲಾದ ಇಂದ್ರಿಯ, ಮನಸ್ಸು, ಬುದ್ಧಿ, ಇತ್ಯಾದಿ ಮೂಲತಃ ಅದರ ಅಭಿಮಾನಿ ದೇವತೆಗಳನ್ನು ಹೇಳುತ್ತವೆ ಎನ್ನುವುದು ತಿಳಿಯುತ್ತದೆ. ಹಿಂದೆ ಹೇಳಿದಂತೆ, ಇಂದ್ರಾದಿ ಸಮಸ್ತ ದೇವತೆಗಳಿಗಿಂತ ಮನೋಭಿಮಾನಿಗಳಾದ ಗರುಡ-ಶೇಷ-ರುದ್ರರು ಶ್ರೇಷ್ಠ; ಮನೋಭಿಮಾನಿ ದೇವತೆಗಳಿಗಿಂತ ಬುದ್ಧಿಯ ದೇವತೆಯರಾದ ಸರಸ್ವತಿ-ಭಾರತಿಯರು ಶ್ರೇಷ್ಠ; ಬುದ್ಧಿಯ ದೇವತೆಗಳಿಗಿಂತ ಶ್ರೇಷ್ಠ ಮಹತತ್ವ ಮತ್ತು ಜೀವಕಲಾಭಿಮಾನಿಗಳಾದ ಬ್ರಹ್ಮ-ವಾಯು. ಎಲ್ಲರಿಗಿಂತ ಶ್ರೇಷ್ಠ ಅವ್ಯಕ್ತತತ್ವ ಶ್ರೀಲಕ್ಷ್ಮಿ ಮತ್ತು ಪರಮಪುರುಷ ಭಗವಂತ.
ಭಗವಂತ ಎಲ್ಲವನ್ನೂ ವ್ಯಾಪಿಸಿ ನಿಂತಿದ್ದಾನೆ.
ತಾರತಮ್ಯಪೂರ್ವಕವಾಗಿ ದೇವತೆಗಳನ್ನು ತಿಳಿದು, ತಾರತಮ್ಯ ಅಂತಗತನಾಗಿರುವ ಭಗವಂತನನ್ನು ತಿಳಿಯುವ ಪ್ರಯತ್ನ ಮಾಡಬೇಕು. ಭಗವಂತನ ಜ್ಞಾನವಿಲ್ಲದ ನಾವು ಕೇವಲ ಹುಟ್ಟಿ-ಸಾಯುವ ಜಂತುಗಳಿದ್ದಂತೆ.
ನ ಸಂದೃಶೇ ತಿಷ್ಠತಿ ರೂಪಮಸ್ಯ ನ ಚಕ್ಷುಷಾ ಪಶ್ಯತಿ ಕಶ್ಚನೈನಮ್ ।
ಹೃದಾ ಮನೀಷಾ ಮನಸಾಽಭಿಕ್ಲೃ್ಪ್ತೋ ಯ ಏತದ್ವಿದುರಮೃತಾಸ್ತೇ ಭವಂತಿ ॥೯॥
ಭಗವಂತ ನಮ್ಮ ಬಾಹ್ಯ ಇಂದ್ರಿಯಗಳಿಗೆ ಗೋಚರನಾಗುವುದಿಲ್ಲ. ಆತನನ್ನು ಕಾಣಬೇಕೆಂದರೆ ನಾವು ನಮ್ಮ ಒಳಗಣ್ಣಿನಿಂದ ಕಾಣಬೇಕು. , ಅವತಾರ ರೂಪಿ ಭಗವಂತನನ್ನು ಎಲ್ಲರೂ ಕಾಣುತ್ತಿದ್ದರು. ಕೇವಲ ಸಾತ್ವಿಕರಷ್ಟೇ ಅಲ್ಲ, ರಾಕ್ಷಸರೂ ಕೂಡ! ಆದರೆ ಅದು ಭಗವಂತನ ಸಾಕ್ಷಾತ್ಕಾರವಲ್ಲ. ಭಗವಂತನ ಸಾಕ್ಷಾತ್ಕಾರ ಕೇವಲ ಜ್ಞಾನದೃಷ್ಟಿಯಲ್ಲಿ ಮಾತ್ರ ಸಾಧ್ಯ.
