*ದಿನಕ್ಕೊಂದು ಸಾಮಾನ್ಯ ಪ್ರಶ್ನೋತ್ತರ
*ದಿನಕ್ಕೊಂದು ಸಾಮಾನ್ಯ ಪ್ರಶ್ನೋತ್ತರ :-
ಕರ್ನಾಟಕ, ಮಾರ್ಚ್ 05:ದಿನಕ್ಕೊಂದು ಸಾಮಾನ್ಯ ಪ್ರಶ್ನೋತ್ತರ :
1) ಶ್ರೀ ಧೀರೇಂದ್ರತೀರ್ಥರ ವೃಂದಾವನ ಯಾವ ಕ್ಷೇತ್ರದಲ್ಲಿ ಯಾವ ನದೀತೀರದಲ್ಲಿದೆ ?
*ಉತ್ತರ :- ಹೊಸರಿತ್ತಿ ಕ್ಷೇತ್ರದಲ್ಲಿ ವರದಾನದೀತೀರದಲ್ಲಿದೆ.*
ದಿನಕ್ಕೊಂದು ಸಂಸ್ಕೃತಕಲಿಕೆಯ ಪ್ರಶ್ನೋತ್ತರ :-
2) *ಮಾಷವಟಿಕಾ* ಎಂಬ ಪದಕ್ಕೆ ಕನ್ನಡದ ಅರ್ಥವೇನು ?
*ಉತ್ತರ :- ಉತ್ತರ :- ಉದ್ದಿನವಡಾ.*
ದಿನಕ್ಕೊಂದು ಮಹಾಭಾರತ ಪ್ರಶ್ನೋತ್ತರ :-
3) ಕರ್ಣನ ಸರ್ಪಾಸ್ತ್ರದಿಂದ ಅರ್ಜುನನನ್ನು ರಕ್ಷಣೆ ಯಾರು ಹೇಗೆ ಮಾಡಿದರು?
*ಉತ್ತರ :- ರಥವನ್ನು ನೆಲಕ್ಕೆ ತುಳಿಯುವ ಮೂಲಕ ಶ್ರೀಕೃಷ್ಣಪರಮಾತ್ಮನು ರಕ್ಷಿಸಿದನು.*
ದಿನಕ್ಕೊಂದು ವೇಂಕಟೇಶಮಹಾತ್ಮೆ ಪ್ರಶ್ನೋತ್ತರ :-
4) ಶಿಷ್ಟರಕ್ಷಣೆ, ದುಷ್ಟರಿಗೆ ಶಿಕ್ಷೆ ನೀಡುವ ಕೆಲಸವನ್ನು ಶ್ರೀನಿವಾಸ ಯಾರಿಗೆ ನೀಡಿದನು?
*ಉತ್ತರ :- ಯಮದೇವರಿಗೆ.*
ದಿನಕ್ಕೊಂದು ಭಾಗವತ ಪ್ರಶ್ನೋತ್ತರ :-
5) ದುಷ್ಯಂತ-ಶಕುಂತಲೆಯರ ಮಗ ಯಾರು ?
*ಉತ್ತರ :- ಭರತ (ಸರ್ವದಮನ)*
ದಿನಕ್ಕೊಂದು ಸಾಮಾನ್ಯ ಪ್ರಶ್ನೋತ್ತರ :-
6) ವಾಯುಸ್ತುತಿಯನ್ನು ರಚಿಸಿದವರು ಯಾರು ?
*ಉತ್ತರ :- ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು*
ದಿನಕ್ಕೊಂದು ಸಂಸ್ಕೃತಕಲಿಕೆಯ ಪ್ರಶ್ನೋತ್ತರ :-
7) *ತಕ್ರಂ* ಅನ್ನುವ ಪದಕ್ಕೆ ಕನ್ನಡದ ಅರ್ಥವೇನು?
