ಶ್ರೀ ಪುರಂದರ ದಾಸರ ಕೀರ್ತನೆಗಳು:
ಶ್ರೀ ಪುರಂದರ ದಾಸರ ಕೀರ್ತನೆಗಳು:-
*ಹರಿದಾಸ ಹೃದಯ*
*ಇದು ಭಾಗ್ಯ*
ಶ್ರೀಪುರಂದರದಾಸರ ಜೀವನದ ಕ್ಷಣಗಳು, ಬರಹದ ಅಕ್ಷರಗಳು, ಉದ್ಭೋದಕ ಹಾಗೂ ಚಿಂತನೀಯ. . ಇವರ ಕೃತಿ-
*ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ll*
ಕೀರ್ತನೆಯ ಮೊದಲ ಸಾಲಿನಲ್ಲಿ *ಇದು* ಹಾಗೂ *ಭಾಗ್ಯ* ಪದಗಳು ಮೂರು ಸಲ ಬಂದಿದೆ. ಇದನ್ನೆಲ್ಲೂ ಕಾಣೆವು. ಅಲ್ಲದೆ ಇದರ ಪ್ರಯೋಗ ಪರಿಕಲ್ಪನೆ ಊಹಾತೀತ. ಇದು ಭಾಗ್ಯ ಎಂಬುದರ ಪುನರುಕ್ತಿಗೆ ಕಡೆ ಎಂಬುದಿಲ್ಲವೆಂದು ತಿಳಿಯಬೇಕು. ಈ ಕರ್ಮಭೂಮಿಯಾದ ಭರತಖಂಡದಲ್ಲಿ ಜನಿಸಿದ್ದು ಇದು ಭಾಗ್ಯ. ಈ ಜನ್ಮ ಪಡೆದದ್ದು, ಈ ದೇಹದ ಸಂಪಾದನೆ, ದುರ್ಲಭವಾದ ಈ ವೈಷ್ಣವತ್ವ, ಈ ಸಿದ್ಧಾಂತಾನುಯಾಯಿತ್ವ; ಈ ಸಂಸ್ಕಾರ - ಪರಂಪರೆ, ಈ ಕಾಲ ದೇಶಗಳು, ಈ ಯತಿವರೇಣ್ಯರ ಹಾಗೂ ಹರಿದಾಸರ ಪರಂಪರೆ ಸಿಕ್ಕದ್ದು, ಇಂತಹ ಪರಿಸರ ... ಒಂದೆ ಎರಡೆ, ಇವೆಲ್ಲಾ ಭಾಗ್ಯವಲ್ಲವೆ ?
ಈ ಜನುಮದಲ್ಲಿ, ಮುಂದಿನ ಜನುಮಗಳಲ್ಲಿಯೂ ಈ ಭಾಗ್ಯಹೊಂದಲು ನಾವು ಹೇಗಿರಬೇಕೆಂಬ ಪಟ್ಟಿಯನ್ನೇ ಕೊಡುವರು.
*ಕಲ್ಲಾಗಿ ಇರಬೇಕು ಕಠಿಣಭವ ತೊರೆಯೊಳಗೆ*
*ಬಿಲ್ಲಾಗಿ ಇರಬೇಕು ಬಲ್ಲವರೊಳು l*
*ಮೆಲ್ಲನೆ ಮಾಧವನ ಮನವ ಮೆಚ್ಚಿಸಬೇಕು*
*ಬೆಲ್ಲವಾಗಿರಬೇಕು ಬಂಧು ಜನರೊಳಗೆ ll 1 ll*
*
*ಬುದ್ಧಿಯಲಿ ತನುಮನವ ತಿದ್ದಿಕೊಳ್ಳಲಿ ಬೇಕು*
*ಮುದ್ದಾಗಿ ಇರಬೇಕು ಮುನಿಯೋಗಿಗಳಿಗೆ l*
*ಮಧ್ವಮತಾಭ್ಧಿಯೊಳು ಮೀನಾಗಿ ಇರಬೇಕು*
*ಶುದ್ಧನಾಗಿರಬೇಕು ಕರಣ ತ್ರಯಗಳಲಿ ll 2 ll*
#vultureculture #bone #davidboreanaz #temperancebrennan #bon #s #seeleybooth #halloween #death #anatomy #odditiesandcuriosities #bonestv #artist #bonespersonalizados #nature #goth #curiosities #boothandbrennan #bonestvshow #boneart #gothic #osteology
*ವಿಷಯ ಭೋಗದ ತೃಣಕೆ ಉರಿಯಾಗಿರಲು ಬೇಕು*
*ನಿಶಿ ಹಗಲು ಹರಿಯ ನೆನೆಯ ಬೇಕು l*
*ವಸುಧೇಶ ಪುರಂದರವಿಟ್ಠಲರಾಯನ*
*ಹಸನಾದ ದಾಸರನು ಸೇವಿಸಲು ಬೇಕು ll 3 ll*
ದಾಸರು ಸಿದ್ಧಾಂತದ ತತ್ತ್ವಗಳೊಂದಿಗೆ ಜೀವನ ಸಾಗಿಸಿ ಪಾವನವನ್ನಾಗಿಸಲು ತಮ್ಮ ಶೈಲಿಯಲ್ಲಿ ಹಿತವಚನಗಳನ್ನು ಸಾದರಪಡಿಸಿರುವರು. ಇವುಗಳ ಪಾಲನೆಗೆ ಅವರ ಅನುಗ್ರಹ ಬೇಡೋಣ.
ದಾಸನೆಂತಾಗುವೆನು ಧರೆಯೊಳಗೆ ನಾನು'* ಎಂದು ತಮ್ಮ ಅಳಲನ್ನು ತೋಡಿಕೊಂಡರು.
*ದಾಸನ್ನ ಮಾಡಿಕೊ ಎನ್ನ ಸ್ವಾಮಿ l*
*ಸಾಸಿರ ನಾಮದ ವೆಂಕಟರಮಣ ll ಪ ll*
ಹೇ ಸ್ವಾಮಿ ! ನೀನು ಈಶ, ಅದಕ್ಕೇ ನನ್ನನ್ನು ದಾಸನನ್ನಾಗಿಸಿಕೊಂಡು ಉದ್ಧರಿಸೆಂದು ಬೇಡಿದರು ದಾಸರು. *'ದಾಸನ್ನ ಮಾಡಿಕೊ ಎನ್ನ'* ಈ ಕೂಗು ಎಲ್ಲ ಸಜ್ಜನರದ್ದಾಗಲೆಂದು ದಾಸರು ಸೂಚಿಸುವರು.
