ಮಧ್ವಾಚಾರ್ಯರ ಹಿನ್ನೆಲೆ:-

*ಮಧ್ವ ಮತ-ಮಧ್ವಾಚಾರ್ಯರ ಹಿನ್ನೆಲೆ ಮತ್ತು ಯಜ್ಞೋಪವೀತ*
#acharya #ramcharan #vadtal #swaminarayan #ghanshyammaharaj 
ತತ್ತ್ವವಾದವನ್ನು ಮಂಡಿಸಿ ಸಜ್ಜನರಿಗೆ ಸಮೀಚೀನ ಜ್ಞಾನವನ್ನು ಕೊಡಲೆಂದೇ ಅವತರಿಸಿ ಬಂದವರು ಶ್ರೀಮದಾಚಾರ್ಯ ಮಧ್ವರು. ಇವರ ಅವತಾರಕ್ಕೂ ಮುನ್ನ ಭಾರತದಲ್ಲಿ ಅನೇಕ ದರ್ಶನಗಳು, ಭಾಷ್ಯಗಳು ಇದ್ದದ್ದು ವಿದಿತ. ಅವುಗಳಲ್ಲಿಯ ಲೋಪದೋಷಗಳನ್ನೂ ಸದಾಗಮಗಳಿಗೆ ವಿರುದ್ಧವಾಗಿದ್ದ ವಾದಗಳನ್ನು ಖಂಡಿಸಿ ಸತ್ಸಿದ್ಧಾಂತವನ್ನು ಪುನಃಸ್ಥಾಪಿಸಿದ್ದು ಶ್ರೀಮಧ್ವಾಚಾರ್ಯರೆ. ಈ ಹಿಂದೆ ಇತರ ಮತಾಚಾರ್ಯರು ಪ್ರತಿಪಾದಿಸಿದ ಮೂಲ ವಿಚಾರಗಳನ್ನು ಶ್ರೀವಿಜಯದಾಸರು ಸಂಗ್ರಹವಾಗಿ, ಸ್ವಾರಸ್ಯಕರವಾಗಿ ತಮ್ಮ ಕೃತಿಯಲ್ಲಿ ದಾಖಲಿಸಿರುವರು.

*ಹರಿಯು ಗುಣಶೂನ್ಯ ಹರಿಯು ನಿರಾಕಾರ*
*ಹರಿಯು ದೊರೆಯು ಅಲ್ಲ ಹರಿ ಪರತಂತ್ರ*
*ಹರಿಯು ದುರ್ಬಲನು ಹರಿಗೆ ಎಂಟು ಗುಣ*
*ಹರಿಯು ತಾನೆಂದು ತಾರತಮ್ಯವೆನದೆ*
*ಧರೆಗೆಲ್ಲಾ ಮಿಥ್ಯಾ ಪರಿಪರಿ ಕರ್ಮಗಳು*
*ಹರಿತಾನೆ ಪುಟ್ಟಿ ಚರಿಸುವ ಲೀಲೆಯಲಿ*
*ನರ ನಾನಾ ಜನ್ಮಧರಿಸಿ ತೋರುವನೆಂದು*
*ದುರುಳ ದುರ್ಮತದವರು ಸರಿಸರಿ ಬಂದಂತೆ*
*ವರಲಿ ಸಜ್ಜನರನ್ನು ತಿರಸ್ಕಾರವನೆ ಮಾಡಿ*
*ತಿರುಗುತಿರೆ ಇತ್ತ ಸುರರು ಕಳವಳಿಸಿ*
*ಪರಮೇಷ್ಠಿಗೆ ಪೇಳಿ ಹರಿಗೆ ಬಿನ್ನೈಸಲು*
*ಮರುತದೇವನೆ ಅವತರಿಸಿದ ಹರುಷದಲಿ*
*ಕರುಣಾಕರಮೂರ್ತಿ ವಿಜಯವಿಟ್ಠಲರೇಯಾ*
*ಪರನೆಂದು ಸಾರಿ ಧರೆಯೊಳಗೆ ಮೆರೆದಾ ll - ಶ್ರೀವಿಜಯದಾಸರು*