ಯದಾ ಪಂಚಾವತಿಷ್ಠಂತೇ ಜ್ಞಾನಾನಿ ಮನಸಾ ಸಹ ।
ಬುದ್ಧಿಶ್ಚ ನ ವಿಚೇಷ್ಟತೇ ತಾಮಾಹುಃ ಪರಮಾಂ ಗತಿಮ್ ॥೧೦॥
ನಮ್ಮ ಮನಸ್ಸು ಭಗವಂತನಲ್ಲಿ ಸಂಯೋಗ ಹೊಂದುವುದಕ್ಕೆ ಯೋಗಸಿದ್ಧಿ ಎನ್ನುತ್ತಾರೆ. ಇದಕ್ಕಾಗಿ ನಾವು ನಮ್ಮ ಬಾಹ್ಯೆಂದ್ರಿಯಗಳನ್ನು ಸ್ಥಬ್ಧ ಮಾಡಬೇಕು. ಐದು ಇಂದ್ರಿಯಗಳನ್ನು ಸ್ಥಗನಗೊಳಿಸಿದ ಮೇಲೆ, ಮನಸ್ಸನ್ನು ಸ್ಥಬ್ಧಗೊಳಿಸಬೇಕು. ಇದನ್ನು ಉನ್ಮನೀಭಾವ ಎನ್ನುತ್ತಾರೆ. ಈ ಸ್ಥಿತಿಯಲ್ಲಿ ಕೇವಲ ನಮ್ಮ ಆತ್ಮಸ್ವರೂಪ ಕೆಲಸ ಮಾಡುತ್ತದೆ. ಕೇವಲ ಆತ್ಮಸ್ವರೂಪದಿಂದ ಸ್ವರೂಪಭೂತನಾದ ಆ ಭಗವಂತನನ್ನು ಕಾಣಲು ಸಾಧ್ಯ. .
.*
ತಿಸ್ರೋ ರಾತ್ರೀರ್ಯದವಾತ್ಸೀರ್ಗೃಹೇ ಮೇSನಶ್ನನ್ ಬ್ರಹ್ಮನ್ನತಿಥಿರ್ನಮಸ್ಯಃ ।
ನಮಸ್ತೇSಸ್ತು ಬ್ರಹ್ಮನ್ ಸ್ವಸ್ತಿ ಮೇSಸ್ತು ತಸ್ಮಾತ್ಪ್ರತಿ ತ್ರೀನ್ವರಾನ್ವೃಣೀಷ್ವ ॥೯॥
ತನಗಾಗಿ ಅನ್ನ-ನೀರನ್ನು ಬಿಟ್ಟು ಕಾಯುತ್ತಿದ್ದ ನಚಿಕೇತನನ್ನು ಕುರಿತು ಯಮ ಹೇಳುತ್ತಾನೆ: “ತಂದೆಯ ಅಣತಿಯಂತೆ ನನ್ನನ್ನು ಕಾಣಲು ಬಂದ ನೀನು ನನಗೆ ಅತಿಥಿ. ಹೀಗಿರುವಾಗ ಅತಿಥಿಯನ್ನು ಮೂರು ದಿನ ಕಾಯಿಸಿದ ಪಾಪ ನನಗೆ ಬಂತು” ಎಂದು. “ನನ್ನ ಗೃಹದಲ್ಲಿ ನನ್ನ ಅತಿಥಿಯಾಗಿ ಉಪವಾಸ ಕುಳಿತ ನಮಸ್ಕಾರ ಯೋಗ್ಯ ಜ್ಞಾನಿ ನೀನು, ನಮ್ಮಿಂದ ಅದೆಷ್ಟು ದೊಡ್ಡ ಅಪರಾಧವಾಗಿ ಹೋಗಿದೆ, ನಿನ್ನ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ನಾವು, ನಿನಗೆ ನನ್ನ ನಮಸ್ಕಾರ” ಎನ್ನುತ್ತಾನೆ ಯಮ. ಎಷ್ಟು ದೊಡ್ಡ ಮಾತು! ಪುಣ್ಯ ಪಾಪಗಳ ನಿರ್ಣಯ ಮಾಡಿ ಪಾಪಿಗಳಿಗೆ ದುಃಖವನ್ನೂ ಪುಣ್ಯಜೀವಿಗಳಿಗೆ ಸುಖವನ್ನೂ ಕೊಡುವ, ಲೋಕದ ಸುಖ-ದುಃಖಗಳ ನಿಯಾಮಕ ದೇವತೆ ಯಮ ಇಲ್ಲಿ “ನನ್ನ ಅಪರಾಧವನ್ನು ಕ್ಷಮಿಸು, ನಿನಗೆ ನಮಸ್ಕಾರ” ಎನ್ನುತ್ತಿದ್ದಾನೆ. ಇದು ಹಿರಿಯರ ದೊಡ್ಡ ಗುಣ.