*ದುರುಳ ಬುದ್ಧಿಗಳನ್ನೆಲ್ಲ ಬಿಡಿಸೋ ನಿನ್ನ*
*ಕರುಣ ಕವಚವೆನ್ನ ಹರಣಕ್ಕೆ ತೊಡಿಸೊ*
*ಚರಣ ಸೇವೆ ಎನಗೆ ಕೊಡಿಸೊ ಅಭಯ*
*ಕರಪುಷ್ಪ ಎನ್ನಯ ಶಿರದೊಳು ಮುಡಿಸೊ ll 1 ll*
ಜೀವನವನ್ನು ಸನ್ಮಾರ್ಗದಲ್ಲಿ ರೂಪಿಸಿಕೊಳ್ಳಲು ಆಡಿದ ಮಾತುಗಳಿವು. 'ನಾನು ನಿಜಾರ್ಥದಲ್ಲಿ ದಾಸನೆನಿಸಲು, ನನ್ನಲ್ಲಿರುವ ದೋಷಗಳನ್ನು ನೀನೇ ನಿವಾರಿಸು' ಎನ್ನುವರು.
*ದೃಢಭಕ್ತಿ ನಿನ್ನಲ್ಲಿ ಬೇಡಿ ದೇವ*
*ಅಡಿಗೆರಗುವೆನಯ್ಯ ಅನುದಿನ ಪಾಡಿ l*
*ಕಡೆಗಣ್ಣಲೇಕೆನ್ನ ನೋಡಿ ಬಿಡುವೆ l*
*ಕೊಡು ನಿನ್ನ ಧ್ಯಾನವ ಮನ ಶುಚಿ ಮಾಡಿ ll 2 ll*
ಶ್ರೀಹರಿಯ ಒಲುಮೆ ಬೇಕಾದಲ್ಲಿ ಅವನಲ್ಲಿ ಅಚಲವಾದ, ನೀರ್ವ್ಯಾಜಭಕ್ತಿ ಇರಬೇಕು.
*ಮೊರೆಹೊಕ್ಕವರ ಕಾಯ್ವ ಬಿರುದು ನೀ*
*ಮರೆಯದಲೆ ರಕ್ಷಣೆ ಮಾಡೆನ್ನ ಪೊರೆದು*
*ದುರಿತ ರಾಶಿಗಳೆಲ್ಲ ತರಿದು ಸ್ವಾಮಿ*
*ಪುರಂದರವಿಟ್ಠಲ ಕರುಣದಿ ಕರೆದು ll 3 ll - ಶ್ರೀಪುರಂದರದಾಸರು.*
'ಶ್ರೀಹರಿ ಭಕ್ತವತ್ಸಲ, ಅನಿಮಿತ್ತಬಂಧು, ಕರುಣಾಸಾಗರ, ದಯಾಮಯ, ಪರಮಾಪ್ತ ಇಂತೆಲ್ಲಾ ವಾಸ್ತವಿಕೆ ಇರಲು ನನ್ನನ್ನು ನಿನ್ನ ಭಕ್ತನೆಂದು ಪರಿಗಣಿಸಿ ರಕ್ಷಿಸು ದೇವ' ಎಂದು ಕೇಳುವರು.
* * * * * *
*ನಿನ್ನ ಕರುಣವೆ ಶುಭ ನಿನ್ನ ಕರುಣವೆ ಲಾಭ l ಮೊ.ಶೇ.*
* * * * * *
*ಹರಿದಾಸ ಹೃದಯ ಗ್ರಂಥದಿಂದ*
*ದಿನಕ್ಕೊಂದು ಹರಿದಾಸರ ಸವಿನುಡಿ*- *ಸಾಧನ ಸಂದೇಶ*
*ಸುಮತಿ-ಸುಮನ-ಸುಬಾಳಿಗೆ ಮೌಲ್ಯಗಳು*
*ಪ್ರಕಾಶನ - ಶ್ರೀಮಾಧ್ವಗ್ರಂಥ ಪ್ರಕಾಶನ - ಬೆಂಗಳೂರು*
ಆರತಿಯ ಬೆಳಗಿರೆ ll ಪ ll
ಅರಸಿ ರುಕ್ಮಿಣಿ ಕೂಡ ಅರಸು ವಿಟ್ಠಲಗೆ
ಬಿರುದಿನ ಶಂಖವ ಪಿಡಿದ ವಿಟ್ಠಲಗೆ ll
ಸರಸಿಜಸಂಭವ ಸನ್ನುತ ವಿಟ್ಠಲಗೆ
ನಿರುತ ಇಟ್ಟಿಗೆ ಮೇಲೆ ನಿಂತ ವಿಟ್ಠಲಗೆ ll 1 ll
ದಶರಥರಾಯನ ಉದರದಿ ವಿಟ್ಠಲ
ಶಿಶುವಾಗಿ ಜನಿಸಿದ ಶ್ರೀರಾಮ ವಿಟ್ಠಲ ll
ಪಶುಪತಿ ಗೋಪಿಯ ಕಂದನೆ ವಿಟ್ಠಲ
ಅಸುರೆ ಪೂತನಿಯ ಕೊಂದ ವಿಟ್ಠಲಗೆ ll 2 ll
ಕಂಡಿರ ಬೊಬ್ಬುರ ವೆಂಕಟವಿಟ್ಠಲನ
ಅಂಡಜವಾಹನ ಅಹುದೋ ನೀ ವಿಟ್ಠಲ ll
ಪಾಂಡುರಂಗ ಕ್ಷೇತ್ರ ಪಾವನ ವಿಟ್ಠಲ
ಪುಂಡರೀಕಾಕ್ಷ ಶ್ರೀಪುರಂದರವಿಟ್ಠಲಗೆ ll 3 ll
ರಾಗ - : ತಾಳ -
ದೇವಕಿನಂದನ ಮುಕುಂದ ll ಪ ll
ನಿಗಮೋದ್ಧಾರ - ನವನೀತ ಚೋರ l
ಖಗಪತಿವಾಹನ ಜಗದೋದ್ಧಾರ ll 1 ll