ಶ್ರೀಮದಾಚಾರ್ಯರ ಅವತಾರದ ಹಿನ್ನಲೆಯನ್ನು ತಿಳಿದಾಗ ಮಾತ್ರ ಅವರ ಅವತಾರದ ಮಹತ್ವ ತಿಳಿಯುತ್ತದೆ. ಸುಮಧ್ವವಿಜಯದಲ್ಲಿ ವಿಸ್ತಾರವಾಗಿ ಬಂದಿದೆ. ವೇದೇತಿಹಾಸ ಪುರಾಣಗಳ ನಿಜಾರ್ಥವನ್ನು ಮುಚ್ಚಿಹಾಕಿ ತಮ್ಮದೇ ಆದ ದುರ್ಭಾಷ್ಯಗಳನ್ನು ಪ್ರಚಾರಕ್ಕೆ ತಂದು ದುರಂತಕ್ಕೆ ತಳ್ಳಿದಂತಾಗಿಸಿದರು. ಇಲ್ಲಿ ದಾಸರು ದುರ್ಮತಗಳ ವಿಚಾರವನ್ನು ಕೆಲಪದಗಳಲ್ಲಿ ಸಂಗ್ರಹಿಸಿ ಕೊಟ್ಟಿರುವುದು ಸುಂದರವಾಗಿದೆ. ಭಗವಂತನ ಆಜ್ಞೆ, ಪ್ರಾರ್ಥನೆ, ಸಜ್ಜನರ ಮೇಲಿನ ಕರುಣೆಯಿಂದ ವಾಯುದೇವರೆ ಧರೆಗೆ ಮಧ್ವರಾಗಿ ಅವತರಿಸಿ ಬಂದು ಉದ್ಧರಿಸಿದರು. ಶ್ರೀಹರಿಯ ಪಾರಮ್ಯವನ್ನು ಸಾರಿ, ದುರ್ಮತಗಳನ್ನು ಖಂಡಿಸಿ ಮೆರೆದರು. ಕೆಲವೇ ಪದಗಳಲ್ಲಿ ಅನ್ಯ ದುರ್ಮತಗಳ ಅಂತರಾಳವನ್ನು ಬಿಚ್ಚಿಟ್ಟು ಸಾರರೂಪದಲ್ಲಿ ನಿರೂಪಿಸಿದ ಶೈಲಿ ತುಂಬು ಅರ್ಥಗರ್ಭಿತವಾಗಿದೆ.
*ಯ

ಜಗತ್ತಿನಲ್ಲಿ ಸಜ್ಜನರಿಗೆ ಸಮೀಚೀನವಾದ ಜ್ಞಾನವನ್ನು ಕೊಡಲೆಂದೇ ಅವತರಿಸಿ ಬಂದವರು ಶ್ರೀಮದಾನಂದತೀರ್ಥರು. ಜೀವೋತ್ತಮರಾದ ವಾಯುದೇವರ ಮೂರನೇಯ ಅವತಾರವಾಗಿ ಭಗವಂತನ ಆಜ್ಞಾನುಸಾರ ಧರೆಗಿಳಿದು ಬಂದರು. ಶ್ರೀವ್ಯಾಸರಾಜರು ಹೇಳಿದ್ದು ಹೀಗೆ-

*ಧರಣಿ ಮಂಡಲದೊಳಗೆ ಭೂಮಿ ಸುರಗಣಕೆ ಶಾಸ್ತ್ರಾಮೃತವ*
*ಎರದು ಶ್ರೀಕೃಷ್ಣನ ಇರವ ತೋರಿ ವರಬದರಿಯೊಳು ಬಂದು ನಿಂದ ಧೀರ ll* ಎಂದು

ಶ್ರೀವಾದಿರಾಜರು ಮಧ್ವರ ಸ್ವರೂಪವನ್ನು -

*ಮರುದಂಶ ಮಧ್ವಮುನಿರನ್ನ ನಿನಗೆ*
*ಸರಿಗಾಣೇ ಜಗದೊಳಗೆ ಸರ್ವರೊಳು ಪೂರ್ಣ ll* ಎಂದು ಬಣ್ಣಿಸಿದರು.

