ಗಂಡ ಮತ್ತು ಹೆಂಡತಿ, ಒಂದೆ ಹೆಸರು ಹೊಂದಿದ್ದರು, ಈ ಪುರಾಣ ಕಥೆ ನಿಮಗೆ ತಿಳಿದಿದೇಯೇ?ಇದು ವಾಸುಕಿಯ ಸಹೋದರಿಯ ಇತಿಹಾಸವಾಗಿದೆ

ಗಂಡ ಮತ್ತು ಹೆಂಡತಿ,  ಒಂದೆ ಹೆಸರು ಹೊಂದಿದ್ದರು, 
ಈ ಪುರಾಣ ಕಥೆ ನಿಮಗೆ ತಿಳಿದಿದೇಯೇ?
ಇದು  ವಾಸುಕಿಯ ಸಹೋದರಿಯ ಇತಿಹಾಸವಾಗಿದೆ.
#Home #AdiParva #Chapter @Adhyaya
 #MahaParva #ವಾಸುಕಿ #ಆಸ್ತೀಕ #snakestory 


ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ, ಶ್ರೀ ಮಹಾಭಾರತದ, ಆದಿ ಪರ್ವದ , ಉಪ ಆಸ್ತೀಕ ಪರ್ವ
 ದಿಲ್ಲಿ  ಆಸ್ತೀಕನ ಕಥೆಯನ್ನು ಹೇಳಲು ಶೌನಕನು ಉಗ್ರಶ್ರವನನ್ನು ಕೇಳುತ್ತಾನೆ , ಆಸ್ತೀಕನ ಕಥೆಯ ಸಾರಾಂಶ  ಹೀಗಿದೆ.

 ಶೌನಕ ಉವಾಚ|
 ಕಿಮರ್ಥಂ ರಾಜಶಾರ್ದೂಲಃ ಸ ರಾಜಾ ಜನಮೇಜಯಃ|
 ಸರ್ಪಸತ್ರೇಣ ಸರ್ಪಾಣಾಂ ಗತೋಽಂತಂ ತದ್ವದಸ್ವ ಮೇ||

ಶೌನಕನು ಹೇಳಿದನು: “ರಾಜಶಾರ್ದೂಲ ರಾಜ ಜನಮೇಜಯನು ಯಾವ ಕಾರಣಕ್ಕಾಗಿ ಸರ್ಪಸತ್ರದಲ್ಲಿ ಸರ್ಪಗಳನ್ನು ನಾಶಗೊಳಿಸಲು ನಿರ್ಧರಿಸಿದನು ಎನ್ನುವುದನ್ನು ನನಗೆ ಹೇಳು.


 ಆಸ್ತೀಕಶ್ಚ ದ್ವಿಜಶ್ರೇಷ್ಠಃ ಕಿಮರ್ಥಂ ಜಪತಾಂ ವರಃ|
 ಮೋಕ್ಷಯಾಮಾಸ ಭುಜಗಾನ್ದೀಪ್ತಾತ್ತಸ್ಮಾದ್ ಹುತಾಶನಾತ್||

ಜಪಿಸುವರಲ್ಲಿ ಶ್ರೇಷ್ಠ ದ್ವಿಜಶ್ರೇಷ್ಠ ಆಸ್ತೀಕನಾದರೋ ಯಾವ ಕಾರಣಕ್ಕಾಗಿ ಉರಿಯುತ್ತಿರುವ ಬೆಂಕಿಯಿಂದ ಆ ಭುಜಗಗಳನ್ನು ರಕ್ಷಿಸಿದನು?

 ಕಸ್ಯ ಪುತ್ರಃ ಸ ರಾಜಾಸೀತ್ಸರ್ಪಸತ್ರಂ ಯ ಆಹರತ್|

 ಸ ಚ ದ್ವಿಜಾತಿಪ್ರವರಃ ಕಸ್ಯ ಪುತ್ರೋ ವದಸ್ವ ಮೇ||

ಆ ಸರ್ಪಸತ್ರವನ್ನು ಕೈಗೊಂಡ ರಾಜನು ಯಾರ ಪುತ್ರ? ಮತ್ತು ಆ ದ್ವಿಜಾತಿಪ್ರವರನು ಯಾರ ಪುತ್ರ? ನನಗೆ ಹೇಳು.”

 ಸೂತ ಉವಾಚ|

 ಮಹದಾಖ್ಯಾನಮಾಸ್ತೀಕಂ ಯತ್ರೈತತ್ಪ್ರೋಚ್ಯತೇ ದ್ವಿಜ|

 ಸರ್ವಮೇತದಶೇಷೇಣ ಶೃಣು ಮೇ ವದತಾಂ ವರ||

ಸೂತನು ಹೇಳಿದನು: “ಉತ್ತಮ ವಾಗ್ಮಿ ದ್ವಿಜನೇ! ಹಿಂದಿನಿಂದ ಹೇಳಿಕೊಂಡು ಬಂದಿರುವ ಆಸ್ತೀಕ ಎನ್ನುವ ಈ ಮಹದಾಖ್ಯಾನವನ್ನು ಸಂಪೂರ್ಣವಾಗಿ ಕೇಳು.”

 ಶೌನಕ ಉವಾಚ|
 ಶ್ರೋತುಮಿಚ್ಛಾಮ್ಯಶೇಷೇಣ ಕಥಾಮೇತಾಂ ಮನೋರಮಾಂ|
 ಆಸ್ತೀಕಸ್ಯ ಪುರಾಣಸ್ಯ ಬ್ರಾಹ್ಮಣಸ್ಯ ಯಶಸ್ವಿನಃ||

ಶೌನಕನು ಹೇಳಿದನು: “ಆ ಯಶಸ್ವಿ ಬ್ರಾಹ್ಮಣ ಆಸ್ತೀಕನ ಮನೋಹರ ಪುರಾಣ ಕಥೆಯನ್ನು ಸಂಪೂರ್ಣವಾಗಿ ಕೇಳಲು ಬಯಸುತ್ತೇನೆ.”

