ಬೆಂಗಳೂರಿನ ಬಸವನಗುಡಿಯ ದೊಡ್ಡ ಗಣಪತಿ*#ganeshchaturthi #ganesha

*ಬೆಂಗಳೂರಿನ ಬಸವನಗುಡಿಯ ದೊಡ್ಡ ಗಣಪತಿ*
#ganeshchaturthi #ganesha #ganpati
ಬೆಂಗಳೂರಿನ ಬಸವನಗುಡಿಯ *ಕಡಲೆಕಾಯಿ ಪರಿಷೆ* ಪ್ರಯುಕ್ತ *ವಿಜಯವಾಣಿ* ಯ *ರವಿಕಾಂತ ಕುಂದಾಪುರ* ಅವರ *ಕಾಡ ಹರಟೆ !* ನಿಮಗಾಗಿ...
All NUTS in single SHELL
ಪುರುಸೊತ್ತಿದ್ರೆ, ಟೈಮ್‌ಪಾಸ್ ಮಾಡ್ಬೇಕು ಅನಿಸಿದ್ರೆ ಮಾತ್ರ ಇವನ್ನು ಓದಿ..
ಕಾಳಾಯ ತಸ್ಮೈ ನಮಃ 😛

• ದಾರಿಯುದ್ದಕ್ಕೂ ಕಡಲು ಕಂಡರೆ ಅದು ಕೋಸ್ಟಲ್ಲು,
ದಾರಿಯುದ್ದಕ್ಕೂ ಕಡಲೆ ಕಂಡರೆ ಅದು ಬುಲ್‌ಟೆಂಪಲ್ಲು.‌
#sankashtichaturthi #ಸಂಕಷ್ಟಚತುರ್ಥಿ
#lordganesha #sankashti #ganpatibappamorya
• 'ಸುಂಕೇನಹಳ್ಳಿ'ಯನ್ನು 'ಬಸವನಗುಡಿ' ಅಂತ ಬೇಕಿದ್ರೆ ಕರೆಯಿರಿ..
ಆದ್ರೆ 'ಕಡಲೆಕಾಯಿ ಪರಿಷೆ'ಯನ್ನು 'ಗ್ರೌಂಡ್‌ನಟ್ ಫೆಸ್ಟಿವಲ್' ಅಂತ ಮಾತ್ರ ಹೇಳ್ಬೇಡಿ.

• ಬಸವನಗುಡಿಯ ಬೀದಿಯಲ್ಲಿಂದು ಎಷ್ಟೊಂದು 'ಬಸವ'ರು!

• ಚಳಿ ನೋಡಿದ್ರೆ ಕಡಲೆಕಾಯಿ ಥರ ನಮಗೂ ಸಿಪ್ಪೆ ಇರಬೇಕಿತ್ತು ಅನ್ಸುತ್ತೆ.

• ನೋಡಿ.. ಕಡಲೆ ಎಂದರೆ ಎಷ್ಟು ಸಸಾರ..
ಎಲ್ರೂ ಕೈ ಹಾಕೋರೇ.

• ಪರಿಷೆಗೆ ಹೋಗಿ ಕಡಲೆ ತಿಂದು ಜೇಂಟ್ ವ್ಹೀಲ್ ಏರಿ ಕೂತೆ.. ಪಿತ್ತ ನೆತ್ತಿಗೇರಿದ ಹಾಗಾಯ್ತು..😇

• ಕಡಲೆಕಾಯಿ ಅಂಗಡಿ ಮುಂದಿನ ಫಲಕ.

"ನಿಮಗೆ ಕಾಲಕಳೆಯೋದೇ ಕಡಲೆಯಿಂದ ಇರಬಹುದು.
ನಮಗೆ ಜೀವನ ಸಾಗೋದೇ ಕಡಲೆಯಿಂದ.."

• ಸಂತ: ಕಡಲೆಕಾಯಿಯನ್ನು ಏಕೆ 'ಬಡವರ ಬಾದಾಮಿ' ಅಂತಾರೆ?