*ಹನುಮ ಭೀಮ ಮಧ್ವಮುನಿರಾಯ*
*ಗುಣಧಾಮ ಹರಿಪಾದ ಸೇವೆಯೊಳಗಧಿಕ ಪ್ರೇಮ ll*

*'ಈತನೆ ಕಾಣಿರೊ ಮಧ್ವಮುನಿ'* ಎಂಬ ಉಗಾಭೋಗದಲ್ಲಿ ರಾಜರು ಮಧ್ವರ ಕಾರ್ಯದ ಬಗ್ಗೆ ಹೇಳಿದ ಮಾತು,

*ಸಕಲಾಗಮಗಳೆಂಬ ಶರಧಿಯೊಳಗೆ*
*ಯುಕುತಿಯಿಂದಲಿ ಮಥಿಸಿ*
*ಅಕಳಂಕ ಶ್ರೀಹರಿಯೆಂಬ ರತ್ನವ ಕಂಡು*
*ಮುಕುಟ ದೊಳಿಟ್ಟು ಲೋಕದಿ ಮೆರೆದಾತ ll -ಶ್ರೀವಾದಿರಾಜರು*

ಮಧ್ವಮತಾನುಯಾಯಿಗಳಾದ ಹರಿದಾಸರು ಶ್ರೀಪಾದರಾಜರನ್ನು ಅನುಕರಿಸಿ ಅನೇಕ ಪದಪದ್ಯಗಳಿಂದ ಶ್ರೀಮದಾಚಾರ್ಯರನ್ನು ಸ್ತುತಿಸಿ, ಕೀರ್ತಿಸಿ ನಲಿದ ಪರಂಪರೆ ಇದೆ. ಮಧ್ವರನ್ನು ಹಾಡಿ ಪೊಗಳದ ದಾಸರಿಲ್ಲ. ಇದಕ್ಕೆ ಮುಖ್ಯಕಾರಣ ಶ್ರೀ ಶ್ರೀಪಾದರಾಜರು ಎಂದಂತೆ ಮಧ್ವರು -

*ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ*
*ಅಖಿಲಗುಣ ಸದ್ಧಾಮ ಮಧ್ವನಾಮ ll*

ಆಶ್ವೀಜ ಶುದ್ಧ ದಶಮಿ (ವಿಜಯದಶಮಿ) ಯಂದು ಅವತರಿಸಿ ಬಂದ ಸರ್ವಜ್ಞಾಚಾರ್ಯರು ಮಾಘಶುದ್ಧ ನವಮಿ ಅದೃಶ್ಯರಾಗಿ ಬದರಿಯಲ್ಲಿ ಶ್ರೀವೇದವ್ಯಾಸರ ಸನ್ನಿಧಿಯಲ್ಲಿ ನಿಂದರು. ತಮ್ಮ ಸರ್ವಮೂಲ ಗ್ರಂಥಗಳಲ್ಲಿ ಸಜ್ಜನರ ಹೃದಯ ಮಂಟಪದಲ್ಲಿ ಸದಾವಿರಾಜಮಾನರಾಗಿ ನೆಲೆಸಿ ಮುಕ್ತಿಮಾರ್ಗವಾದ ತತ್ತ್ವಜ್ಞಾನವನ್ನು ಮಂಡಿಸಿದರು.