 ಸೂತ ಉವಾಚ|
 ಇತಿಹಾಸಮಿಮಂ ವೃದ್ಧಾಃ ಪುರಾಣಂ ಪರಿಚಕ್ಷತೇ|
 ಕೃಷ್ಣದ್ವೈಪಾಯನಪ್ರೋಕ್ತಂ ನೈಮಿಷಾರಣ್ಯವಾಸಿನಃ||

ಸೂತನು ಹೇಳಿದನು: “ಹಿರಿಯರು ಈ ಇತಿಹಾಸವನ್ನು ನೈಮಿಷಾರಣ್ಯವಾಸಿಗಳಿಗೆ ಕೃಷ್ಣದ್ವೈಪಾಯನನು ಹೇಳಿದ ಪುರಾಣವೆಂದು ಪರಿಗಣಿಸುತ್ತಾರೆ.

ಪೂರ್ವಂ ಪ್ರಚೋದಿತಃ ಸೂತಃ ಪಿತಾ ಮೇ ಲೋಮಹರ್ಷಣಃ|
 ಶಿಷ್ಯೋ ವ್ಯಾಸಸ್ಯ ಮೇಧಾವೀ ಬ್ರಾಹ್ಮಣೈರಿದಮುಕ್ತವಾನ್||

ಹಿಂದೆ ನನ್ನ ತಂದೆ ವ್ಯಾಸಶಿಷ್ಯ, ಮೇಧಾವಿ, ಸೂತ ಲೋಮಹರ್ಷಣನು ಬ್ರಾಹ್ಮಣರ ಕೇಳಿಕೆಯಂತೆ ಇದನ್ನು ಹೇಳಿದನು.

 ತಸ್ಮಾದಹಮುಪಶ್ರುತ್ಯ ಪ್ರವಕ್ಷ್ಯಾಮಿ ಯಥಾತಥಂ|

 ಇದಮಾಸ್ತೀಕಮಾಖ್ಯಾನಂ ತುಭ್ಯಂ ಶೌನಕ ಪೃಚ್ಛತೇ||

ಶೌನಕ! ನಿನ್ನ ಕೇಳಿಕೆಯಂತೆ ನಾನು ನಿನಗೆ ಅಲ್ಲಿ ಕೇಳಿದ ಈ ಆಸ್ತೀಕ ಆಖ್ಯಾನವನ್ನು ಯಥಾವತ್ತಾಗಿ ಹೇಳುತ್ತೇನೆ.

 ಆಸ್ತೀಕಸ್ಯ ಪಿತಾ ಹ್ಯಾಸೀತ್ಪ್ರಜಾಪತಿಸಮಃ ಪ್ರಭುಃ|
 ಬ್ರಹ್ಮಚಾರೀ ಯತಾಹಾರಸ್ತಪಸ್ಯುಗ್ರೇ ರತಃ ಸದಾ||
 ಜರತ್ಕಾರುರಿತಿ ಖ್ಯಾತ ಊರ್ಧ್ವರೇತಾ ಮಹಾನೃಷಿಃ|
 ಯಾಯಾವರಾಣಾಂ ಧರ್ಮಜ್ಞಃ ಪ್ರವರಃ ಸಂಶಿತವ್ರತಃ||

ಪ್ರಭು ಪ್ರಜಾಪತಿಯ ಸರಿಸಮ, ಸದಾ ಉಗ್ರತಪಸ್ಸಿನಲ್ಲಿ ನಿರತ ಬ್ರಹ್ಮಚಾರಿಯು ಆಸ್ತೀಕನ ತಂದೆ. ಯಾಯಾವರರ ಕುಲದಲ್ಲಿ ಹುಟ್ಟಿದ, ಆ ಧರ್ಮಜ್ಞ, ಸಂಶಿತವ್ರತ ಮಹಾನ್ ಋಷಿಯು ಜರತ್ಕಾರು ಎಂದು ಖ್ಯಾತನಾಗಿದ್ದನು.

 ಅಟಮಾನಃ ಕದಾ ಚಿತ್ಸ ಸ್ವಾನ್ದದರ್ಶ ಪಿತಾಮಹಾನ್|
 ಲಂಬಮಾನಾನ್ಮಹಾಗರ್ತೇ ಪಾದೈರೂರ್ಧ್ವೈರಧೋಮುಖಾನ್||

ಒಮ್ಮೆ ತಿರುಗಾಡುತ್ತಿರುವಾಗ ಅವನು ಒಂದು ಆಳವಾದ ಬಾವಿಯಲ್ಲಿ ತಲೆ ಕೆಳಗೆ ಮತ್ತು ಕಾಲುಗಳನ್ನು ಮೇಲೆ ಮಾಡಿಕೊಂಡು ನೇಲುತ್ತಿರುವ ತನ್ನ ಪಿತಾಮಹರನ್ನು ಕಂಡನು.

 ತಾನಬ್ರವೀತ್ಸ ದೃಷ್ಟೈವ ಜರತ್ಕಾರುಃ ಪಿತಾಮಹಾನ್|
 ಕೇ ಭವಂತೋಽವಲಂಬಂತೇ ಗರ್ತೇಽಸ್ಮಿನ್ವಾ ಅಧೋಮುಖಾಃ||

 ವೀರಣಸ್ತಂಬಕೇ ಲಗ್ನಾಃ ಸರ್ವತಃ ಪರಿಭಕ್ಷಿತೇ|
 ಮೂಷಕೇನ ನಿಗೂಢೇನ ಗರ್ತೇಽಸ್ಮಿನ್ನಿತ್ಯವಾಸಿನಾ||

ತನ್ನ ಪಿತಾಮಹರನ್ನು ಕಂಡ ಜರತ್ಕಾರುವು ಅವರನ್ನುದ್ದೇಶಿಸಿ ಹೇಳಿದನು: “ಹತ್ತಿರದಲ್ಲಿಯೇ ನಿಗೂಢವಾಗಿ ವಾಸಿಸುತ್ತಿರುವ ಇಲಿಗಳು ಸಂಪೂರ್ಣವಾಗಿ ತಿನ್ನುತ್ತಿರುವ ಈ ವೀರಣ ದಾರವನ್ನು ಹಿಡಿದು ಅಧೋಮುಖರಾಗಿ ನೇಲುತ್ತಿರುವ ನೀವು ಯಾರು?”

