ಬಜೆಟ್ ಅತ್ಯುತ್ತಮ ದಿಶಾ ಸಭೆಯಲ್ಲಿ, ಸಂಸದ ಡಾ. ಮಂಜುನಾಥ್*

 ಬಜೆಟ್ ಅತ್ಯುತ್ತಮ ದಿಶಾ ಸಭೆಯಲ್ಲಿ, ಸಂಸದ ಡಾ. ಮಂಜುನಾಥ್*

ಕರ್ನಾಟಕ*, ಫೆ. 21: ಕೇಂದ್ರ ಸರ್ಕಾರದ ವಿತ್ತ ಸಚಿವರಾದ ನಿರ್ಮಲ ಸೀತಾರಾಮನ್ ಅವರು ಸತತ 8ನೇ ಬಾರಿಗೆ ಮಂಡಿಸಿರುವ ಬಜೆಟ್‌ನಲ್ಲಿ ಆರೋಗ್ಯ, ರಕ್ಷಣೆ, ಕೃಷಿ ಉತ್ಪಾದಕತೆ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಮಂಜುನಾಥ್ ಅವರು ಸಂತಸ ವ್ಯಕ್ತ ಪಡಿಸಿದರು.

ಅವರು ಫೆ. 21ರ ಶುಕ್ರವಾರ ನಗರದ ಜಿಲ್ಲಾ ಪಂಚಾಯತ್‌ನ ಮಿನಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಕೃಷಿಗೆ ಆದ್ಯತೆ ನೀಡಿರುವ ಬಜೆಟ್‌ನಲ್ಲಿ ಪ್ರಧಾನ ಮಂತ್ರಿ ಧನ ಧಾನ್ಯ ಯೋಜನೆಯಡಿ 1.70 ರೈತರಿಗೆ ನೆರವು ನೀಡಲಾಗುತ್ತಿದೆ. ತೊಗರಿ ಬೆಳೆ ಹಾಗೂ ಅವರೆ ಬೇಳೆಯ ಉತ್ತಮ ಇಳುವರಿಗೆ ಕ್ರಮಕೈಗೊಳ್ಳಲಾಗಿದೆ. ರೈತರಿಗೆ 6,000 ರೂ.ಗಳ ನೇರ ನೆರವು ನೀಡಲಾಗುತ್ತಿದೆ. ರಾಗಿ, ಭತ್ತ ಸೇರಿದಂತೆ 23 ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿ ಬೆಳೆಗಳನ್ನು ಖರೀದಿಸಲಾಗುವುದು. ಫಸಲ್ ಭೀಮಾ ಯೋಜನೆಯಡಿ ರಾಮನಗರ ಜಿಲ್ಲೆಯಲ್ಲಿ 2.60 ಕೋಟಿ ರೂ.ಗಳನ್ನು ಕ್ಲೆöÊಮ್ ಮಾಡಲಾಗಿದೆ ಎಂದರು.

ಜನ್‌ಧನ್ ಯೋಜನೆಯಡಿ 73 ಕೋಟಿ ಬ್ಯಾಂಕ್ ಖಾತೆಗಳನ್ನು ಮಾಡಿಕೊಡಲಾಗಿದೆ. ದೇಶದಲ್ಲಿಯೇ ಯೂರಿಯಾ ಉತ್ಪಾದನೆಗೆ ಆದ್ಯತೆ ನೀಡಿರುವ ಸರ್ಕಾರವು ಅಸ್ಸಾಂನಲ್ಲಿ 22 ಲಕ್ಷ ಟನ್ ಯೂರಿಯಾ ಉತ್ಪಾದನೆಯ ಫ್ಯಾಕ್ಟರಿಯನ್ನು ಆರಂಭಿಸಲು ಬಜೆಟ್‌ನಲ್ಲಿ ಘೋಷಣೆ ಮಾಡಿದೆ ಎಂದು ಹೇಳಿದರು.

ರೈಲ್ವೆಗೆ ಸಂಬಂಧಿಸಿದಂತೆ ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ 835 ಕೋಟಿ ರೂಪಾಯಿ ಹಣ ಬಿಡುಗಡೆಯಾದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅವಧಿಯಲ್ಲಿ 7,564 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಚನ್ನಪಟ್ಟಣ ಹಾಗೂ ರಾಮನಗರ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು 51 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಬಿಡದಿ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದವರು ತಿಳಿಸಿದರು.

ದೇಶದ ಜಿಡಿಪಿ ಬೆಳವಣಿಗೆ ದರ 6.2 ರಿಂದ 6.3 ರಷ್ಟಿದೆ. ಆರ್ಥಿಕ ಬೆಳವಣಿಗೆಯಲ್ಲಿ ಭಾರತವು ಇದೇ ವೇಗದಲ್ಲಿ ಮುಂದುವರೆದರೆ 2027ಕ್ಕೆ ಜಗತ್ತಿನಲ್ಲಿ 3ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಹೆಣ್ಣು ಮಕ್ಕಳ ಆರ್ಥಿಕ ಸಬಲೀಕರಣಕ್ಕೆ ಸ್ವಂತ ಯೋಜನೆಗಳನ್ನು ಸ್ಥಾಪಿಸಲು 2 ಕೋಟಿ ರೂ.ಗಳ ವರೆಗೆ ಸಾಲ ಮಂಜೂರಾತಿ ಮಾಡಲಾಗುವುದು. ಹಾರೋಹಳ್ಳಿಯಲ್ಲಿ ಇಎಸ್‌ಐ ಆಸ್ಪತ್ರೆ ಸ್ಥಾಪಿಸಲಾಗುವುದು. ಪಿ.ಎಂ. ಶ್ರೀ ಯೋಜನೆಯಡಿ ದೇಶದಲ್ಲಿ 2000 ದಿಂದ 2500 ಕೇಂದ್ರೀಯ ವಿದ್ಯಾಲಯ ಸ್ಥಾಪನೆ ಮಾಡಲಾಗುವುದು. ಕೇಂದ್ರ ಸರ್ಕಾರದ ಬಜೆಟ್ ಬಡವರು, ಮಧ್ಯಮವರ್ಗ, ರೈತರ ಪರವಾಗಿದೆ ಎಂದು ಹೇಳಿದರು.

 #Muniswamy #Riya #YOGI #ಚೇತನಾ #ಆದಿಚುಂಚನಗಿರಿ #ಬಾಲಗಂಗಾಧರ #ನಿರ್ಮಲಾನಂದನಾಥ #ಕುವೆಂಪು #ವಚನ #ದಾಸ #AI #bgs #ದಾಸ #Dasaokkaliga
https://maps.app.goo.gl/1D5CWP8dXvHWwcKo9?g_st=ac

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ ಉದ್ಯಮ

*ರಾಹುಲ್ ಗಾಂಧಿ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಬೆಂಬಲ ಹಿಂಪಡೆಯಲಿ- ದಿಗ್ವಿಜಯ್ ಸಿಂಗ್ ಸಹೋದರ ಒತ್ತಾಯ*

ಕಳ್ಳತನವಾದ100 ದ್ವಿಚಕ್ರ ವಾಹನಗಳು ಪತ್ತೆ :ಆಯುಕ್ತ ದಯಾನಂದ*