ಶಂಖ - ಚಕ್ರಧರ - ಶ್ರೀ ಗೋವಿಂದ l
ಪಂಕಜಲೋಚನ ಪರಮಾನಂದ ll 2 ll
ಮಕರಕುಂಡಲಧರ - ಮೋಹನವೇಷ l
ರುಕುಮಿಣಿವಲ್ಲಭ ಪಾಂಡವಪೋಷ ll 3 ll
ಕಂಸಮರ್ದನ - ಕೌಸ್ತುಭಾಭರಣ l
ಹಂಸವಾಹನ ಪೂಜಿತ ಚರಣ ll 4 ll
ವರವೇಲಾಪುರ ಚೆನ್ನಪ್ರಸನ್ನ l
ಪುರಂದರವಿಟ್ಠಲ ಸಕಲಗುಣಪೂರ್ಣ ll 5 ll
ರಾಗ - : ತಾಳ -
ಮಂಗಳಂ ಜಯಮಂಗಳಂ ll ಪ ll
ವಾತಸುತ ಹನುಮನ ಒಡೆಯಗೆ ಮಂಗಳ
ದಾತ ಶ್ರೀ ರಘುಪತಿಗೆ ಮಂಗಳ ll
ಸೇತುವೆಗಟ್ಟಿದ ರಾಯಗೆ ಮಂಗಳ
ಸೀತಾರಮಣಗೆ ಶುಭ ಮಂಗಳ ll 1 ll
ಬಿಲ್ಲ ಹಿಡಿದು ಬಲು ಬಿಂಕದ ದೈತ್ಯರ
ಹಲ್ಲು ಮುರಿದವಗೆ ಮಂಗಳ ll
ಕಲ್ಲಾದಹಲ್ಯೆಯನುದ್ಧಾರ ಮಾಡಿದ
ಬಲ್ಲಿದ ದಾಶರಥಿಗೆ ಮಂಗಳ ll 2 ll
ಹರಧನು ಮುರಿದ ವಿನೋದಿಗೆ ಮಂಗಳ
ವರದ ತಿಮ್ಮಪ್ಪಗೆ ಮಂಗಳ ll
ಪುರಂದರವಿಟ್ಠಲರಾಯಗೆ ಮಂಗಳ
ಸರುವೋತ್ತಮನಿಗೆ ಶುಭಮಂಗಳ
ರಾಗ - : ತಾಳ -
ಆರತಿಯ ಬೆಳಗಿರೆ ll ಪ ll
ಅರಸಿ ರುಕ್ಮಿಣಿ ಕೂಡ ಅರಸು ವಿಟ್ಠಲಗೆ
ಬಿರುದಿನ ಶಂಖವ ಪಿಡಿದ ವಿಟ್ಠಲಗೆ ll
ಸರಸಿಜಸಂಭವ ಸನ್ನುತ ವಿಟ್ಠಲಗೆ
ನಿರುತ ಇಟ್ಟಿಗೆ ಮೇಲೆ ನಿಂತ ವಿಟ್ಠಲಗೆ ll 1 ll
ದಶರಥರಾಯನ ಉದರದಿ ವಿಟ್ಠಲ
ಶಿಶುವಾಗಿ ಜನಿಸಿದ ಶ್ರೀರಾಮ ವಿಟ್ಠಲ ll
ಪಶುಪತಿ ಗೋಪಿಯ ಕಂದನೆ ವಿಟ್ಠಲ
ಅಸುರೆ ಪೂತನಿಯ ಕೊಂದ ವಿಟ್ಠಲಗೆ ll 2 ll
ಕಂಡಿರ ಬೊಬ್ಬುರ ವೆಂಕಟವಿಟ್ಠಲನ
ಅಂಡಜವಾಹನ ಅಹುದೋ ನೀ ವಿಟ್ಠಲ ll
ಪಾಂಡುರಂಗ ಕ್ಷೇತ್ರ ಪಾವನ ವಿಟ್ಠಲ
ಪುಂಡರೀಕಾಕ್ಷ ಶ್ರೀಪುರಂದರವಿಟ್ಠಲಗೆ ll 3 ll
.
ರಾಗ - : ತಾಳ -
ಇನ್ನೇಕೆ ಯಮನ ಬಾಧೆಗಳು ? l
ಎನ್ನ ಜಿಹ್ವೆಯೊಳಗೆ ಹರಿನಾಮವಿರಲು ll ಪ ll
ಪತಿತ ಪಾವನನೆಂಬ ನಾಮ-ಸಕಲ l
ಶ್ರುತಿತತಿಗಳಿಗೆಲ್ಲ ನಿಲುಕದೀ ನಾಮ ll
ಕ್ರುತುಕೋಟಿ ಫಲ ಒಂದೇ ನಾಮ-ಸದ್ l
ಗತಿಗೆ ಸಂಗಡ ಬಾಹೋದಲೆ ದಿವ್ಯನಾಮ ll 1 ll
ಮುನ್ನ ಪ್ರಹ್ಲಾದನೆ ಸಾಕ್ಷಿ - ನಮ್ಮ l
ಕನ್ಯಾಶಿರೋಮಣಿ ದ್ರೌಪದಿ ಸಾಕ್ಷಿ ll
ಚೆನ್ನ ಅಜಮಿಳನೊಬ್ಬ ಸಾಕ್ಷಿ ಆ l
ಉನ್ನಂತ ಲೋಕವಾಳುವ ಧ್ರುವ ಸಾಕ್ಷಿ ll 2 ll
ಹದಿನಾಲ್ಕು ಲೋಕವಾಳುವ - ನಮ್ಮ l
ಮದನ ಜನಕನಾಗಿ ಮಹಿಮೆ ತೋರುವ ll
ಪದುಮನಾಭನಾಗಿ ಮೆರೆವ - ನಮ್ಮ l
ಪುರಂದರವಿಟ್ಠಲನ ಹರುಷದಿ ಕರೆವ ll 3
ರಾಗ - : ತಾಳ -
ನಂಬಿದೆ ನಿನ್ನ ಪಾದವ, ವೆಂಕಟರಮಣ
ನಂಬಿದೆ ನಿನ್ನ ಪಾದವ ll ಪ ll