 ಪಿತರ ಊಚುಃ|

 ಯಾಯಾವರಾ ನಾಮ ವಯಂ ಋಷಯಃ ಸಂಶಿತವ್ರತಾಃ|
 ಸಂತಾನಪ್ರಕ್ಷಯಾದ್ಬ್ರಹ್ಮನ್ನಧೋ ಗಚ್ಛಾಮ ಮೇದಿನೀಂ||

ಪಿತೃಗಳು ಹೇಳಿದರು: “ಸಂಶಿತವ್ರತ ಯಾಯಾವರ ಎಂಬ ಹೆಸರಿನ ಋಷಿಗಳು ನಾವು. ಸಂತಾನದ ಕೊರತೆಯಿಂದಾಗಿ ನಾವು ಈ ಮೇದಿನಿಯ ಕೆಳಗೆ ಬೀಳುತ್ತಿದ್ದೇವೆ.

 ಅಸ್ಮಾಕಂ ಸಂತತಿಸ್ತ್ವೇಕೋ ಜರತ್ಕಾರುರಿತಿ ಶ್ರುತಃ|

 ಮಂದಭಾಗ್ಯೋಽಲ್ಪಭಾಗ್ಯಾನಾಂ ತಪ ಏವ ಸಮಾಸ್ಥಿತಃ||

ಅಲ್ಪಭಾಗ್ಯರಾದ ನಮ್ಮ ಒಬ್ಬನೇ ಸಂತತಿ ಪ್ರಸಿದ್ಧ ಜರತ್ಕಾರು. ಆ ಮಂದಭಾಗ್ಯನು ನಿರಂತರವಾಗಿ ತಪಸ್ಸಿನಲ್ಲಿಯೇ ತೊಡಗಿದ್ದಾನೆ.

 ನ ಸ ಪುತ್ರಾನ್ಜನಯಿತುಂ ದಾರಾನ್ಮೂಢಶ್ಚಿಕೀರ್ಷತಿ|

 ತೇನ ಲಂಬಾಮಹೇ ಗರ್ತೇ ಸಂತಾನಪ್ರಕ್ಷಯಾದಿಹ||

ಆ ಮೂಢನು ಪತ್ನಿಯಿಂದ ಪುತ್ರರನ್ನು ಪಡೆಯಲು ಪ್ರಯತ್ನಿಸುತ್ತಿಲ್ಲ. ಹಾಗಾಗಿ ಸಂತಾನಾಪೇಕ್ಷೆಯಿಂದ ನಾವು ಈ ಬಾವಿಯಲ್ಲಿ ಈ ರೀತಿ ನೇಲಿಕೊಂಡಿದ್ದೇವೆ.

 ಅನಾಥಾಸ್ತೇನ ನಾಥೇನ ಯಥಾ ದುಷ್ಕೃತಿನಸ್ತಥಾ|
 ಕಸ್ತ್ವಂ ಬಂಧುರಿವಾಸ್ಮಾಕಮನುಶೋಚಸಿ ಸತ್ತಮ||

ಸಾಧನಗಳಿದ್ದರೂ ಈ ಅನಾಥ ದುಷ್ಕೃತಿಗೆ ಇಳಿದಿದ್ದೇವೆ. ಸತ್ತಮ! ನಮ್ಮ ಬಂಧುವೋ ಎಂಬಂತೆ ನಮ್ಮ ಮೇಲೆ ಅನುಕಂಪ ತೋರುತ್ತಿರುವ ನೀನು ಯಾರು?

 ಜ್ಞಾತುಮಿಚ್ಛಾಮಹೇ ಬ್ರಹ್ಮನ್ಕೋ ಭವಾನಿಹ ದಿಷ್ಟಿತಃ|
 ಕಿಮರ್ಥಂ ಚೈವ ನಃ ಶೋಚ್ಯಾನನುಕಂಪಿತುಮರ್ಹಸಿ||

ಬ್ರಾಹ್ಮಣ! ಇಲ್ಲಿ ನಿಂತಿರುವ ನೀನು ಯಾರು ಮತ್ತು ನಮ್ಮ ಮೇಲೆ ಅನುಕಂಪನಾಗಿ ಏಕೆ ಶೋಚಿಸುತ್ತಿದ್ದೀಯೆ ಎಂದು ತಿಳಿಯಲು ಬಯಸುತ್ತೇವೆ.”

 ಜರತ್ಕಾರುರುವಾಚ|
 ಮಮ ಪೂರ್ವೇ ಭವಂತೋ ವೈ ಪಿತರಃ ಸಪಿತಾಮಹಾಃ|
 ಬ್ರೂತ ಕಿಂ ಕರವಾಣ್ಯದ್ಯ ಜರತ್ಕಾರುರಹಂ ಸ್ವಯಂ||

ಜರತ್ಕಾರುವು ಹೇಳಿದನು: “ನೀವು ನನ್ನ ಪೂರ್ವಜರು, ಪಿತೃ-ಪಿತಾಮಹರು. ಆ ಜರತ್ಕಾರುವು ನಾನೇ. ನಿಮಗಾಗಿ ಏನು ಮಾಡಬೇಕು ಹೇಳಿ.”