ಕಾಂತ: ಹೇಳಿಕೇಳಿ ಅದು 'ನೆಲಗಡಲೆ' ಅಲ್ವಾ, ಎಲ್ಲರ ಕೈಗೂ ಎಟಕುತ್ತೆ, ಅದಕ್ಕೆ..😜

• ಕಾಲ ಕಳೆಯೋಕೆ ಅಂತಲೇ ಹುಟ್ಟಿದವರು ಬಹುಬೇಗ ಕಾಲವಾಗುತ್ತಾರೆ ಎಂಬುದಕ್ಕೆ ಕಡಲೆಕಾಯಿ ಅತ್ಯುತ್ತಮ ನಿದರ್ಶನ.

• ಬಸವನಗುಡಿಯ ಬೀದಿಯಲಿ ಸದ್ಯ ನಡೆಯುತ್ತಿರುವ ಲೆಕ್ಕಾಚಾರ.. 'ಬೀಜಗಣಿತ..'😜

• ಎಷ್ಟೊಂದು ಶ್ರೀಮಂತರು ಬಂದಿದ್ದರು, 
'ಬಡವರ ಬಾದಾಮಿ' ಖರೀದಿಸಲು‌!

• ಕಾಳು ಹಾಕಿದರೆ ಹುಡುಗಿ ಒಲಿಯುತ್ತಾಳೆ ಎಂಬುದೇ ಸುಳ್ಳು. ಅದು ನಿಜವಾಗಿದ್ದರೆ, 'ಕಡಲೆಕಾಯಿ ಪರಿಷೆಗೆ ಹೋಗಿದ್ದ ಯುವತಿ ನಾಪತ್ತೆ' ಎಂದು ಪೊಲೀಸ್ ಠಾಣೆಗಳಲ್ಲಿ ಪ್ರತಿವರ್ಷ ಪ್ರಕರಣಗಳು ದಾಖಲಾಗಿರುತ್ತಿದ್ದವು.
#Chetha #Muniswamy #gowda #Riya #YOGI #Chethana #chethanagowda
#ChethanaMuniswamygowda 
• ನೆಲಗಡಲೆ ಲಾಜಿಕ್: ಭೂಮಿಯಲ್ಲಿ ಶೇ. 25 ನೆಲ ಹಾಗೂ ಶೇ. 75 ಕಡಲು ಅಂದರೆ ನೀರು ಇರುತ್ತದೆ ಎಂಬುದು ನಿಜ ಅನಿಸಬೇಕಿದ್ದರೆ ಕಡಲೆಕಾಯಿ ಪರಿಷೆಗೆ ಹೋಗಿ. ಅಲ್ಲಿ ಶೇ. 25 ನೆಲ, ಶೇ. 75 ಕಡಲೆ ಕಾಣುತ್ತದೆ..😜

• ಕೆಲಸಗಾರರಲ್ಲೂ ಕಡಲೆಕಾಯಿಯಂತೆ ಎರಡು ವಿಧ. ಕೆಲವರು ಬೇಯಿಸಿದ ಕಡಲೆಯಂತೆ, ಕೆಲಸ ಮಾಡುತ್ತಿದ್ದರೂ ಸದ್ದಿರದು. ಇನ್ನು ಕೆಲವರು ಹುರಿದ ಶೇಂಗಾದಂತೆ, ಶಬ್ದ ಜಾಸ್ತಿ.

• ಒಳ್ಳೆಯವರ ಬದುಕು ಕಡಲೆಕಾಯಿಯಂತೆ. ಕೆಲವರು ಅದನ್ನು ಸುಲಿದು ತಿನ್ನುತ್ತಾರೆ, ಇನ್ನು ಕೆಲವರು ಅದನ್ನು ಹುರಿದು, ಮತ್ತೆ ಕೆಲವರು ಬೇಯಿಸಿ ತಿನ್ನುತ್ತಾರೆ. ಇನ್ನು ಕೆಲವರು ಅದನ್ನು ಹಸಿಯಾಗಿಯೇ ತಿಂದುಬಿಡುತ್ತಾರೆ. ಒಟ್ಟಿನಲ್ಲಿ ಎಲ್ಲರಿಗೂ ಅವರ ಬದುಕೊಂದು ಟೈಮ್‌ಪಾಸ್, for the time being ಅಷ್ಟೇ.

