*ಎಂಟಿಎಂ ಕಾರ್ಡ್ಇರುವರು ಮರಣ ಹೊಂದಿದರೆ:ಕುಟುಂಬಕ್ಕೆ 2 ಲಕ್ಷ ಹಣ*

*ಎಂಟಿಎಂ ಕಾರ್ಡ್ಇರುವರು ಮರಣ ಹೊಂದಿದರೆ:ಕುಟುಂಬಕ್ಕೆ 2 ಲಕ್ಷ ಹಣ*
-ಸಾವಿನ ನಂತರ ATM ಕಾರ್ಡ್‌ನ ಪ್ರಯೋಜನ-

ಕರ್ನಾಟಕ ಫೆಬ್ರವರಿ 20:ಯಾವುದೇ ಬ್ಯಾಂಕ್‌ನ ಎಟಿಎಂ ಕಾರ್ಡ್ (ರೂಪೇ ಕಾರ್ಡ್) ಕಾರ್ಡ್ ಉಳ್ಳವರು ಆಕಸ್ಮಿಕ ಮರಣಕ್ಕೆ ತುತ್ತಾದರೆ ಕುಟುಂಬದವರಿಗೆ 2 ಲಕ್ಷ ರೂ. ಪರಿಹಾರ ಸಿಗ ಲಿದೆ ಎಂದು  ಸಾಕ್ಷರತಾ ಸಲಹೆಗಾರ. ಕುಮಾರಸ್ವಾಮಿ ತಿಳಿಸಿದರು.

 ಸಾಕ್ಷರತಾ ಕೇಂದ್ರದಿಂದ ಹುಳಿಯಾರು ಹೋಬಳಿಯ ಚಿಕ್ಕಬಿದರೆಯ ಶ್ರೀಮಾರುತಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಹಾರಕ್ಕಾಗಿ ಯಾವುದೇ ವಿಮಾ ಶುಲ್ಕ ಪಾವತಿಸುವ ಅಗತ್ಯ ಇರುವುದಿಲ್ಲ, ಯಾವ ರೀತಿಯಲ್ಲಿ ಸಾವನ್ನಪ್ಪಿದರೂ ಸಹ ಪರಿಹಾರ ಸಿಗಲಿದೆ, ಯಾವುದೇ ವಯಸ್ಸಿನ ನಿಬಂಧನೆ ಇರುವುದಿಲ್ಲ, ಆದರೆ ಎಟಿಎಂ ಕಾರ್ಡ್ ಅನ್ನು 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ಬಳ ಸಬೇಕಿದೆ ಎಂದು ಮಾಹಿತಿ ನೀಡಿದರು.

ಸೈಬರ್ ಕ್ರೈಂಗಳು ಹೆಚ್ಚಾಗುತ್ತಿವೆ. ಜನರು ಜಾಗೃತ
ರಾಗಿರಬೇಕು, ಹಣಕಾಸಿನ ಮೋಸ ಮಾಡುವವರು ಯಾವುದೇ ರೀತಿಯಲ್ಲಿ ತಮ್ಮನ್ನು ಸಂಪರ್ಕಿಸಿ ತಮ್ಮಿಂದ ಮಾಹಿತಿ ಪಡೆದು ಹಣ ಕಿತ್ತುಕೊಳ್ಳುತ್ತಾರೆ, ಇಂತಹ ಪ್ರಕರಣಗಳು ನಡೆದರೆ ತಕ್ಷಣ ಸೈಬರ್ ಕೈಂ ಬ್ರಾಂಚಿಗೆ ದೂರು ನೀಡಬೇಕು ಎಂದು ತಿಳಿಸಿದರು. 

ಸಾವಿನ ನಂತರ ATM ಕಾರ್ಡ್‌ನ ಪ್ರಯೋಜನ:-

 ATM ಕಾರ್ಡ್ ವಿಮೆಯನ್ನು ಅಪಘಾತ ಮರಣ ವಿಮೆ ಎಂದೂ ಕರೆಯುತ್ತಾರೆ, ಇದು ಕಾರ್ಡುದಾರರ ಮರಣದ ನಂತರ ಕುಟುಂಬಗಳಿಗೆ ಹಣಕಾಸಿನ ನೆರವು ನೀಡುತ್ತದೆ. 

 ಎಟಿಎಂ ಕಾರ್ಡ್ ವಿಮೆಯ ಪ್ರಯೋಜನಗಳು 
 ಆಕಸ್ಮಿಕ ಸಾವು: ಆಕಸ್ಮಿಕ ಮರಣದ ಸಂದರ್ಭದಲ್ಲಿ ಹಣಕಾಸಿನ ನೆರವು ನೀಡುತ್ತದೆ

 ಶಾಶ್ವತ ಅಂಗವೈಕಲ್ಯ: ಶಾಶ್ವತ ಅಂಗವೈಕಲ್ಯ ಸಂದರ್ಭದಲ್ಲಿ ಹಣಕಾಸಿನ ನೆರವು ನೀಡುತ್ತದೆ
 ಕಳ್ಳತನ, ನಷ್ಟ ಅಥವಾ ದುರುಪಯೋಗ: ಎಟಿಎಂ ಕಾರ್ಡ್‌ನ ಕಳ್ಳತನ, ನಷ್ಟ ಅಥವಾ ದುರುಪಯೋಗದ ವಿರುದ್ಧ ರಕ್ಷಣೆ ನೀಡುತ್ತದೆ

 ಎಟಿಎಂ ಕಾರ್ಡ್ ವಿಮೆಯ  ಕ್ಲೈಮ್:-
 ಸಾವಿನ ನಂತರ ATM ಕಾರ್ಡ್ ವಿಮೆಯನ್ನು ಪಡೆಯಲು, ನೀವು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕಾಗಬಹುದು: ಮರಣ ಪ್ರಮಾಣಪತ್ರ
ಆಸ್ಪತ್ರೆಯ ಸಾವಿನ ಸಾರಾಂಶ,ಮರಣೋತ್ತರ ಪರೀಕ್ಷೆಯ ವರದಿ, ಖಾತೆಯ ಕಾನೂನು ಉತ್ತರಾಧಿಕಾರಿ ಅಥವಾ ನಾಮಿನಿಯಿಂದ ಕ್ಲೈಮ್ ಫಾರ್ಮ್ ಅಥವಾ ವಿನಂತಿ ಪತ್ರ,ಬ್ಯಾಂಕ್ ಹೇಳಿಕೆ
 ನಾಮಿನಿ ವಿವರಗಳು, ನಷ್ಟ ಪರಿಹಾರ ಬಾಂಡ್
 ಕಾರ್ಡುದಾರರೊಂದಿಗೆ ನಾಮಿನಿಯ ಸಂಬಂಧದ ಪುರಾವೆ, KYC ದಾಖಲೆಗಳು

#Attack #accident #death  #terrist #theft #rowdy #ಹಸಿವು #crime #cruel #horror #fire #assault #beating #ಚೇತನಾ #ಮುನಿಸ್ವಾಮಿ #ಗೌಡ #AI #devil #blood 
https://cmkarnatakastate.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ ಉದ್ಯಮ

*ಮೇಕೆ, ಆಡು, ವಾತಾ , ಇವುಗಳ ವ್ಯತ್ಯಾಸ ನಿಮಗೆ ತಿಳಿದಿದೆಯೇ* ?

*ರಾಹುಲ್ ಗಾಂಧಿ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಬೆಂಬಲ ಹಿಂಪಡೆಯಲಿ- ದಿಗ್ವಿಜಯ್ ಸಿಂಗ್ ಸಹೋದರ ಒತ್ತಾಯ*