 ಪಿತರ ಊಚುಃ|
 ಯತಸ್ವ ಯತ್ನವಾಂಸ್ತಾತ ಸಂತಾನಾಯ ಕುಲಸ್ಯ ನಃ|
 ಆತ್ಮನೋಽರ್ಥೇಽಸ್ಮದರ್ಥೇ ಚ ಧರ್ಮ ಇತ್ಯೇವ ಚಾಭಿಭೋ||
 ನ ಹಿ ಧರ್ಮಫಲೈಸ್ತಾತ ನ ತಪೋಭಿಃ ಸುಸಂಚಿತೈಃ|

ಪಿತೃಗಳು ಹೇಳಿದರು: “ಮಗು! ನಿನ್ನ ಸ್ವಂತಕ್ಕಾಗಿ ಮತ್ತು ನಮಗಾಗಿ ಕುಲ ಸಂತಾನಕ್ಕೆ ಪ್ರಯತ್ನಿಸು. ಇದೇ ಧರ್ಮ. ಮಗು! ಪುತ್ರರಿಂದ ದೊರೆಯುವ ಗತಿಯು ಧರ್ಮ-ತಪೋಫಲಗಳನ್ನು ಕೂಡಿಡುವುದರಿಂದ ದೊರೆಯುವುದಿಲ್ಲ.

 ತಾಂ ಗತಿಂ ಪ್ರಾಪ್ನುವಂತೀಹ ಪುತ್ರಿಣೋ ಯಾಂ ವ್ರಜಂತಿ ಹ||
 ತದ್ದಾರಗ್ರಹಣೇ ಯತ್ನಂ ಸಂತತ್ಯಾಂ ಚ ಮನಃ ಕುರು|
 ಪುತ್ರಕಾಸ್ಮನ್ನಿಯೋಗಾತ್ತ್ವಮೇತನ್ನಃ ಪರಮಂ ಹಿತಂ||

ಆದುದರಿಂದ ಪುತ್ರ! ಪತ್ನಿ ಮತ್ತು ಸಂತತಿಗೋಸ್ಕರ ಮನಸ್ಸಿಟ್ಟು ಪ್ರಯತ್ನ ಮಾಡು. ಕೇವಲ ಇದರಿಂದ ನಮಗೆ ಪರಮ ಹಿತವಾಗುತ್ತದೆ.”

 ಜರತ್ಕಾರುರುವಾಚ|

 ನ ದಾರಾನ್ವೈ ಕರಿಷ್ಯಾಮಿ ಸದಾ ಮೇ ಭಾವಿತಂ ಮನಃ|
 ಭವತಾಂ ತು ಹಿತಾರ್ಥಾಯ ಕರಿಷ್ಯೇ ದಾರಸಂಗ್ರಹಂ||

ಜರತ್ಕಾರುವು ಹೇಳಿದನು: “ಪತ್ನಿಯನ್ನು ಮಾಡಿಕೊಳ್ಳುವುದಿಲ್ಲ ಎಂದು ಸದಾ ನನ್ನ ಮನಸ್ಸಿನಲ್ಲಿತ್ತು. ಆದರೆ ನಿಮ್ಮ ಹಿತಕ್ಕಾಗಿ ಪತ್ನಿಯನ್ನು ಪಡೆಯುವ ಕಾರ್ಯವನ್ನು ಮಾಡುತ್ತೇನೆ.

 ಸಮಯೇನ ಚ ಕರ್ತಾಹಮನೇನ ವಿಧಿಪೂರ್ವಕಂ|
 ತಥಾ ಯದ್ಯುಪಲಪ್ಸ್ಯಾಮಿ ಕರಿಷ್ಯೇ ನಾನ್ಯಥಾ ತ್ವಹಂ||

ಸಮಯ ಬಂದಾಗ ವಿಧಿಪೂರ್ವಕವಾಗಿ ಅದನ್ನೂ ಮಾಡುತ್ತೇನೆ. ಆದರೆ ನನ್ನದೇ ನಿಯಮಗಳ ಮೇಲೆ. ಅನ್ಯಥಾ ಇಲ್ಲ.

 ಸನಾಮ್ನೀ ಯಾ ಭವಿತ್ರೀ ಮೇ ದಿತ್ಸಿತಾ ಚೈವ ಬಂಧುಭಿಃ|
 ಭೈಕ್ಷವತ್ತಾಮಹಂ ಕನ್ಯಾಮುಪಯಂಸ್ಯೇ ವಿಧಾನತಃ||

ಆ ಕನ್ಯೆಯು ನನ್ನ ಹೆಸರನ್ನೇ ಹೊಂದಿರಬೇಕು ಮತ್ತು ಅವಳನ್ನು ಅವಳ ಬಂಧುಗಳು ಸ್ವ-ಇಚ್ಛೆಯಿಂದ ನನಗೆ ಭಿಕ್ಷವಾಗಿ ಕೊಟ್ಟಿರಬೇಕು.

 ದರಿದ್ರಾಯ ಹಿ ಮೇ ಭಾರ್ಯಾಂ ಕೋ ದಾಸ್ಯತಿ ವಿಶೇಷತಃ|
 ಪ್ರತಿಗ್ರಹೀಷ್ಯೇ ಭಿಕ್ಷಾಂ ತು ಯದಿ ಕಶ್ಚಿತ್ಪ್ರದಾಸ್ಯತಿ||

ವಿಶೇಷವಾಗಿ ದರಿದ್ರನಾಗಿರುವ ನನಗೆ ಹೆಂಡತಿಯನ್ನು ಯಾರು ತಾನೆ ನೀಡುವರು? ಆದರೆ ಯಾರಾದರೂ ನನಗೆ ಭಿಕ್ಷೆಯಾಗಿ ಕೊಟ್ಟರೆ ಅವಳನ್ನು ಸ್ವೀಕರಿಸುತ್ತೇನೆ.