ಇವರ ವಾದದ ಸಾರವನ್ನು ಹೇಳಿದ್ದು ಹೀಗೆ -

*ಸರ್ವೇಶ ಹರಿ ವಿಶ್ವವೆಲ್ಲ ತಾ ಪುಸಿಯೆಂಬ*
*ದುರ್ವಾದಿಗಳ ಮತವ ನೆರೆ ಖಂಡಿಸಿ*
*ಸರ್ವೇಶ ಹರಿ ವಿಶ್ವಸತ್ಯವೆಂದರುಹಿದಾ*
*ಶರ್ವಾದಿ ಗೀರ್ವಾಣ ಸಂತತಿಯಲಿ ll*

*'ಮತದೊಳು ಒಳ್ಳೆ ಮತವು ಮಧ್ವಮತವು'* ಎಂದು ಹೇಳಿದ ಪುರಂದರದಾಸರು *'ಹರಿಯ ಮತವೆ ಹನುಮನ ಮತವು'* ಎಂದು ಸಾರಿದರು. ಮತ್ತೊಂದು ಕಡೆ

*ಮಧ್ವರಾಯರ ನೆನೆದು ಶುದ್ಧರಾಗಿರೊ*
*ಹೊದ್ದಿ ವೈಷ್ಣವ ಮತವ ಭವಾಬ್ಧಿ ದಾಟಿರೊ ll* ಎಂದು ಭೋಧಿಸಿದರು.

ದಾಸರು ಹೆಮ್ಮೆಯಿಂದ ಪೊಗಳುತ್ತ ಮಧ್ವರ ಹಾಗೂ ಅವರ ಶಾಸ್ತ್ರಗಳ ಬಗ್ಗೆ ಹೇಳುವಾಗ ಹೀಗೆಂದರು,

*ಇದಿರ್ಯಾರೋ ಗುರುವೆ ಸಮರ್ಯಾರೋ l*
*ವೇದಶಾಸ್ತ್ರಗಳಿಂದ ಮಾಯಿಗಳ ಖಂಡಿಸಿ*
*ಸಾಧಿಸಿ ಹರಿಯ ಸರ್ವೋತ್ತಮನೆಂತೆಂದು*
*ಮೋದಭರಿತರಾದ ದಿವ್ಯಶಾಸ್ತ್ರವ ಮಾಡಿದ*
*ಮೋದತೀರ್ಥ ಪುರಂದರವಿಟ್ಠಲನ ದಾಸ ll -ಶ್ರೀಪು.ದಾಸರು

*ಕಲಿಯುಗದಲಿ ತುರೀಯಾಶ್ರಮವನೆ ಧರಿಸಿ*
*ಕಲುಷದ ಮಾಯಿಗಳನೆ ಸೋಲಿಸಿ*
*ಖಿಲವಾದ ಮಧ್ವಮತವನು ಬಲಿದೆಸನಿಸಿ ಕಾಗಿ-*
*ನೆಲೆಯಾದಿಕೇಶವನೆ ಪರದೈವನೆಂದವನ ll -ಶ್ರೀಕನಕದಾಸರು*

ವಿಜಯದಾಸರು ನಿರ್ಣಯಿಸಿ ಹೇಳಿದ ಮಾತುಗಳು ಹೀಗಿವೆ -

*ಮಧ್ವರಾಯರ ಕರುಣೆ ಪಡೆಯದವ*
*ಧರೆಯೊಳಗೆ ಇದ್ದರೇನು ಇಲ್ಲದಿದ್ದರೇನು ll* ಇದಕ್ಕೆ ಕಾರಣ ಕೊಟ್ಟದ್ದು ಹೀಗೆ -

*ಮಧ್ವಮತವೇ ಸಕಲ ಶ್ರುತಿ ಸಮ್ಮತವು l*
*ಮಧ್ವರಾಯರ ಧ್ಯಾನ ಅಮೃತಪಾನ l*
*ಮಧ್ವರಾಯರ ಕಥೆಯು ಕೇಳಲದು ದುರಿತಹತ l*
*ಮಧ್ವರಾಯರ ಭಕುತಿ ಮಾಡೆ ಮುಕುತಿ l*
*ಮಧ್ವರಾಯರ ಸ್ತೋತ್ರ ಮಾಡಿದವ ಸತ್ಪಾತ್ರ l*
*ಮಧ್ವರಾಯರ ಭಜನೆ ದುಷ್ಕರ್ಮತ್ಯಜನೆ l*
*ಮಧ್ವರಾಯರ ಬಂಟ ಜಗಕೆ ನಂಟ l*
*ಮಧ್ವೇಶನಾ ಕರುಣ ಪಡೆದವನೆ ಶರಣಾ ll -ಶ್ರೀವಿಜಯದಾಸರು*