ನಂಬಿದೆ ನಿನ್ನ ಪಾದಾಂಬುಜಯುಗಳವ
ಚಂದದಿ ಸಲಹೋ ಮಂದರಧರನೆ ll ಅ ಪ ll
ತಂದೆಯು ನೀನೇ ತಾಯಿಯು ನೀನೇ
ಬಂಧುಬಳಗವು ನೀನೆ
ಬಂದ ದುರಿತವೆಲ್ಲ ಹೊಂದಿಕೊಳ್ಳದಂತೆ
ಬಂದೆನ್ನ ಸಲಹೋ ಮುಕುಂದಮುರಾರಿ ll 1 ll
ಚಿಕ್ಕಂದು ಮೊದಲು ನಾನು ನಿನ್ನಯ ಪಾದ
ಹೊಕ್ಕು ಜೀವಿಸುತಿಹೆನು
ಘಕ್ಕನೆ ಜ್ಞಾನವ ಅಕ್ಕರದಿಂದಲೆ ಕೊಡು
ಮಕ್ಕಳ ಮಾಣಿಕ್ಯ ರುಕ್ಮಿಣಿಯರಸ ll 2 ll
ಮರೆತು ಮಾಯದೊಳು ಮುಳುಗಿದೆ ಮಾಯ-
ವರಿತು ಅರಿಯದಾದೆ
ಮರೆಯದೆ ಎನ್ನನು ಸಲಹೊ ಕೃಪಾನಿಧಿ
ವರದ ಶ್ರೀವೆಂಕಟ ಪುರಂದರವಿಠಲ ll 3 ll
ರಾಗ - : ತಾಳ -
ಏನ ಪೇಳಲಿ ನಾನು ಕೃಷ್ಣನ
ಮಹಿಮೆ, ಯಾರಿಗೂ ತಿಳಿಯದಮ್ಮ ll ಪ ll
ಹೊತ್ತಾರೆದ್ದು ಯಶೋದೆ ಮುತ್ತು ಪೋಣಿಸುತ್ತಿದ್ದಳು,
ಹತ್ತಿರಿದ್ದ ಕೃಷ್ಣ ಬಂದು ಒಂದು ಮುತ್ತು ತೆಗೆದುಕೊಂಡು
ಸುತ್ತಲಿದ್ದ ಹುಡುಗರ ಸಹಿತ ಹಿತ್ತಲೊಳಗೆ ಬಿತ್ತಿ ಹೋದ ll ಅ ಪ ll
ಪರಿಪರಿ ಚಿಂತೆಯಿಂದ ಯಶೋದೆ ಗೋಪ್ಯರ ಕಳುಹಿದಳು,
ಸಂದು ಸಂದಲ್ಲಿ ಹುಡುಕಿ ಹುಡುಕಿ ಕಂದ ಕಾಣನೆಂದು ಬರಲು,
ಒಂದು ಕ್ಷಣದಲ್ಲಿ ಕೃಷ್ಣ ಬಂದು ಎದುರಾಗಿ ನಿಂದ ಕಂದ ll 1 ll
ಕಂದಯ್ಯನ ಕರವ ಪಿಡಿದು, ಯಶೋದೆ ಕರೆ ತಂದಳು ಮನೆಗೆ,
ಕಂದ ಬಹಳ ಹಸಿದನೆಂದು ತುತ್ತು ಮಾಡಿ ಉಣಿಸಿದಳು,
ಕಂದ ಮುತ್ತು ತೋರಿಸು ಚಂದಿರ ನೀನೆಂದು ಮುದ್ದಿಸಿದಳು ll 2 ll
ತಾಯ ಕರೆದು ಹಿತ್ತಲೊಳಗೆ ಮುತ್ತಿನ ಗಿಡವ ತೋರಿಸಿದ
ಪಂಟೆ ಪಂಟೆಗೆ ಎಂಟು ಎಂಟು ಗೊಂಚು ಗೊಂಚು ಜೋಲುತಿರಲು,
ಕಡಿದು ಕಡಿದು ರಾಶಿ ಹಾಕಿದ ಪರಮ ಪುರಂದರ ವಿಠಲರಾಯ ll 3 ll
ರಾಗ - : ತಾಳ -
ಹರಿ ನಾರಾಯಣ ಹರಿ ನಾರಾಯಣ
ಹರಿ ನಾರಾಯಣ ಎನು ಮನವೆ ll ಪ ll
ನಾರಾಯಣನೆಂಬೊ ನಾಮದ ಬೀಜವ
ನಾರದ ಬಿತ್ತಿದ ಧರೆಯೊಳಗೆ ll ಅ ಪ ll
ತರಳ ಧ್ರುವನಿಂದ ಅಂಕುರಿಸಿತು ಅದು
ವರ ಪ್ರಹ್ಲಾದನಿಂದ ಮೊಳಕೆಯಾಯಿತು
ಧರಣೀಶ ರುಕುಮಾಂಗದನಿಂದ ಚಿಗುರಿತು
ಕುರು ಪಿತಾಮಹನಿಂದ ಹೂವಾಯಿತು ll 1 ll
ವಿಜಯನ ಸತಿಯಿಂದ ಫಲವಾಯಿತು ಅದು
ಗಜರಾಜನಿಂದ ದೋರೆ ಹಣ್ಣಾಯಿತು
ದ್ವಿಜ ಶುಕಮುನಿಯಿಂದ ಫಲಪಕ್ವವಾಯಿತು
ಅಜಮಿಳ ತಾನುಂಡು ರಸ ಸವಿದ ll 2 ll
ಹೂವುಗಳು ಸರ ಎಂದು ಧರಿಸುವಿರಾ? ಎಚ್ಚರಿಕೆ!
Would you wear a garland of flowers? Warning!
ಹೂವುಗಳು ಸರ ಎಂದು ಧರಿಸುವಿರಾ? ಎಚ್ಚರಿಕೆ!