 ಏವಂ ದಾರಕ್ರಿಯಾಹೇತೋಃ ಪ್ರಯತಿಷ್ಯೇ ಪಿತಾಮಹಾಃ|
 ಅನೇನ ವಿಧಿನಾ ಶಶ್ವನ್ನ ಕರಿಷ್ಯೇಽಹಮನ್ಯಥಾ||

ಪಿತಾಮಹರೆ! ಈ ರೀತಿ ದೊರಕಿದ ಪತ್ನಿಯನ್ನು ಮದುವೆಯಾಗುತ್ತೇನೆ. ಬೇರೆ ಯಾವರೀತಿಯಲ್ಲಿ ದೊರೆತರೂ ನಾನು ಮದುವೆಯಾಗುವುದಿಲ್ಲ.

 ತತ್ರ ಚೋತ್ಪತ್ಸ್ಯತೇ ಜಂತುರ್ಭವತಾಂ ತಾರಣಾಯ ವೈ|
 ಶಾಶ್ವತಂ ಸ್ಥಾನಮಾಸಾದ್ಯ ಮೋದಂತಾಂ ಪಿತರೋ ಮಮ||

ನನ್ನ ಪಿತೃಗಳಾದ ನಿಮ್ಮ ಉದ್ಧಾರಕ್ಕಾಗಿ ಮತ್ತು ನೀವು ಶಾಶ್ವತ ಸ್ಥಾನವನ್ನು ಪಡೆದು ಸುಖದಿಂದಿರಬೇಕೆಂದು ನಾನು ಅವಳಲ್ಲಿ ಮಗನನ್ನು ಪಡೆಯುತ್ತೇನೆ.””





 ಸೂತ ಉವಾಚ|
 ತತೋ ನಿವೇಶಾಯ ತದಾ ಸ ವಿಪ್ರಃ ಸಂಶಿತವ್ರತಃ|
 ಮಹೀಂ ಚಚಾರ ದಾರಾರ್ಥೀ ನ ಚ ದಾರಾನವಿಂದತ||

ಸೂತನು ಹೇಳಿದನು: “ನಂತರ ಸಂಶಿತವ್ರತ ವಿಪ್ರನು ಹೊರಟು ಪತ್ನಿಗೋಸ್ಕರ ಮಹಿಯನ್ನೆಲ್ಲಾ ತಿರುಗಾಡಿದನು. ಆದರೂ ಅವನಿಗೆ ಪತ್ನಿಯು ದೊರೆಯಲಿಲ್ಲ.

 ಸ ಕದಾಚಿದ್ವನಂ ಗತ್ವಾ ವಿಪ್ರಃ ಪಿತೃವಚಃ ಸ್ಮರನ್|
 ಚುಕ್ರೋಶ ಕನ್ಯಾಭಿಕ್ಷಾರ್ಥೀ ತಿಸ್ರೋ ವಾಚಃ ಶನೈರಿವ||

ಒಮ್ಮೆ ಆ ವಿಪ್ರನು ವನಕ್ಕೆ ಹೋಗಿ ತನ್ನ ಪಿತೃಗಳ ಮಾತನ್ನು ಸ್ಮರಿಸುತ್ತಾ, ಕನ್ಯಾಭಿಕ್ಷಾರ್ಥಿಯಾಗಿ ಮೂರು ಬಾರಿ ಸಣ್ಣ ಧ್ವನಿಯಲ್ಲಿ ಕೂಗಿದನು.

 ತಂ ವಾಸುಕಿಃ ಪ್ರತ್ಯಗೃಹ್ಣಾದುದ್ಯಮ್ಯ ಭಗಿನೀಂ ತದಾ|
 ನ ಸ ತಾಂ ಪ್ರತಿಜಗ್ರಾಹ ನ ಸನಾಮ್ನೀತಿ ಚಿಂತಯನ್||

ಆಗ ವಾಸುಕಿಯು ತನ್ನ ತಂಗಿಯನ್ನು ಕರೆತಂದು ಒಪ್ಪಿಸಿದನು. ಆದರೆ ಅವಳ ಹೆಸರು ಮತ್ತು ತನ್ನ ಹೆಸರು ಒಂದೇ ಇರಲಿಕ್ಕಿಲ್ಲ ಎಂದು ಯೋಚಿಸಿ ಅವನು ಅವಳನ್ನು ಸ್ವೀಕರಿಸಲಿಲ್ಲ. 

 ಸನಾಮ್ನೀಮುದ್ಯತಾಂ ಭಾರ್ಯಾಂ ಗೃಹ್ಣೀಯಾಮಿತಿ ತಸ್ಯ ಹಿ|
 ಮನೋ ನಿವಿಷ್ಟಮಭವಜ್ಜರತ್ಕಾರೋರ್ಮಹಾತ್ಮನಃ||

ಮಹಾತ್ಮ ಜರತ್ಕಾರುವು ತನ್ನ ಮನಸ್ಸಿನಲ್ಲಿಯೇ ಯೋಚಿಸಿದನು: “ನನ್ನ ಹೆಸರನ್ನೇ ಹೊಂದಿರದಿದ್ದ ಯಾರನ್ನೂ ನಾನು ಭಾರ್ಯೆಯನ್ನಾಗಿ ಸ್ವೀಕರಿಸುವುದಿಲ್ಲ.”

 ತಮುವಾಚ ಮಹಾಪ್ರಾಜ್ಞೋ ಜರತ್ಕಾರುರ್ಮಹಾತಪಾಃ|
 ಕಿಮ್ನಾಮ್ನೀ ಭಗಿನೀಯಂ ತೇ ಬ್ರೂಹಿ ಸತ್ಯಂ ಭುಜಂಗಮ||

ಆಗ ಮಹಾಪ್ರಾಜ್ಞ ಮಹಾತಪಸ್ವಿ ಜರತ್ಕಾರುವು ಅವನಿಗೆ ಕೇಳಿದನು: “ಭುಜಂಗಮ! ನಿನ್ನ ಈ ತಂಗಿಯ ಹೆಸರೇನು? ಸತ್ಯವನ್ನು ನುಡಿ.”