ಗೋಪಾಲದಾಸರು ಆಚಾರ್ಯ ಮಧ್ವರಲ್ಲಿ ಇದನ್ನೇ ಬೇಡಿ ಎಂದದ್ದು -

*ಸತತ ಸನ್ಮಾರ್ಗದ ಪಥವನು ತೋರಿಸಿ l*
*ಗತಿಯಾಗು ದಶಪ್ರಮತಿ ಮುನಿರಾಯ ll - ಶ್ರೀಗೋಪಾಲದಾಸರು*

               #maharajshree #dharmakul #vadtalgadi #vadtaldham #bhaviacharya #harikrishnamaharaj #laljimaharaj #vadtalmandir #lndym #dharmakulaashrit 

ಶ್ರೀಮದಾಚಾರ್ಯರ ಸಿದ್ಧಾಂತದ ಅವಲಂಬಿಗಳಾದ ಹರಿದಾಸರ ಒಕ್ಕೊರಲ ಧ್ವನಿ *'ಮಧ್ವಮತವೇ ಮತವು'* ಎಂದು. .

*ಶ್ರೀವಿಜಯದಾಸರು :*

*ಮಧ್ವಮತವೇ ಮತವು ಸಕಲ ಶ್ರುತಿ ಸಮ್ಮತವು*
*ಮಧ್ವೇಶನಾ ಸ್ಮರಣೆ ಕುಲಕೋಟಿ ಉದ್ಧರಣೆ*
*ಮಧ್ವರಾಯರ ಭಕುತಿ ಮಾಡೆ ಮುಕುತಿ*
*ಮಧ್ವರಾಯರ ದಾಸನಾದವನೆ ನಿರ್ದೋಷಿ ll*

*ಶ್ರೀಮೋಹನದಾಸರು :*

*ಮಧ್ವರಾಯರ ಭಾಗ್ಯ ಎಂಥದೊ ವರ್ಣಿಸಲು*
*ಶುದ್ಧ ಸತ್ವಾತ್ಮಕವಾದ ಶರೀರವು*
*ಅದ್ವೈತ ಮತವೆಂಬೊ ಅರಣ್ಯವ ಪೊಕ್ಕು*
*ವಿಧ್ವಂಸ ಮಾಡಿ ವಾದಿಗಳನೆ ಗೆದ್ದು*
*ಪದ್ಧತಿ ತಪ್ಪದಂತೆ ಮತವನುದ್ಧರಿಸಿ ll*

*ಮತದೊಳು ಮಧ್ವಮತ ವ್ರತದೊಳು ಹರಿದಿನ*
*ಕಥೆಯೊಳು ಭಾಗವತವೆನ್ನಿ ಕೋಲೆ l*
*ಕಥೆಯೊಳು ಭಾಗವತವೆನ್ನಿ ಇದರಂತೆ*
*ಪ್ರತಿಮೆಯೋಳ್ ವಿಷ್ಣು ಪ್ರತಿಮೆಯೆನ್ನಿ ಕೋಲೆ ll*

*ಶ್ರೀಪುರಂದರದಾಸರು :*

*ದೈವವಿಲ್ಲವು ವಿಶ್ವ ಜೀವ ಕರ್ತೃಕವೆಂಬ*
*ದೈವ ಹೀನರು ದುರ್ಮತದ ಗುರುಗಳ*
*ದೈವವುಂಟು ಜಗಕೆ ಕರ್ತೃವೆಂಬ ಪ್ರಮಾ*
*ಣವಳಿಯೊಳರಸ ಪೂರ್ಣಪ್ರಜ್ಞರಿಗೆಣೆಯೆ ll*