ಶ್ರದ್ಧಾವಾನ್ ಲಭತೇ ಜ್ಞಾನಂ(೪-೩೯) ಎಂದು ಕೃಷ್ಣ ಗೀತೆಯಲ್ಲಿ ಹೇಳಿರುವಂತೆ-ಜ್ಞಾನಿಗಳಿಗೆ ಅಪಮಾನ ಮಾಡಿದರೆ ಅದು ಭಗವಂತನನ್ನು ಅಪಮಾನ ಮಾಡಿದಂತೆ.
ಶಾಂತಸಂಕಲ್ಪಃ ಸುಮನಾ ಯಥಾ ಸ್ಯಾದ್ ವೀತಮನ್ಯುರ್ಗೌತಮೋ ಮಾSಭಿ ಮೃತ್ಯೋ ।
ತ್ವತ್ಪ್ರಸೃಷ್ಟಂ ಮಾSಭಿವದೇತ್ಪ್ರತೀತ ಏತತ್ ತ್ರಯಾಣಾಂ ಪ್ರಥಮಂ ವರಂ ವೃಣೇ ॥೧೦॥
ನಚಿಕೇತ ಯಮನಲ್ಲಿ ಕೇಳುವ ಮೊದಲ ವರವನ್ನು ಈ ಶ್ಲೋಕದಲ್ಲಿ ವರ್ಣಿಸಲಾಗಿದೆ. “ನಾನು ಪುನಃ ನನ್ನ ತಂದೆಗೆ ಮಗನಾಗಿ ಅದೇ ದೇಹದಲ್ಲಿ ಹುಟ್ಟಬೇಕು; ನನ್ನ ತಂದೆ ಸತ್ತು ಬದುಕಿದ ನನ್ನನ್ನು ಗುರುತಿಸಬೇಕು; ನನ್ನನ್ನು ನೋಡಿ ಸಂತೋಷಪಡಬೇಕು; ಒಳ್ಳೆಯ ಮಾತನ್ನಾಡಿ ಸ್ವಾಗತಿಸಬೇಕು; ನನ್ನ ತಂದೆಗೆ ‘ಕೆಟ್ಟದ್ದನ್ನು ಮಾಡುವ’ ಬಯಕೆ ಎಂದೂ ಬರಬಾರದು; ಆತನ ಮನಸ್ಸು ಸದಾ ಒಳ್ಳೆಯ ಕೆಲಸ ಮಾಡಲು ಚಡಪಡಿಸಬೇಕು ಮತ್ತು ಆತ ಎಂದೂ ಕೋಪ ಮಾಡಬಾರದು” ಎಂದು ನಚಿಕೇತ ಯಮನನ್ನು ಕೇಳುತ್ತಾನೆ. ಇದು ನಚಿಕೇತ ಕೇಳುವ ಮೊದಲ ವರ.