#bones #skull #skulls #skeleton #art #oddities #taxidermy #emilydeschan
ಕಾಮಿತ ಫಲವೀವ ನಾಮವೊಂದಿರಲಿಕ್ಕೆ
ಹೋಮ ನೇಮ ಜಪ ತಪವೇಕೆ
ಸ್ವಾಮಿ ಶ್ರೀ ಪುರಂದರವಿಟ್ಠಲನ ನಾಮವ
ನೇಮದಿಂದ ನೀ ನೆನೆ ಮನವೆ ll 3 ll
ರಾಗ - : ತಾಳ -
ವೇಣುನಾದ ಬಾರೊ, ವೆಂಕಟರಮಣನೆ ಬಾರೊ l
ಬಾಣನ ಭಂಜಿಸಿದಂಥ ಭಾವಜನಯ್ಯನೆ ಬಾರೊ ll ಪ ll
ಪೂತನಿಯ ಮೊಲೆಯುಂಡ ನವ- l
ನೀತ ಚೋರನೆ ಬಾರೊ ll
ದೈತ್ಯರಾವಣನ ಸಂಹರಿಸಿದ l
ಸೀತಾನಾಯಕ ಬಾರೊ ll 1 ll
ಹಲ್ಲು ಮುರಿದು ಮಲ್ಲರ ಗೆದ್ದ l
ಫುಲ್ಲನಾಭನೆ ಬಾರೊ ll
ಗೊಲ್ಲತಿಯರೊಡನೆ ನಲಿವ l
ಚೆಲ್ವ ಮೂರುತಿ ಬಾರೊ ll 2 ll
ಮಂದಾರವನೆತ್ತಿದಂಥ l
ಇಂದಿರಾ ರಮಣನೆ ಬಾರೊ ll
ಕುಂದದೆ ಗೋವುಗಳ ಕಾಯ್ದ l
ನಂದನಂದನನೆ ಬಾರೊ ll 3 ll
ನಾರಿಯರ ಮನೆಗೆ ಪೋಪ l
ವಾರಿಜಾಕ್ಷನೆ ಬಾರೊ ll
ಈರೇಳು ಭುವನವ ಕಾಯ್ವ l
ಮಾರನಯ್ಯನೆ ಬಾರೊ ll 4 ll
ಶೇಷಶಯನ ಮೂರುತಿಯಾದ l
ವಾಸುದೇವನೆ ಬಾರೊ ll
ದಾಸರೊಳು ವಾಸವಾದ l
ಶ್ರೀಶ ಪುರಂದರವಿಟ್ಠಲ ಬಾರೊ ll 5 ll
ರಾಗ - : ತಾಳ -
ರಾಮ ರಾಮ ರಾಮ ಎನ್ನಿರೋ ಇಂಥ
ಸ್ವಾಮಿಯ ನಾಮವ ಮರೆಯದಿರೋ || ಪ. ||
ತುಂಬಿದ ಪಟ್ಟಣಕೆ ಒಂಭತ್ತು ಭಾಗಿಲು
ಸಂಭ್ರಮದರಸರು ಐದು ಮಂದಿ
ಡಂಭಕತನದಿಂದ ತಿರುಗುವ ಕಾಯವ
ನಂಬಿ ನೆಚ್ಚಿ ನೀವು ಕೆಡಬೇಡಿರೊ || ೧ ||
ನೆಲೆ ಇಲ್ಲದೀ ಕಾಯ ಎಲುವಿನ ಪಂಜರ
ಬಲಿದು ಸುತ್ತಿದ ಚರ್ಮದ ಹೊದಿಕೆ
ಮಲ ಮೂತ್ರಂಗಳು ಕೀವು ಕ್ರಿಮಿಗಳುಳ್ಳ
ಭರಿತ ದೇಹವ ನೆಚ್ಚಿ ಕೆಡಬೇಡಿರೊ || ೨ ||
ಹರ ಬ್ರಹ್ಮ ಸುರರಿಗೆ ವಂದಿತ ಆಗಿಪ್ಪ
ಹರಿ ಸರ್ವೋತ್ತಮ ಒಬ್ಬನೇ ಕಾಣಿರೋ
ಪುರಂದರವಿಠಲನ ಚರಣವ ಭಜಿಸಿರೊ
ದುರಿತ ಭಯಗಳಿಂದ ದೂರಾಗಿರೊ || ೩ ||
*ತಂದೆಯಾಗಿ ತಾಯಿಯಾಗಿ ಇಂದಿರೇಶನೆ ಎನಗೆ*
*ಬಂಧುವಾಗಿ ಬಳಗವಾಗಿ ಸಿಂಧುಶಯನನೆ ಎನಗೆ*
*ಹಿಂದಾಗಿ ಮುಂದಾಗಿ ಮುಕುಂದನೆ ಎನಗೆ*
*ಸ್ವಾಮಿಯಾಗಿ ಪ್ರೇಮಿಯಾಗಿ ರಾಮಚಂದ್ರನೆ ಎನಗೆ*
*ಗುರುವಾಗಿ ದೈವವಾಗಿ ದೇವೋತ್ತಮನೆ ಎನಗೆ*
*ವಿದ್ಯೆಯಾಗಿ ಬುದ್ಧಿಯಾಗಿ ವಿದ್ಯಾಪತಿಯೆ ಎನಗೆ*
*ದಿಕ್ಕಾಗಿ ದೆಸೆಯಾಗಿ ರಕ್ಕಸಾಂತಕ ಎನಗೆ*
*ಇಹವಾಗಿ ಪರವಾಗಿ ಶ್ರೀಕೃಷ್ಣ ನಮ್ಮ ಪೊರೆವ ll - ಶ್ರೀವ್ಯಾಸರಾಜರು*
ಶ್ರೀಪುರಂದರದಾಸರು ಮಾರ್ಮಿಕವಾಗಿ ಭಗವಂತನೇ ಸರ್ವಸ್ವ ಎಂದದ್ದು ಹೀಗಿದೆ. ನೀನಿಲ್ಲದ ಜನವಿಲ್ಲ, ನೀನಿಲ್ಲದ ಗತಿಯಿಲ್ಲ.