*ಉತ್ತರ :- ಮಜ್ಜಿಗೆ ಎಂದು ಅರ್ಥ.*
ದಿನಕ್ಕೊಂದು ಮಹಾಭಾರತ ಪ್ರಶ್ನೋತ್ತರ :-
8) ಕರ್ಣನನ್ನು ಕೊಲ್ಲಲು ಅರ್ಜುನನು ಬಳಸಿದ ಅಸ್ತ್ರ ಯಾವುದು ?
*ಉತ್ತರ :- ಅಂಜಲಿಕಾಸ್ತ್ರ*
ದಿನಕ್ಕೊಂದು ವೇಂಕಟೇಶಮಹಾತ್ಮೆ ಪ್ರಶ್ನೋತ್ತರ :-
8) ಪರಿಮಳ ದ್ರವ್ಯಗಳ ವ್ಯವಸ್ಥೆಯನ್ನು ಶ್ರೀನಿವಾಸನು ಯಾರಿಗೆ ನೀಡಿದನು ?
*ಉತ್ತರ :- ವಾಯುದೇವರಿಗೆ*
ದಿನಕ್ಕೊಂದು ಭಾಗವತ ಪ್ರಶ್ನೋತ್ತರ :-
9) ಸಂಕೃತಿಯ ಮಗ ಯಾರು?
*ಉತ್ತರ :- ರಂತಿದೇವ*
ದಿನಕ್ಕೊಂದು ಸಾಮಾನ್ಯ ಪ್ರಶ್ನೋತ್ತರ :-
10) ರುಕ್ಮಿಣೀದೇವಿ ಯಾರ ಅವತಾರ ?
*ಉತ್ತರ :- ಸಾಕ್ಷಾತ್ ಶ್ರೀ ಲಕ್ಷ್ಮೀದೇವಿಯ ಅವತಾರ.*
ದಿನಕ್ಕೊಂದು ಸಂಸ್ಕೃತಕಲಿಕೆಯ ಪ್ರಶ್ನೋತ್ತರ :-
11) *ಕೂಷ್ಮಾಂಡ* ಅನ್ನುವ ಪದಕ್ಕೆ ಕನ್ನಡದ ಅರ್ಥವೇನು?
*ಉತ್ತರ :- ಸಿಹಿಗುಂಬಳ*
ದಿನಕ್ಕೊಂದು ಮಹಾಭಾರತ ಪ್ರಶ್ನೋತ್ತರ :-
*12) ಸತ್ತ ಅರ್ಜುನನನ್ನು ಬದುಕಿಸಲು ಬಭ್ರುವಾಹನನು ಏನು ಮಾಡಿದನು ?
*ಉತ್ತರ :- ನಾಗಲೋಕಕ್ಕೆ ಹೋಗಿ ಸಂಜೀವಕಮಣಿಯನ್ನು ತಂದನು.*
ದಿನಕ್ಕೊಂದು ವೇಂಕಟೇಶಮಹಾತ್ಮೆ ಪ್ರಶ್ನೋತ್ತರ :-
*13) ಕುಬೇರ ಶ್ರೀನಿವಾಸನಿಗೆ ಸಾಲ ಕೊಟ್ಟ ವಿಷಯದಲ್ಲಿ ಎರಡನೇ ಸಾಕ್ಷಿ ಯಾರಾಗಿದ್ದರು ?
*ಉತ್ತರ :- ರುದ್ರದೇವರು*
ದಿನಕ್ಕೊಂದು ಭಾಗವತ ಪ್ರಶ್ನೋತ್ತರ :-
*14) ವಸುದೇವನು ಬುಟ್ಟಿಯಲ್ಲಿ ಪುಟ್ಟ ಶ್ರೀಕೃಷ್ಣನನ್ನು ಎಲ್ಲಿಗೆ ಕರೆದೊಯ್ದನು ?