ಯಥಾ ಪುರಸ್ತಾದ್ ಭವಿತಾ ಪ್ರತೀತಃ ಔದ್ದಾಲಕಿರಾರುಣಿರ್ಮತ್ಪ್ರಸೃಷ್।
ಸುಖಂ ರಾತ್ರೀಃ ಶಯಿತಾ ವೀತಮನ್ಯುಃ ತ್ವಾಂ ದದೃಶಿವಾನ್ ಮೃತ್ಯುಮುಖಾತ್ ಪ್ರಮುಕ್ತಂ ॥ ೧೧॥
ನಚಿಕೇತ ಕೇಳಿದ ವರವನ್ನು ಯಮ ಪುರಸ್ಕರಿಸುತ್ತಾನೆ ಮತ್ತು ಹೇಳುತ್ತಾನೆ: “ನೀನು ಹಿಂದಿರುಗಿ ಹೋದಾಗ ನಿನ್ನ ತಂದೆ ನಿನ್ನನ್ನು ಅಷ್ಟೇ ಸ್ಪಷ್ಟವಾಗಿ ಗುರುತಿಸುತ್ತಾನೆ. ನಿನ್ನನ್ನು ಪ್ರೀತಿಯಿಂದ ಸ್ವಾಗತಿಸುತ್ತಾನೆ. ಮರಳಿ ಹೋದ ನಿನ್ನನ್ನು ಕಂಡ ಮೇಲೆ ಆತನ ಕೋಪ ನಾಶವಾಗಿ ಆತ ಶಾಂತನಾಗುತ್ತಾನೆ ಮತ್ತು ಆತ ರಾತ್ರಿ ಸುಖ ನಿದ್ದೆಯನ್ನು ಪಡೆಯುತ್ತಾನೆ” ಎಂದು.
. ಔದ್ದಾಲಕಿ ಎಂದರೆ ಉದ್ದಾಲಕನ ಮೊಮ್ಮಗ. ಹಿಂದೆ ಅಜ್ಜನ ಹೆಸರನ್ನು ಮೊಮ್ಮೊಗನಿಗೆ ಇಡುವುದು ಸಂಪ್ರದಾಯವಾಗಿತ್ತು. ಅರುಣೆಯ ಮಗ ಹಾಗೂ ಉದ್ದಾಲಕನ ಮೊಮ್ಮಗನಾದ ನಚಿಕೇತನ ತಂದೆ- ಔದ್ದಾಲಕಿ ಆರುಣಿ
ಈ ಉಪನಿಷತ್ತು ಭಾರತೀಯ ತತ್ವಶಾಸ್ತ್ರ ಮತ್ತು ಧರ್ಮದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಇದು ಆಧ್ಯಾತ್ಮಿಕ ಜ್ಞಾನವನ್ನು ಬಯಸುವವರಿಗೆ ಮಾರ್ಗದರ್ಶನ ನೀಡುತ್ತದೆ.
ಕಠೋಪನಿಷತ್ತು ಆತ್ಮವು ಶಾಶ್ವತ ಮತ್ತು ಅವಿನಾಶಿ ಎಂದು ಹೇಳುತ್ತದೆ.
ಮೋಕ್ಷ ಎಂದರೆ ಪುನರ್ಜನ್ಮದ ಚಕ್ರದಿಂದ ಬಿಡುಗಡೆ ಪಡೆಯುವುದು.
ಕಠೋಪನಿಷತ್ತು ಓದಿದ ನಂತರ, ನೀವು ಆತ್ಮ, ಮೋಕ್ಷ ಮತ್ತು ಜೀವನದ ಗುರಿಯ ಬಗ್ಗೆ ಹೆಚ್ಚಿನ ಅರಿವನ್ನು ಪಡೆಯುತ್ತೀರಿ.
#parliament #constitution #prime #minister #Lokasabe #rajyasabha #president #Sanskrit #Modi #Muniswamy #gowda #ಚೇತನಾ #Central #government #yogi #riya #cabinet #ಇಂದ್ರಪ್ರಸ್ಥ #ಭಾರತ #ದೇಶ #NewDelhi #AI
ಕಠೋಪನಿಷತ್ತು/ಕಾಟಕೋಉಪನಿಷತ್ ಪಾಠ ಪಂ.ಶ್ರೀ.ಕಪಿಲಾಚಾರ ಗಲಗಲಿ ಇವರಿಂದ*
:-
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