 ವಾಸುಕಿರುವಾಚ|
 ಜರತ್ಕಾರೋ ಜರತ್ಕಾರುಃ ಸ್ವಸೇಯಮನುಜಾ ಮಮ|

 ತ್ವದರ್ಥಂ ರಕ್ಷಿತಾ ಪೂರ್ವಂ ಪ್ರತೀಚ್ಛೇಮಾಂ ದ್ವಿಜೋತ್ತಮ||

ವಾಸುಕಿಯು ಹೇಳಿದನು: “ಜರತ್ಕಾರು! ನನ್ನ ಅನುಜೆಯ ಹೆಸರೂ ಜರತ್ಕಾರು. ಬಹುಕಾಲದಿಂದ ನಿನಗಾಗಿ ಇವಳನ್ನು ರಕ್ಷಿಸಿಟ್ಟಿದ್ದೇನೆ. ದ್ವಿಜೋತ್ತಮ! ಸಂತೋಷದಿಂದ ಇವಳನ್ನು ಸ್ವೀಕರಿಸು.””



 ಸೂತ ಉವಾಚ|
 ಮಾತ್ರಾ ಹಿ ಭುಜಗಾಃ ಶಪ್ತಾಃ ಪೂರ್ವಂ ಬ್ರಹ್ಮವಿದಾಂ ವರ|
 ಜನಮೇಜಯಸ್ಯ ವೋ ಯಜ್ಞೇ ಧಕ್ಷ್ಯತ್ಯನಿಲಸಾರಥಿಃ||

ಸೂತನು ಹೇಳಿದನು: “ಬ್ರಹ್ಮವಿದರಲ್ಲಿ ಶ್ರೇಷ್ಠ! ಪೂರ್ವದಲ್ಲಿ ಸರ್ಪಗಳು "ಜನಮೇಜಯನ ಯಜ್ಞದಲ್ಲಿ ಅನಿಲಸಾರಥಿ ಅಗ್ನಿಯಿಂದ ಸುಟ್ಟುಹೋಗಿ” ಎಂದು ಅವರ ಮಾತೆಯಿಂದಲೇ ಶಪಿಸಲ್ಪಟ್ಟಿದ್ದರು.

 ತಸ್ಯ ಶಾಪಸ್ಯ ಶಾಂತ್ಯರ್ಥಂ ಪ್ರದದೌ ಪನ್ನಗೋತ್ತಮಃ|
 ಸ್ವಸಾರಂ ಋಷಯೇ ತಸ್ಮೈ ಸುವ್ರತಾಯ ತಪಸ್ವಿನೇ||

ಆ ಶಾಪವನ್ನು ಶಾಂತಗೊಳಿಸಲು ಪನ್ನಗೋತ್ತಮ ವಾಸುಕಿಯು ತನ್ನ ತಂಗಿಯನ್ನು ಆ ಸುವ್ರತ ತಪಸ್ವಿ ಋಷಿಗೆ ಕೊಟ್ಟನು.

 ಸ ಚ ತಾಂ ಪ್ರತಿಜಗ್ರಾಹ ವಿಧಿದೃಷ್ಟೇನ ಕರ್ಮಣಾ|
 ಆಸ್ತೀಕೋ ನಾಮ ಪುತ್ರಶ್ಚ ತಸ್ಯಾಂ ಜಜ್ಞೇ ಮಹಾತ್ಮನಃ||

ವಿಧಿವತ್ತಾದ ಕರ್ಮಗಳಿಂದ ಆ ಮಹಾತ್ಮನು ಅವಳನ್ನು ಸ್ವೀಕರಿಸಿದನು ಮತ್ತು ಅವಳಲ್ಲಿ ಆಸ್ತೀಕ ಎಂಬ ಹೆಸರಿನ ಪುತ್ರನನ್ನು ಪಡೆದನು.

 ತಪಸ್ವೀ ಚ ಮಹಾತ್ಮಾ ಚ ವೇದವೇದಾಂಗಪಾರಗಃ|
 ಸಮಃ ಸರ್ವಸ್ಯ ಲೋಕಸ್ಯ ಪಿತೃಮಾತೃಭಯಾಪಹಃ||

ಅವನು ತಪಸ್ವಿಯೂ, ಮಹಾತ್ಮನೂ, ವೇದವೇದಾಂಗ ಪಾರಂಗತನೂ, ಲೋಕದ ಸರ್ವವನ್ನೂ ಸಮವಾಗಿ ಕಾಣುವವನೂ, ತಂದೆತಾಯಿಗಳ ಭಯವನ್ನು ದೂರಪಡಿಸುವವನೂ ಆಗಿದ್ದನು.

 ಅಥ ಕಾಲಸ್ಯ ಮಹತಃ ಪಾಂಡವೇಯೋ ನರಾಧಿಪಃ|
 ಆಜಹಾರ ಮಹಾಯಜ್ಞಂ ಸರ್ಪಸತ್ರಮಿತಿ ಶ್ರುತಿಃ||

ಬಹಳ ಕಾಲದ ನಂತರ ಪಾಂಡವರ ವಂಶದಲ್ಲಿ ಜನಿಸಿದ ನರಾಧಿಪನು ಸರ್ಪಸತ್ರವೆಂದು ಖ್ಯಾತಿಯಾದ ಮಹಾಯಜ್ಞವನ್ನು ಕೈಗೊಂಡನು.

 ತಸ್ಮಿನ್ಪ್ರವೃತ್ತೇ ಸತ್ರೇ ತು ಸರ್ಪಾಣಾಮಂತಕಾಯ ವೈ|
 ಮೋಚಯಾಮಾಸ ತಂ ಶಾಪಮಾಸ್ತೀಕಃ ಸುಮಹಾಯಶಾಃ||

ಆ ಸತ್ರದಲ್ಲಿ ಸರ್ಪಗಳ ವಿನಾಶವು ನಡೆಯುತ್ತಿರುವಾಗ ಸುಮಹಾಯಶ ಆಸ್ತೀಕನು ಅವುಗಳನ್ನು ಶಾಪದಿಂದ ಮುಕ್ತಗೊಳಿಸಿದನು.