• ಅವಳು ಕಡಲೆ, ಆದರೂ ಅವಳನ್ನು ಹೊಗಳಬೇಕಿತ್ತು, 'ನೀನು ಬಾದಾಮಿ' ಎಂದೆ, ಖುಷಿಯಾದಳು.
'ಹಾಗಾದರೆ ನೀನು?' ಎಂದು ಕೇಳಿದಳು.
'ನಾನು ಬಡವ' ಎಂದಷ್ಟೇ ಹೇಳಿ ಸುಮ್ಮನಾದೆ.

• ಎಷ್ಟೇ 
ಕಾಯಿ,
ಬರಿದಾಗದು
ಕಡಲು;
ಎಷ್ಟೇ ಕಾಯಿ,
ಹಣ್ಣಾಗದು ಕಡಲೆ..

• ಸಿಪ್ಪೆ
ಸುಲಿದ
ಕಡಲೆಕಾಯಿ,
Shame 
ಶೇಂ ಗಾ.‌‌.😜

• ಸುಲಿದು
ಹುರಿದು
ಬೇಯಿಸಿ
ಕಾಯಿಸಿ
ಅಥವಾ
ಹಸಿ..
ಹೀಗೆ
ಹೇಗೆ
ಬೇಕಾದರೂ
ತಿನ್ನಬಹುದಾದ 
ಜಗತ್ತಿನ 
ಏಕೈಕ ಕಾಯಿ
ಕಡಲೆಕಾಯಿ.

• ನಿತ್ಯ
ಅಗ್ರ
ಪೂಜೆಯ
ಗಣೇಶ,
ಇಂದು 
ಕೇಳಿದ 
'ನಂದಿ'ನ..
'ಏನಪ್ಪ ವಿಶೇಷ?';
ನಂದಿ ಹೇಳಿದ..
ಏನೆನ್ನಲಿ ಮರಾಯ,
ಬಾಕಿ ಎಲ್ಲ ನಿಮ್ ದಿನ
ಇವತ್ತೊಂದೇ 'ನಂ ದಿನ'..

• ಬಸವನ
ಗುಡಿಯ
ಬೀದಿಯಲಿ
ಅಲೆದರೂ
ಬಸವಳಿದಿಲ್ಲ
ಬಸವಣ್ಣ;
ಕಡಲೆಕಾಳಿನಲಿ
ಅದೆಂಥ ಕಸುವಣ್ಣ!

• ನೋಡು..
ಒಂದೇ
ಸಿಪ್ಪೆಯೊಳಗೆ
ಜೋಡಿ ಕಡಲೆ;
ಅಬ್ಬಬ್ಬಾ
ಏನು ಚಳಿ..
ಹೊದಿಕೆಯೊಂದ
ನಾ ತಂದುಬಿಡಲೆ? 😜

• 'ಬನ್ನಿ
ಬಿಡಿಸಿ'
ಎಂದು 
ಕೂಗಿದಳು
ಸೌಂದರ್ಯರಾಶಿ;
ಓಡೋಡಿ
ಹೋದ
ಅವನಿಗೆ 
ಕಾಣಿಸಿದ್ದು 
ಕಡಲೆರಾಶಿ..😜

• 'ಕಡಲೆಕಾಯಿಗೆಷ್ಟು?' ಎಂದು ಕೇಳಿದೆ,
ಸಿಕ್ಕಾಪಟ್ಟೆ ರೇಟು ಹೇಳಿದ.
'ಸುಲಿದು ತಿನ್ನೋದು ನೀವಾ ನಾವಾ?' ಎಂದೆ.
ಏನಂದೆ ಅಂತ ಅರ್ಥವಾಗದೆ ಅವನು ಯೋಚನೆ ಮಾಡಲಿಕ್ಕೆ ಶುರು ಮಾಡಿದ.

