ದೇವಿ ಕೃಪೆಯಿಂದ ತಪ್ಪಿದ ಅನಾಹುತ ಹೊಳೆಬಾಗಿಲು ಲಾಂಚ್ ಸ್ಟೇರಿಂಗ್ ಜಾಮ್*

*ದೇವಿ ಕೃಪೆಯಿಂದ ತಪ್ಪಿದ ಅನಾಹುತ 
ಹೊಳೆಬಾಗಿಲು ಲಾಂಚ್ ಸ್ಟೇರಿಂಗ್ ಜಾಮ್*

ತಾಯಿ ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಸಂಪರ್ಕದ  ಹೊಳೆಬಾಗಿಲು ಲಾಂಚ್  ಸ್ಟೇರಿಂಗ್ ಜಾಮ್ ಆಗಿ , ನೂರಾರು ಪ್ರಯಾಣಿಕರು  ಆಪಾಯದಿಂದ ಪಾರಾಗಿದ್ದಾರೆ.
  #sigandur  #sigandur #travel #karnataka #mysore #shimoga #sagara #nagarafort
#Navaratri #Follow #srikshetrasiganduru
#Chowdeshwari #incrediblekarnataka #siganduru #chodeshwari #shots #shorts #aigirinandhini · #SigandurChowdeshwari



     ದಿನಾಂಕ/03/07./2025ರಂದು ಹೊಳೆಬಾಗಿಲು ಲಾಂಚನ ಸ್ಟೇರಿಂಗ್ ಜಾಮ್ ಆಗಿ ಕೆಲ ಹೊತ್ತು ಭಯದ ವಾತಾವರಣ ಸೃಷ್ಟಿಯಾಯಿತು. 

ಲಾಂಚಿನಲ್ಲಿದ್ದ ನೂರಕ್ಕೂ ಹೆಚ್ಚು ಪ್ರಯಾಣಿಕರಿದ್ದ ಈ ಲಾಂಚಿನಲ್ಲಿ ಒಮ್ಮೆಲೇ ಆದ ಈ ಅವಘಡಕ್ಕೆ ಎಲ್ಲರ ಎದೆಯಾಳದಲ್ಲಿ ಏರಿಳಿತ ಕಂಡುಬಂದರೂ ಹತ್ತಿರದಲ್ಲೇ ಇದ್ದ ದಿಲೀಪ್ ಬಿಲ್ಡರ್ಸ್ ಬೋಟಿನಿಂದ  ಲಾಂಚನ್ನು ದಡ ಸೇರಿಸಲಾಗಿದೆ.

       ಹೊಳೆಬಾಗಿಲು ಲಾಂಚಿನಿಂದ ತಿಂಗಳಿಗೆ ಸುಮಾರು ನಲವತ್ತು ಲಕ್ಷಕ್ಕೂ ಅಧಿಕ ವರಮಾನ ಜಲಾನಯನ ಇಲಾಖೆಗೆ ಬರುತ್ತಿದ್ದರೂ ಇವುಗಳ ದುರಸ್ಥಿ ಹಾಗೂ ಸರಿಯಾದ ನಿರ್ವಹಣೆ ಇಲ್ಲದಿರುವುದೇ ಇದಕ್ಕೆಲ್ಲ  ಕಾರಣ ಎಂದು ಜನರು ಮಾತನಾಡುತ್ತಿದ್ದಾರೆ.

     ಇಂದು ಹಾಳಾದ ಲಾಂಚಿನ ಸ್ಟೇರಿಂಗ್ ಹಾಳಾಗಿ ಒಂದು ವಾರ ಕಳೆಯುತ್ತಾ ಬಂದರೂ ಸರಿಯಾದ ರಿಪೇರಿ ಕಾರ್ಯ ಮಾಡಿರುವುದಿಲ್ಲ ಎಂಬ ಮಾಹಿತಿ ಕೇಳಿಬರುತ್ತಿದೆ.

ಈ ಲಾಂಚುಗಳಲ್ಲಿ ಅರೆಲಾಲಿಕ ನೌಕರರೇ ಹೆಚ್ಚು ಇದ್ದು ಅವರ ವೇತನ ಪಾವತಿಯಾಗದೆ ಸುಮಾರು ಆರು ತಿಂಗಳ ವೇತನ ಬಾಕಿ ಇದ್ದು ಸಂಬಳ ಇಲ್ಲದೆ ದುಡಿಯುವವರ  ಆಲಸ್ಯವೂ ಇದಕ್ಕೆ ಇನ್ನೊಂದು ಕಾರಣವಾಗಿರಬಹುದು.
     ಈ ಹಿಂದೆಯೂ ಈ ನೌಕರರ ವೇತನ ಬಾಕಿ ಇದ್ದಾಗ,ಹಿಂದಿನ ಅವದಿಯ ಶಾಸಕರಾದ ಹರತಾಳು ಹಾಲಪ್ಪನವರು ಎರಡೇ ದಿನದಲ್ಲಿ ವೇತನ ಪಾವತಿ ಮಾಡಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
   *ಪರಮೇಶ್ವರ, *ಕರೂರು #ತುಮರಿ.#karnataka #state #jds #bjp #minister #Bengaluru #ರಾಜ್ಯ #ಸಚಿವ #ಜಿಲ್ಲಾಧಿಕಾರಿ #ಅಧಿಕಾರಿ #ಮಂತ್ರಿ #ಸಭೆ #ಕಾರ್ಯಕ್ರಮ #ಅಧ್ಯಕ್ಷ #ಸಮಿತಿ #ಪಂಚಾಯತ್ #ಮಾಧ್ಯಮ #ಒಕ್ಕಲಿಗ #AI #Riya #YOGI #ಆದೇಶ #ಭಾಷೆ #ಚೇತನ #ಮುನಿಸ್ವಾಮಿ #ಗೌಡ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಪ್ರತಿಷ್ಠಿತ ಆದಿಚುಂಚನಗಿರಿ ವಸತಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣ - ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿ*

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