 ನಾಗಾಂಶ್ಚ ಮಾತುಲಾಂಶ್ಚೈವ ತಥಾ ಚಾನ್ಯಾನ್ಸ ಬಾಂಧವಾನ್|
 ಪಿತೄಂಶ್ಚ ತಾರಯಾಮಾಸ ಸಂತತ್ಯಾ ತಪಸಾ ತಥಾ|

 ವ್ರತೈಶ್ಚವಿವಿಧೈರ್ಬ್ರಹ್ಮನ್ಸ್ವಾಧ್ಯಾಯೈಶ್ಚಾನೃಣೋಽಭವತ್||

ತನ್ನ ಸ್ವಾಧ್ಯಾಯ, ವಿವಿಧ ವ್ರತ-ತಪಸ್ಸುಗಳ ಮೂಲಕ ಆ ಬ್ರಾಹ್ಮಣನು ನಾಗಗಳನ್ನು, ಸೋದರ ಮಾವನನ್ನು, ಇತರ ಬಾಂಧವರನ್ನು, ಪಿತೃಗಳನ್ನು ಮತ್ತು ಮುಂದಿನ ಸಂತತಿಯನ್ನು ಉದ್ಧಾರಮಾಡಿ ಅವರಿಂದ ಋಣ ಮುಕ್ತನಾದನು.

 ದೇವಾಂಶ್ಚ ತರ್ಪಯಾಮಾಸ ಯಜ್ಞೈರ್ವಿವಿಧದಕ್ಷಿಣೈಃ|
 ಋಷೀಂಶ್ಚ ಬ್ರಹ್ಮಚರ್ಯೇಣ ಸಂತತ್ಯಾ ಚ ಪಿತಾಮಹಾನ್||

ದಕ್ಷಿಣೆಗಳಿಂದೊಡಗೂಡಿದ ವಿವಿಧ ಯಜ್ಞಗಳಿಂದ ದೇವತೆಗಳನ್ನು, ಬ್ರಹ್ಮಚರ್ಯದಿಂದ ಋಷಿಗಳನ್ನು ಮತ್ತು ಸಂತತಿಯಿಂದ ಪಿತಾಮಹರನ್ನು ತೃಪ್ತಿಪಡಿಸಿದನು.

 ಅಪಹೃತ್ಯ ಗುರುಂ ಭಾರಂ ಪಿತೄಣಾಂ ಸಂಶಿತವ್ರತಃ|
 ಜರತ್ಕಾರುರ್ಗತಃ ಸ್ವರ್ಗಂ ಸಹಿತಃ ಸ್ವೈಃ ಪಿತಾಮಹೈಃ||

ಈ ರೀತಿ ಪಿತೃಗಳ ದೊಡ್ಡ ಋಣವನ್ನು ತೀರಿಸಿ ಜರತ್ಕಾರುವು ತನ್ನ ಪಿತಾಮಹರ ಸಹಿತ ಸ್ವರ್ಗವನ್ನು ಸೇರಿದನು.
#Chetha #Muniswamy #gowda #Riya #YOGI
#ChethanaMuniswamygowda 

 ಆಸ್ತೀಕಂ ಚ ಸುತಂ ಪ್ರಾಪ್ಯ ಧರ್ಮಂ ಚಾನುತ್ತಮಂ ಮುನಿಃ|
 ಜರತ್ಕಾರುಃ ಸುಮಹತಾ ಕಾಲೇನ ಸ್ವರ್ಗಮೀಯಿವಾನ್||

ಆಸ್ತೀಕನನ್ನು ಮಗನನ್ನಾಗಿ ಪಡೆದ ಧಾರ್ಮಿಕ ಮುನಿಗಳಲ್ಲಿ ಉತ್ತಮ ಜರತ್ಕಾರುವು ಬಹಳ ಸಮಯದ ನಂತರ ಸ್ವರ್ಗವನ್ನು ಸೇರಿದನು.

 ಏತದಾಖ್ಯಾನಮಾಸ್ತೀಕಂ ಯಥಾವತ್ಕೀರ್ತಿತಂ ಮಯಾ|
 ಪ್ರಬ್ರೂಹಿ ಭೃಗುಶಾರ್ದೂಲ ಕಿಂ ಭೂಯಃ ಕಥ್ಯತಾಮಿತಿ||

ನಾನು ಈಗ ಹೇಳಿದುದು ಆಸ್ತೀಕನ ಆಖ್ಯಾನ. ಭೃಗುಶಾರ್ದೂಲ! ಇನ್ನು ಯಾವ ಕಥೆಯನ್ನು ಹೇಳಲಿ?”

ಇತಿ ಶ್ರೀ ಮಹಾಭಾರತೇ ಆದಿ ಪರ್ವಣಿ ಆಸ್ತೀಕ ಪರ್ವಣಿ ಜರತ್ಕಾರುತತ್ಪಿತೃಸಂವಾದೋ ನಾಮ ತ್ರಯೋದಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆದಿ ಪರ್ವದಲ್ಲಿ ಆಸ್ತೀಕ ಪರ್ವದಲ್ಲಿ ಜರತ್ಕಾರುತತ್ಪಿತೃಸಂವಾದವೆಂಬ ಹದಿಮೂರನೆಯ ಅಧ್ಯಾಯವು.