• ಕಡಲೆಕಾಯಿ ಪರಿಷೆಯಲ್ಲಿ ಒಟ್ಟಿಗೇ ನಡ್ಕೊಂಡ್ ಹೋಗ್ತಿದ್ವಿ, ನನ್ನ ಬಗ್ಗೆ ಏನಾದ್ರೂ ಕಾಂಪ್ಲಿಮೆಂಟ್ಸ್ ಹೇಳು ಅಂದ್ಲು..

ನಾನು ‌ಹೀಗಂದೆ..‌

"ನೀನೂ ಕಡಲೆಕಾಯಿ ಥರಾನೇ..
ಒಮ್ಮೆ ಟೇಸ್ಟ್ ನೋಡಿದ್ರೆ ಖಾಲಿ ಆಗೋವರ್ಗೂ ಸುಮ್ನಿರೋಕಾಗಲ್ಲ.."

• ಪುಟ್ಟ: ಮಮ್ಮೀಈ..

ಮಮ್ಮಿ: ವಾಟ್ ಪುಟ್ಟ?

ಪು: ಸಂಡೇ.. ಗೆಟ್ಟಿಂಗ್ ಬೋರ್, ಕ್ಯಾನ್ ಐ ಗೋ ಔಟ್ ಎನ್ ಪ್ಲೇ?

ಮ: ನೋ.. ಯು ಸ್ಲೀಪ್ ಫಾರ್ ಎ ವ್ಹೈಲ್..

ಪು: ಮಮ್ಮೀಈ...

ಮ: ಸೀ.. ಇಫ್ ಯು ಸ್ಲೀಪ್ ನೌ, ಇವ್ನಿಂಗ್ ಐ ವಿಲ್ ಟೇಕ್ ಯೂ ಟು 'ಬುಲ್ ಟೆಂಪಲ್' ರೋಡ್..

ಪು: ಬುಲ್ ಟೆಂಪಲ್ ರೋಡ್ !?

ಮ: ಯಾ.

ಪು: ವಾಟ್ಸ್ ದೇರ್ ಇನ್ ರೋಡ್ ಮಾ? 

ಮ: ಟುಡೇ ದೆರ್ ಈಸ್ 'ಕಡಲೆಕಾಯಿ ಪರಿಷೆ' ಪಾ. ದೆರ್ ವಿಲ್ ಬಿ ಸೋ ಮೆನಿ ಟಾಯ್ಸ್, ಜೇಂಟ್ ವ್ಹೀಲ್ ಆಲ್ಸೋ ದೇರ್..

ಪು: ಓ ಓ.. ದೆನ್ ಲೆಟ್ಸ್ ಗೋ. ಬಟ್ ವಾಟ್ಸ್ ದಟ್ 'ಕ..ಡ..ಲೆ.. ಕಾಯಿ?' 'ಪ..ರಿ..ಷೆ' ?

ಮ: ಕಡಲೆಕಾಯಿ.. ಐ ಮೀನ್, ಗ್ರೌಂಡ್ ನಟ್ ಪುಟ್ಟ.. ಪರಿಷೆ ಮೀನ್ಸ್ ಹಬ್ಬ ಪಾ.. 

ಪು: ಹಬ್ಬ !?

ಮ: ಅಯ್ಯೋ.. ಹಬ್ಬ ಮೀನ್ಸ್ 'ಫೆಸ್ಟ್.. ಫೆಸ್ಟಿವಲ್' ಪುಟ್ಟ

ಪು: ವೌ.. ಯು ಮೀನ್.. 'ಗ್ರೌಂಡ್ ನಟ್ ಫೆಸ್ಟಿವಲ್'! ದೆನ್ ಓಕೆ.. ಲೆಟ್ಸ್ ಗೋ ನೌ ಓನ್ಲಿ..😜

• ಒಂದು ಇಂಗ್ಲಿಷ್ ಪೇಪರ್‌ನವರು ಇಂಟರ್‌ವ್ಯೂಗೆ ಕರೆದಿದ್ರು..