*ಉತ್ತರ :- ನಂದಗೋಕುಲಕ್ಕೆ.*
ದಿನಕ್ಕೊಂದು ಸಾಮಾನ್ಯ ಪ್ರಶ್ನೋತ್ತರ :-
*15) ಶ್ರೀಮನ್ನ್ಯಾಯಸುಧಾಗ್ರಂಥಕ್ಕೆ 'ಬಿಂದು' ಎಂಬ ವ್ಯಾಖ್ಯಾನವನ್ನು ಬರೆದವರು ಯಾರು ?
*ಉತ್ತರ :- ಶ್ರೀ ವಿಜಯೀಂದ್ರತೀರ್ಥರು.*
ದಿನಕ್ಕೊಂದು ಸಂಸ್ಕೃತಕಲಿಕೆಯ ಪ್ರಶ್ನೋತ್ತರ :-
*16) ಸೇವಂತಿಪುಷ್ಪ ಎಂಬ ಪದಕ್ಕೆ ಅರ್ಥವೇನು ?
*ಉತ್ತರ :- ಶ್ಯಾವಂತಿಗೆ ಹೂವು.*
*17) ಬಭ್ರುವಹನನಿಂದ ಹತನಾದ ಪಾಂಡವ ಯಾರು?
*ಉತ್ತರ :- ಅರ್ಜುನ*
ದಿನಕ್ಕೊಂದು ವೇಂಕಟೇಶಮಹಾತ್ಮೆ ಪ್ರಶ್ನೋತ್ತರ :-
*18) ಕುಬೇರ ಶ್ರೀನಿವಾಸನಿಗೆ ಸಾಲ ಕೊಟ್ಟ ವಿಷಯದಲ್ಲಿ ಮೊದಲನೇ ಸಾಕ್ಷಿ ಯಾರು ?
*ಉತ್ತರ :- ಬ್ರಹ್ಮದೇವರು.*
ದಿನಕ್ಕೊಂದು ಭಾಗವತ ಪ್ರಶ್ನೋತ್ತರ :-
19) ವಸುದೇವನು ಹೋಗುವಾಗ ಯಮನಾನದಿ ದಾರಿ ಬಿಡಲು ಕಾರಣವೇನು ?
*ಉತ್ತರ :- ವಸುದೇವನ ಕೈಯಲ್ಲಿ ಬಂಧಮೋಚಕನಾದ ಶ್ರೀಕೃಷ್ಣ ಇದ್ದ. ಕಾರಣ*
ದಿನಕ್ಕೊಂದು ಸಾಮಾನ್ಯ ಪ್ರಶ್ನೋತ್ತರ :-
*20) ಕುಂಭಕೋಣ ಕ್ಷೇತ್ರದಲ್ಲಿ ಯಾರ ಮೂಲವೃಂದಾವನ ಇದೆ ?
*ಉತ್ತರ :- ಶ್ರೀ ವಿಜಯೀಂದ್ರತೀರ್ಥರ ಮೂಲವೃಂದಾವನ ಇದೆ.*
ದಿನಕ್ಕೊಂದು ಸಂಸ್ಕೃತಕಲಿಕೆಯ ಪ್ರಶ್ನೋತ್ತರ :-
*21) ಕಾಡುಮಲ್ಲಿಗೆಗೆ ಸಂಸ್ಕೃತದಲ್ಲಿ ಏನೆಂದು ಕರೆಯುತ್ತಾರೆ?
*ಉತ್ತರ :- ಮಾಲತಿಪುಷ್ಪ ಎಂದು ಕರೆಯುತ್ತಾರೆ.*
#ಶ್ರೀ #ನಾಮ #hill #om #temple #Book #story #Chethana #Oldest #culture #tradition #mantra #ಸನಾತನ #ಗೌಡ #yogi #riya #swami #ಶ್ರೀಮತಿ #ಭಾರತ #truth #trust #ಮಠ #raya #ದಾಸ #ಕೃಷ್ಣ #ರಾಮ #ಈಶ್ವರ #Devi #Litrature
https://pratilipi.page.link/yyeYky1GboXSBxrr9
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