ನೀಲಕಂಠೀಯದಲ್ಲಿ ಇದಕ್ಕೆ ಮೊದಲಿರುವ ಈ ಶ್ಲೋಕವು ಆಸ್ತೀಕನ ಕಥೆಯನ್ನು ಮೊದಲು ವ್ಯಾಸನು ನೈಮಿಷಾರಣ್ಯದಲ್ಲಿ ಹೇಳಿದನು ಎಂದು ಸೂಚಿಸುತ್ತದೆ: ಇತಿಹಾಸಮಿಮಂ ವಿಪ್ರಾಃ ಪುರಾಣಂ ಪರಿಚಕ್ಷತೇ| ಕೃಷ್ಣದ್ವೈಪಾನಯಪ್ರೋಕ್ತಂ ನೈಮಿಷಾರಣ್ಯವಾಸಿಷು||

[ಯಾಯಾವರಾ ನಾಮ ಬ್ರಾಹ್ಮಣಾ ಅಸಂಸ್ತೇ ಅರ್ಧಮಾಸಾದಗ್ನಿಹೋತ್ರಮಜುಹ್ವನ್ (ಭರದ್ವಾಜಃ) ಅರ್ಥಾತ್: ಒಂದೊಂದು ಹಳ್ಳಿಯಲ್ಲಿ ಒಂದೊಂದು ರಾತ್ರಿ ಕಳೆಯುತ್ತಾ ಪ್ರತಿಪಕ್ಷದಲ್ಲಿಯೂ ಅಗ್ನಿಹೋತ್ರಮಾಡಿಕೊಂಡು ಸಂಚರಿಸುವ ಬ್ರಾಹ್ಮಣರಿಗೆ ಯಾಯಾವರರೆಂದು ಹೆಸರು.

ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಯಾಯಾವರ ಕುಲದ ಲಕ್ಷಣವನ್ನು ವರ್ಣಿಸುವ ಈ ಶ್ಲೋಕಗಳಿವೆ:

 ಸ ಕದಾಚಿನ್ಮಹಾಭಾಗಸ್ತಪೋಬಲಸಮನ್ವಿತಃ| ಚಚಾರ ಪೃಥಿವೀಂ ಸರ್ವಾಂ ಯತ್ರಸಾಯಂಗೃಹೋ ಮುನಿಃ|| ತೀರ್ಥೇಷು ಚ ಸಮಾಪ್ಲಾನಂ ಕುರ್ವನ್ನಟತಿ ಸರ್ವಶಃ| ಚರನ್ದೀಕ್ಷಾಂ ಮಹಾತೇಜಾ ದುಶ್ಚರಾಮಕೃತಾತ್ಮಭಿಃ|| ವಾಯುಭಕ್ಷೋ ನಿರಾಹಾರಃ ಶುಷ್ಯನ್ನನಿಮಿಷೋ ಮುನಿಃ| ಇತಸ್ತತಃ ಪರಿಚರನ್ದೀಪ್ತಪಾವಕಸಪ್ರಭಃ||


 ಅರ್ಥಾತ್ ಆ ತಪೋಬಲಸಮನ್ವಿತನು ಒಮ್ಮೆ ಪ್ರಪಂಚಪರ್ಯಟನ ಮಾಡಲು ಹೊರಟನು. ಪುಣ್ಯಪ್ರದ ತೀರ್ಥಗಳಿಗೆ ಹೋಗಿ ಯಥಾವಿಧಿ ಸ್ನಾನ-ಪಿತೃಪೂಜೆಗಳನ್ನು ಮಾಡಿ ಮುಂದುವರೆಯುವುದು,

 ಸಾಯಂಕಾಲವಾಗುತ್ತಲೇ ಒಂದೆಡೆ ತಂಗುವುದು, ಇದು ಅವನ ದಿನಚರಿಯಾಗಿತ್ತು. ಆಹಾರದ ಬಯಕೆಯಿರದ ಅವನು ನಿರಾಹಾರನಾಗಿ ಗಾಳಿಯನ್ನೇ ಸೇವಿಸುತ್ತಿರುತ್ತಿದ್ದನು. ಧಗಧಗಿಸುವ ಬೆಂಕಿಯ ತೇಜಸ್ಸಿದ್ದ ಅವನು ಅಲ್ಲಲ್ಲಿ ಸಂಚರಿಸುತ್ತಿದ್ದನು.

ಶಿವನ ಕಂಠದಲ್ಲಿರುವ ನಾಗರಾಜನೇ ವಾಸುಕಿ. ಇವನೂ ಕೂಡ ಅನಂತ ಶೇಷನಾಗನಂತೆ ಕದ್ರು ಮತ್ತು ಕಶ್ಯಪರ ಮಗ ನಾಗ. ಅವನ ಹೆಡೆಯ ಮೇಲೆ ನಾಗಮಣಿಯಿದೆ.

ದೇವೀ ಪುರಾಣದ ಪ್ರಕಾರ ವಾಸುಕಿಯ ತಂಗಿ, ಆಸ್ತೀಕನ ತಾಯಿಯ ಹೆಸರು ಮಾನಸಾ.

 ಮನುಷ್ಯನಿಗೆ ಮೂರು ಋಣಗಳಿವೆಯೆಂದು ಹೇಳುತ್ತಾರೆ: ದೇವ ಋಣ, ಋಷಿ ಋಣ ಮತ್ತು ಪಿತೃ ಋಣ. ದೇವಋಣವನ್ನು ಪೂಜೆ-ವ್ರತ-ಯಾಗಗಳಿಂದಲೂ, ಋಷಿ ಋಣವನ್ನು ಬ್ರಹ್ಮಚರ್ಯ-ಸ್ವಾಧ್ಯಾಯ-ತಪಸ್ಸುಗಳ ಮೂಲಕವೂ, ಪಿತೃ ಋಣವನ್ನು ಸಂತತಿಯಿಂದಲೂ ಪೂರೈಸಬಹುದೆಂದು ಹೇಳುತ್ತಾರೆ.

 #aremarked #Comment
 #siteURL #Skiptocontent #ಜರತ್ಕಾರು #ವೇದವ್ಯಾಸ



  || ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ

*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ ಉದ್ಯಮ