ಕಡಲೆಕಾಯಿ ಪರಿಷೆ ಬಗ್ಗೆ ಒಂದೊಳ್ಳೇ ರಿಪೋರ್ಟ್ ಬರ್ಕೊಂಡ್ ತನ್ನಿ, ಒಳ್ಳೇ ಹೆಡ್ಡಿಂಗ್ ಇರ್ಲಿ ಅಂದ್ರು..

ನಾನು ವರದಿ ತಗೊಂಡ್ ಹೋಗಿ ಇಟ್ಟೆ‌..
ಹೆಡ್ಡಿಂಗ್ ಹೀಗ್ ಕೊಟ್ಟಿದ್ದೆ..😉👇

"In NUTshell it's GROUND report"

ಯಾರೋ ಬೆನ್ ತಟ್ದಂಗಾಯ್ತು.. ಕಣ್ ಬಿಟ್ರೆ ಅಮ್ಮ.. ಏಳು ಬೆಳಗಾಯ್ತು ಅಂದ್ರು..😉

• ಕಾಂತೆ: ನಮ್ಮ ಪ್ರೀತಿ ಎಷ್ಟು..?

ಕಾಂತ: ಸಿಕ್ಕಾಪಟ್ಟೆ

ಕಾಂತೆ: ಅದೇ ಎಷ್ಟು..?

ಕಾಂತ: ನಮ್ಮನ್ನೇ ಆವರಿಸಿ ಒಟ್ಟಿಗೇ ಹಿಡಿದಿಟ್ಟಿಡುವಷ್ಟು.

ಕಾಂತೆ: ಅಂದರೆ..?

ಕಾಂತ: ಈ ಕಡಲೆಕಾಯಿ ಥರ..

ಕಾಂತೆ: ಕಡಲೆಕಾಯಿ ಥರನಾ.. ಹಾಗಂದರೆ..?

ಕಾಂತ: ನೋಡು, ಈ ಕಡಲೆಕಾಯಿ ಒಳಗೆ ಎರಡು ಕಾಳುಗಳಿವೆ ಅಲ್ವಾ, ಅದೇ ನಾನು ಮತ್ತು ನೀನು..

ಕಾಂತೆ: ಅಂದರೆ, ಈ ಸಿಪ್ಪೆ ನಮ್ಮನ್ನಾವರಿಸಿ ಹಿಡಿದಿಟ್ಟಿರುವ ಪ್ರೀತಿನಾ..?

ಕಾಂತ: ಎಕ್ಸ್ಯಾಕ್ಟ್ಲಿ.

ಕಾಂತೆ: ಯೂ.. ಕ್ರೇಜ಼ಿ..😊 

ಕಾಂತ: 😜

ಕಾಂತೆ: ಸರಿ, ಮುಂದೆ ಹೇಳು.

ಕಾಂತ: ನೋಡು, ಈ ಕಡಲೆಕಾಯಿ ಒಳಗೆ ಎರಡು ಕಾಳು I mean ಈ ಪ್ರೀತಿಯೊಳಗೆ ನಾನು-ನೀನು ಇಬ್ಬರೂ ಇದ್ದೇವೆ ಅಂತ ಇಬ್ಬರಿಗೂ ಗೊತ್ತು.

ಕಾಂತೆ: ಹ್ಞೂಂ ನಿಜ, ಇದನ್ನು ಯಾರಾದರೂ ಹೇಳಬಲ್ಲರು ಎರಡು ಕಾಳುಗಳಿವೆ ಅಂತ.

ಕಾಂತ: ಹೌದು.. ಅಷ್ಟು ಗೊತ್ತಿದೆ ಅಂತಾದ ಮೇಲೆ ಬಿಡಿಸಿ ಪರೀಕ್ಷಿಸಲು ಹೋಗಬಾರದು.

ಕಾಂತೆ: ಯಾಕೆ..?