*ನಿನ್ನಂಥ ತಂದೆ ಎನಗುಂಟು ನಿನಗಿಲ್ಲ*
*ನಿನ್ನಂಥ ಸ್ವಾಮಿ ಎನಗುಂಟು ನಿನಗಿಲ್ಲ*
*ನಿನ್ನಂಥ ದೊರೆಯೊಬ್ಬ ಎನಗುಂಟು ನಿನಗಿಲ್ಲ*
*ನೀನೆ ಪರದೇಶಿ ನಾನೆ ಸ್ವದೇಶಿ*
*ನಿನ್ನ ಅರಸಿ ಲಕ್ಷ್ಮಿ ಎನಗೆ ತಾಯಿಯುಂಟು*
*ಎನಗಿದ್ದ ತಾಯಿ ತಂದೆ ನಿನಗ್ಯಾರು*
*ತೋರೋ ಪುರಂದರವಿಟ್ಠಲ ll - ಶ್ರೀಪುರಂದರದಾಸರು*
ನಿತ್ಯವೂ ಎಲ್ಲರೂ ಭಗವಂತನಲ್ಲಿ ನಿವೇದಿಸಿಕೊಳ್ಳುವ ಸ್ತೋತ್ರ -
*ತ್ವಮೇವ ಮಾತಾ ಚ ಪಿತಾ ತ್ವಮೇವ l ತ್ವಮೇವ ಬಂಧುಶ್ಚ ಸಖಾ ತ್ವಮೇವ ll*
*ತ್ವಮೇವ ವಿದ್ಯಾ ದ್ರವಿಣಂ ತ್ವಮೇವ l ತ್ವಮೇವ ಸರ್ವಂ ಮಮ ದೇವ ದೇವ ll*
*ತಾಯಿ ತಂದೆಯೆನ್ನ ಗುರು ದೈವ ನೀನೆ ಕೃಷ್ಣ l*
*ಪಾಹಿ ಪಂಚಾಕ್ಷರ ಪರಮ ಪುಣ್ಯ ನೀನೆ ll - ಶ್ರೀಪುರಂದರದಾಸರು*
ರಾಗ - : ತಾಳ -
ಅರಿಯರು ಮನುಜರು ಅರಿತವರರಿಯರೊ l
ಧರಿಗೆ ವಡೆಯ ಶ್ರೀ ಹರಿಯಲ್ಲದಿಲ್ಲವೆಂದು ll ಪ ll
ನಾರದ ಮುನಿಬಲ್ಲ ವಾರಿಜೋದ್ಭವ ಬಲ್ಲ l
ಪರಾಶರನು ಬಲ್ಲ ಮನುಬಲ್ಲನು l
ಧೀರ ಭೀಷ್ಮನು ಬಲ್ಲ ಪಾರ್ವತಿ ಬಲ್ಲಳು l
ಧಾರುಣಿಗರಸು ಶ್ರೀ ನಾರಾಯಣನೆಂದು ll 1 ll
ಶಿವಬಲ್ಲ ಧ್ರುವಬಲ್ಲ ದ್ರೌಪದಿ ಬಲ್ಲಳು l
ಅವನಿಪ ಜನಕರಾಯನು ಬಲ್ಲನು l
ಯುವತಿಗೆ ವರವಿತ್ತ ಗೌತಮ ಬಲ್ಲನು l
ಭವರೋಗ ವೈದ್ಯ ಶ್ರೀಹರಿಯಲ್ಲದಿಲ್ಲವೆಂದು ll 2 ll
ಧಿಟ್ಟ ಪ್ರಹ್ಲಾದಬಲ್ಲ ಕೆಟ್ಟಜಾಮಿಳಬಲ್ಲ l
ದೃಷ್ಟಾಂತ ಕಂಡ ಭೃಗು ಮುನಿಬಲ್ಲನು l
ಕೊಟ್ಟ ಬಲಿಬಲ್ಲನು ಮೊರೆಯಿಟ್ಟ ಗಜೇಂದ್ರನು ಬಲ್ಲ l
ಸೃಷ್ಟಿಗೆ ಪುರಂದರವಿಟ್ಠಲನೆ ದೈವವೆಂದು ll 3 ll
[19/05, 05:32] +91 94485 58768: *ಹರಿದಾಸ ಹೃದಯ*
*ವೈಶಾಖ ಬಹುಳ ಸಪ್ತಮಿ*
*ಇದ್ದು ಜಯಿಸಿ*
*ಈಸ ಬೇಕು ಇದ್ದು ಜಯಿಸಬೇಕು l*
*ಹೇಸಿಕೆ ಸಂಸಾರದಲಿ ಆಶೆ ಲೇಶ ಇಡದ ಹಾಗೆ ll ಪ ll*
ಹುಟ್ಟಿ ಬಂದ ಮನುಷ್ಯನಿಗೆ ಭರವಸೆ ನೀಡುವ, ಸವಾಲನ್ನೂ ಎದುರಿಸುವ, ಆತ್ಮವಿಶ್ವಾಸವನ್ನು ತುಂಬುವ ಬಹ್ವರ್ಥಗರ್ಭಿತವಾದ ಮಾತು ಇದಾಗಿದೆ. ಜೀವನದಲ್ಲಿ ಪ್ರತಿಯೊಬ್ಬರೂ ಎಂದಿಗೂ, ಎಂತಹ ಪರಿಸ್ಥಿತಿಯಲ್ಲೂ ಬದುಕಿಗೆ ಬೆನ್ನು ತೋರದೆ ಸುಖಬಾಳನ್ನು ಸಾಗಿಸಲು ದಾಸರು ಮುತ್ತಿನಂಥಹ ಮಾತನ್ನು ಆಡಿರುವರು.
*ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು*
*ಸ್ವಾಮಿ ರಾಮನೆನುತ ಪಾಡಿ ಕಾಮಿತವ ಕೈಕೊಂಬರೆಲ್ಲ ll 1 ll*
ಈ ಸಂಸಾರದಲ್ಲಿ *'ಇರಬೇಕು-ಇರದಿರಬೇಕು'* ಎಂದಂತೆ, ನೀರಲ್ಲೇ ಇರುವ ತಾವರೆ ಎಲೆ ಆ ನೀರನ್ನು ಅಂಟಿಸಿಕೊಳ್ಳದೆ ಇದ್ದಂತೆ ಮನುಷ್ಯ ಜೀವನ ಸಾಗಿಸಬೇಕು. ಈ ನಿರ್ಲಿಪ್ತತೆಯೊಂದಿಗೆ ಭಗವಂತನ ಲಿಪ್ತತೆ ಇರಬೇಕು ಎನ್ನುವರು. ಇದು ಸುಖಜೀವನದ ಗುಟ್ಟು ಎನ್ನುವರು.
*ಗೇರು ಹಣ್ಣಿನಲಿ ಬೀಜ ಸೇರಿದಂತೆ ಸಂಸಾರದಿ*
*ಮೀರಿ ಆಶೆ ಮಾಡದ ಹಾಗೆ ಧೀರಕೃಷ್ಣನ ನೆನೆಯುವರೆಲ್ಲ ll 2 ll*
ಸಂಸಾರವನ್ನು ತೊರೆದು ಹೊರಬರಲಾಗದು. ಇರಬೇಕು, ಅಂಟಿಕೊಂಡಿರಬಾರದು. ಇದೊಂದು ಯೋಗ (ಕರ್ಮದಲ್ಲಿ ಕುಶಲತೆ). ಆದರೆ ಭಗವಂತನೊಂದಿಗೆ ಅಂಟಿರಬೇಕು. ನಿಜಾರ್ಥದಲ್ಲಿ ಇದು ಸಂಸಾರ ಜಯ. ಎಂದಿಗೂ ಯೋಗ್ಯತೆಗೆ ಮೀರಿದ ಆಶೆ - ಕಾಮನೆ ನಿಷಿದ್ಧ. ಹೇಗೆ ಗೇರುಬೀಜ ಅಂಟಿಕೊಳ್ಳದೆ ಅದರಲ್ಲೇ ಇದ್ದಂತೆ ಎಂದರು.
*ಮಾಂಸದಾಸೆಗೆ ಮತ್ಸ್ಯವು ಸಿಲುಕಿ ಹಿಂಸೆಪಟ್ಟ ಪರಿಯೊಳು*
*ಮೋಸ ಹೋಗದೆ ಪುರಂದರವಿಟ್ಠಲ ಜಗದೀಶನೆನುತ ಕೊಂಡಾಡುವರೆಲ್ಲ ll 3 ll*
ಸಂಸಾರ ಕಾಮನೆಗಳ ಗೂಡು. ಅದರಲ್ಲೂ ಚಾಪಲ್ಯವೆಂಬುದು ಬಿಡಲಾಗದ ರೋಗ. ಉದಾಹರಣೆಗೆ ಮೀನು. ಜಿಹ್ವಾ ಚಾಪಲ್ಯದಿಂದ ಸಾಯುತ್ತೆ. ಧನ - ಹೆಣ್ಣು - ಮಣ್ಣುಗಳಿಗಾಗಿ ಹೊಡೆದಾಡಿ, ಸೆಣಸಾಡಿ ಬಾಳುವುದೇ ಹೇಸಿಗೆ ಸಂಸಾರ. ಇವುಗಳಿಂದ ದೂರವಿದ್ದು ಬದುಕುವುದೇ ಸಂಸಾರದಲ್ಲಿ ಈಜಾಡಿ ಜಯಗಳಿಸುವುದು. ಈ ರಹಸ್ಯವನ್ನು ದಾಸರು ಉಪಮಾನಗಳಿಂದ ಬಣ್ಣಿಸಿರುವರು.
ಶ್ರೀಪುರಂದರರು ಸಾಧನ ಜೀವಿಗೆ ನೀಡಿದ, ಆತ್ಮವಿಶ್ವಾಸವನ್ನೂ ತುಂಬಿದ ಮಾತುಗಳಾಗಿವೆ. ಈ ಸಂಸಾರಕ್ಕೆ ಅಂಟಿಕೊಳ್ಳದೆ, ಆಶೆ ಲೇಶ ಇರದ ಹಾಗೆ ಇದ್ದು ಜಯಿಸಿರೆಂದರು. ಸಂಸಾರಕ್ಕೆ ಅಂಜಿ ಎಂದಿಗೂ ಹೇಡಿಯಂತೆ ಬೆನ್ನು ಮುಖ ಮಾಡದೆ, ಮರ್ಮವನ್ನು ಅರಿತು, ಭಗವಂತನ ಮೇಲೆ ಭಾರಹಾಕಿ ಇದ್ದು ಜಯಿಸಿರೆಂದು ಅಭಯವಿತ್ತರು. ಆತ್ಮವಿಶ್ವಾಸ ತುಂಬಿದರು.
#Chetha #Muniswamy #gowda #Riya #YOGI
#ChethanaMuniswamygowda
*ಚರಣ ಸೇವಕನಲ್ಲಿ ಕರುಣ ಬಾರದ್ಯಾಕೆ ? - ಶ್ರೀನ.*
*ಅನ್ನದಾನಕ್ಕೆ ಮಿಗಿಲಿಲ್ಲ*
*'ಅತ್ತೃತ್ವಾತ್ ಸರ್ವಲೋಕಾನಂ ಅನ್ಯಮಿತ್ಯುಚ್ಯತೇ ಹರಿಃ' l* ಎಲ್ಲ ಕಾಲಕ್ಕೂ ಎಲ್ಲರಿಗೂ ತರ್ಪಕ, ತೃಪ್ತಿ ನೀಡುವವನು, ಅಣ್ಣದಲ್ಲಿ ಸನ್ನಿಹಿತನಾಗಿ ಆ ಹೆಸರಿನವನಾದ ಭಗವಂತ.
ಜಗತ್ತಿನಲ್ಲಿ ಎಲ್ಲರೂ ಎಲ್ಲ ಪ್ರಾಣಿಗಳೂ ಅನ್ನಕ್ಕೆ ಅರ್ಹರೇ. ಅನ್ನ - ನೀರನ್ನು ಯಾರಿಗೂ ಇಲ್ಲ ಎಂದೆನಬಾರದೆಂದು ಶಾಸ್ತ್ರವಿಧಿಯಿದೆ. ಶ್ರೀಪುರಂದರರ ಮಾತು ಹೀಗಿದೆ.