ಕಾಂತ: ಯಾಕಂದರೆ, ಹಾಗೆ ಬಿಡಿಸಿದಾಕ್ಷಣ ಕಾಳುಗಳು ಅಂದರೆ ನಾವಿಬ್ಬರೂ ಬೇರೆಯಾಗಿಬಿಡುತ್ತೇವೆ. 

ಕಾಂತೆ: ಓಹ್.. ಹೌದಲ..!

ಕಾಂತ: ಅಷ್ಟೇ ಅಲ್ಲ, ನಮ್ಮನ್ನಾವರಿಸಿ ಹಿಡಿದಿಟ್ಟಿದ್ದ ಅಪಾರ ಪ್ರೀತಿ ಈ ಕಡಲೆಕಾಯಿ ಸಿಪ್ಪೆಯಂತೆ ಬೆಲೆ ಕಳೆದುಕೊಂಡು ಬಿಡುತ್ತದೆ. ಕಾಳುಗಳಿಲ್ಲದ ಸಿಪ್ಪೆಗೂ ಬೆಲೆ ಇಲ್ಲ, ಸಿಪ್ಪೆ ಇಲ್ಲದೆ ಕಾಳುಗಳೂ ಜೊತೆಗಿಲ್ಲ ಎಂಬಂತಾಗುತ್ತದೆ. ಈಗ ಹೇಳು ಬಿಡಿಸಿ ನೋಡೋಣ್ವಾ..?

ಕಾಂತೆ: ಏ.. ಬೇಡ ಬೇಡ..😁

• ಉಳ್ಳವರು
ಕಡಲೆಕಾಯಿಯ
ಕೊಳ್ಳುವರು,
ನಾನೇನು ಮಾಡಲಿ
ಕಡುಬಡವನಯ್ಯ;
ಎನ್ನ ಕಣ್ಣೇ ಕಡಲೆ
ರೆಪ್ಪೆಯೇ ಸಿಪ್ಪೆ,
ತೆರೆದಿಟ್ಟರೆ ಟೈಂಪಾಸು
ಕಡಲೆಸಂಗಮದೇವ ಕೇಳಯ್ಯ..😜

• ಜಸ್ಟ್ GN ಅಂತಷ್ಟೇ ಮೆಸೇಜ್ ಕಳಿಸಿದ್ಲು,
'ಎಂತ ಗ್ರೌಂಡ್ನಟ್ಟಾ?' ಅಂತ ಕೇಳ್ದೆ.
'ಥೋ.. ಮೊದ್ಲು ನೀನು ಕಡಲೆಕಾಯಿ ಪರಿಷೆಯಿಂದ ಆಚೆ ಬಾ.. ಅದು ಗ್ರೌಂಡ್ನಟ್ಟಲ್ಲ, ಗುಡ್ನೈಟು..' ಅಂದ್ಲು.
©#ಕಾಂತೋಕ್ತಿ on ground nuts by #Ravikantha
#KadalekayiParishe
#ganpatibappamorya
#bappa
#ganesh 
#happyganeshchaturthi
#ganeshutsav
#ganpatibappa
#bappamorya
#shreeganesh
#vighnahartaganesh
#jaiganesh
#lordganesha
#mangalmurtimorya 
#ganeshart
#ganeshmantra
#ganeshaidol
#ecofriendlyganesha 
#🌅Good Morning🍵
#🌃ಗುಡ್ ನೈಟ್ ಸ್ಟೇಟಸ್
#🎂ಜನ್ಮ ದಿನದ ಸ್ಟೇಟಸ್
#🎁 Anniversary ಸ್ಟೇಟಸ್
#👏ಶುಭಾಶಯಗಳು
#🎴ಗ್ರೀಟಿಂಗ್ ಕಾರ್ಡ್ಸ್
#🙏ನಮಸ್ಕಾರ
#💐 ಸೋಮವಾರದ ಶುಭಾಶಯಗಳು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ

*ವಕೀಲರಿಗೆ ಬೇಷರತ್ತಾಗಿ ಕ್ಷಮೆ ಕೋರಿದ:ಸಂಪಾದಕ ವಿಶ್ವೇಶ್ವರ ಭಟ್ವ*