*ಚೋರನಾದರು ಚಾಂಡಾಲನಾದರು ಬ್ರಹ್ಮಘ್ನ ಪಿತೃ ಘಾತಕಿಯಾದರು*
*ಆವನಾದರು ಮಧ್ಯಾನ್ಹ ಕಾಲಕ್ಕೆ ಅತಿಥಿಯಾಗಿ ಮನೆಗೆ ಬಂದರೆ*
*ತುತಿಸಿ ಅನ್ನವನಿಟ್ಟು ಸ್ವಾಮಿ ಪುರಂದರವಿಟ್ಠಲಗರ್ಪಿಸಬೇಕು ll - ಶ್ರೀಪುರಂದರದಾಸರು*
ಶ್ರೀವಿಜಯದಾಸರೂ ತಮ್ಮ ಒಂದು ಸುಳಾದಿಯಲ್ಲಿ ಅನ್ನದ ಬಗ್ಗೆ ಹೇಳುವಾಗ -
*ಅನ್ನ ಇತ್ತರೆ ಅದು ಭವನವಾಗಿ ತೋರುವದು*
*ಅನ್ನ ನೀಯದಿರೆ ಅದು ಕಾನನಕೆ ಸರಿ ಎನ್ನಿ*
*ಅನ್ನದಿಂದಲಿ ಬಂದ ಘನದುರಿತಹರ ಕಾಣೋ*
*ಅನ್ನದಿಂದಲಿ ಸರ್ವಪೂರ್ಣ ಫಲಿಸುವದು*
*ಅನ್ನ ಇತ್ತವನ ಕೀರ್ತಿ ಉನ್ನತವಾಗಿ, ತ್ರಿಭು*
*ವನದೊಳಗೆ ತುಂಬಿ ಚೆನ್ನಾಗಿ ಪೊಳೆಪದಯ್ಯ*
*ಅನ್ನದಾನಕ್ಕಿಂತ ಇನ್ನು ಮಿಗಿಲು ದಾನಗಳಿಲ್ಲ*
*ಹೊನ್ನು ಹಣ ಕೊಡಲು, ಆ ಗಣ್ಯ ಅನ್ನದಾನಕ್ಕೆ*
*ಅನಂತಕಾಲ ಮುಖವನ್ನೆ ಮಾಡಲು ವಿಪ್ರ*
*ಗುಣಿಸಿದುದಕೆ ಸರಿಯೆನ್ನಬಹುದೆ ತಿಳಿದು*
*ಅನಂತ ಮೂರುತಿ ವಿಜಯವಿಟ್ಠಲರೇಯ*
*ತನ್ನವನಿವನೆಂದು ಮನ್ನಿಸಿ ಸಲಹುವ ll - ಶ್ರೀವಿಜಯದಾಸರು*
ಶ್ರೀ ಪುರಂದರರು ಅನ್ನದಾನವೆ ಮಿಗಿಲೆನ್ನಲು ಒಂದು ಉಗಾಭೋಗದಲ್ಲಿ ಹೀಗೆಂದರು,
*ಅನ್ನಪಾನಾದಿಗಳೀಯೋ ಅಭ್ಯಾಗತ ಬ್ರಾಹ್ಮಣರಿಗೆ*
*ಅನ್ನಪಾನಾದಿಗಳೀಯೋ ಆ ಚಾಂಡಾಲಸಪ್ತರಿಗೆ*
*ಅನ್ನಪಾನಾದಿಗಳೀಯೋ ಅಂಧದೀನ ಕೃಪಣರಿಗೆ*
*ಹಸಿವೆಗೆ ಹಾಗವನ್ನರ್ಪಿಸೋ ಪುರಂದರವಿಟ್ಠಲಗೆ ll - ಶ್ರೀಪುರಂದರದಾಸರು*
ರಾಗ - : ತಾಳ -
ರಾಮ ರಾಮ ರಾಮ ರಾಮ ರಾಮಯೆನ್ನಿರೋ l
ರಾಮ ರಾಮಯೆಂಬ ನಾಮ ಮನದಿ ನೆನೆಯಿರೊ ll ಪ ll
ಇಂದ್ರಿಯಂಗಳೆಲ್ಲ ಕೂಡಿ ಬಂದು ತನ್ನ ಮುಸುಕಿದಾಗ l
ಸಿಂಧುಸುತಾಪತಿಯ ಧ್ಯಾನ ಅಂದಿಗೆ ಒದಗಲೀಯದು ll 1 ll
ಭರದಿ ಯಮನ ಭಟರು ಬಂದು ಹೊರಡು ಎಂದು ಮುಟ್ಟಲು l
ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ದೊರೆಯದಯ್ಯ ll 2 ll
ಕಾಸಶ್ವಾಸದಲ್ಲಿ ಸಿಲುಕಿ ದೋಷ ಬಲಿದು ಪೋಗುವಾಗ l
ವಾಸುದೇವನೆಂಬ ನಾಮ ವದನದಲ್ಲಿ ಒದಗದಯ್ಯ ll 3 ll
ಶೃಂಗಾರವಾದ ದೇಹ ತಂಗಿಬಿಟ್ಟು ಪೋಗುವಾಗ l
ಕಂಗಳಿಗಾತ್ಮ ಸೇರಿದಾಗ ರಂಗನ ಧ್ಯಾನ ದೊರಕದಯ್ಯ ll 4 ll
ಕಷ್ಟಜನ್ಮದಲ್ಲಿ ಬಂದು ದುಷ್ಟಕರ್ಮಗಳನು ಮಾಡಿ l
ಬಿಟ್ಟು ಹೋಗುವಾಗ ಪುರಂದರವಿಟ್ಠಲನ ನೆನೆಮನವೆ ll 5 ll
ರಾಗ - : ತಾಳ -
ನಂಬಿ ಕೆಟ್ಟವರುಂಟೆ - ಕೃಷ್ಣಯ್ಯನ l
ನಂಬಲಾರದೆ ಕೆಟ್ಟರು ll ಪ ll
ಅಂಬುಜನಾಭನ ಪಾದವ ನೆನೆದರೆ l
ಇಂಬುಗೊಡದ ದುಃಖ ಹರಿಸುವ ಶ್ರೀಕೃಷ್ಣ ll ಅ ಪ ll
ಬಲಿಯಪಾತಾಳಕಿಳುಹಿ - ಭಕ್ತನ ಬಾ - l
ಗಿಲವ ಕಾಯುವೆ ನಾನೆಂದ ll
ಛಲದೊಳು ಅಸುರರ ಶಿರಗಳ ತರಿದು ತಾ l
ನೊಲಿದು ವಿಭೀಷಣಗೆ ಪಟ್ಟಗಟ್ಟಿದ ಈ ಕೃಷ್ಣ ll 1 ll
ತರಳ ಪ್ರಹ್ಲಾದಗೊಲಿದು - ಹಿರಣ್ಯಕನ ಉ - l
ಗುರಿನಿಂದಲೆ ಸೀಳಿದ ll
ಕರಿರಾಜಗೊಲಿದು ನೆಗಳು ನುಂಗುತಿರಲಾಗ l
ಪರಿಹರಿಸಿದ ಜಲದೊಳು ಪೊಕ್ಕು ಶ್ರೀಕೃಷ್ಣ ll 2 ll
ಪಾಂಡವರಿಗೆ ಒಲಿದು - ಕೌರವರನು l
ತುಂಡು ಛಿದ್ರಮಾಡಿದೆ ll
ಗಂಡರೈವರ ಮುಂದೆ ದ್ರೌಪದಿ ಕೂಗಲು l
ಕಂಡು ಕರುಣದಿ ಕಾಯ್ದ ಪುರಂದರವಿಟ್ಠಲನ ll 3 ll
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