*ಮತದೊಳಗೆ ಒಳ್ಳೆ ಮತದ ಮಧ್ವಮತ l*
*ರಘುಪತಿ ಪೂಜಾ ವಿಧಾನಕೆ ಪಾವನಮತವು ll*

*ವೇದ ಶಾಸ್ತ್ರಗಳಿಂದ ಮಾಯಿಗಳ ಖಂಡಿಸಿ*
*ಸಾಧಿಸಿ ಹರಿಯೆ ಸರ್ವೋತ್ತಮನೆಂತೆಂದು*
*ಮೋದ ಭರಿತವಾದ ದಿವ್ಯಶಾಸ್ತ್ರವ ಮಾಡಿದ*
*ಮೋದತೀರ್ಥ ಪುರಂದರವಿಟ್ಠಲನ ದಾಸ ll*

*ಶ್ರೀಶ್ರೀಪಾದರಾಜರು :*

*ಸಾರಮಧ್ವ ಶಾಸ್ತ್ರವೋದದೆ ಗುರು*
*ತಾರತಮ್ಯ ಜ್ಞಾನ ಪುಟ್ಟದಂತೆ l*

*ಶ್ರೀರಂಗವಿಟ್ಠಲನ ಭಜಿಸದೆ ಮುಂದೆ*
*ಪರಮಗತಿಯು ದೊರಕೊಳ್ಳದಂತೆ ll*

*ಪುರಂದರದಾಸರು :*

*ಈ ಮಹಿಯೊಳಗೆ ಗುರುಗಳೆನಿಪರೆಲ್ಲ ನಮ್ಮ*
*ಶ್ರೀಮದಾಚಾರ್ಯ ಗುರುಶಿಖಾಮಣಿಗೆ ಸರಿಯೆ ll*

*ಮಧ್ವಮತಕಿನ್ನು ಸರಿಯುಂಟೆ ಪ್ರ-*
*ಸಿದ್ಧ ವೈಕುಂಠಕಿಂತಧಿಕ ಮತ್ತುಂಟೆ ll*

*ಶ್ರೀವ್ಯಾಸತತ್ವಜ್ಞರು :*

*ಆನಂದತೀರ್ಥರ ಮತ ಪರಮ l*
*ಆನಂದ ಸಾಧನ ತಿಳಿ ಕಂಡ್ಯಾ ಮನವೆ ll*

ಶ್ರೀವ್ಯಾಸರಾಜರು ಹೆಮ್ಮೆಯಿಂದ ಮಧ್ವಮತವೆ ಮತವು ಎಂದು ಶ್ರೀಮದಾಚಾರ್ಯರು ಪ್ರತಿ ಪಾದಿಸಿದ ಸಿದ್ಧಾಂತದ ಸಾರವನ್ನು ಸಂಗ್ರಹವಾಗಿ ಹೇಳುವರು.

*ಶ್ರೀವ್ಯಾಸರಾಜರು :*

*ಹರಿಯೆ ಸರ್ವೋತ್ತಮ ರಾಣಿ ಲಕುಮಿ ಬೊಮ್ಮ*
*ಹರ ಇಂದ್ರಾದ್ಯಖಿಳರು ತವ ಸೇವಕರು*
*ವರತಾರತಮ್ಯ ಪಂಚಭೇದ ಸತ್ಯವೆಂದು*
*ನೆರೆ ಪೇಳುವ ವಾಯುಮತದ ಸುಜ್ಞಾನವ ll*

*ಜನ್ಮವೆತ್ತಿ ಮಧ್ವಮತವ ಅನುಸರಿಸಿ ನಡೆಯಿರೊ l*
*ಸುಮ್ಮನದಿ ಸಿರಿಕೃಷ್ಣ ತನ್ನ ಲೋಕ ಕೊಡುವನೋ ll*

*ಶ್ರೀವಾದಿರಾಜರು :*

*ವಾರ ಮಧ್ವಶಾಸ್ತ್ರವೇ ಸಕಲ ಶಾಸ್ತ್ರಾಧಿಕವೆಂದು l*
*ಶಿರವರಿದು ಮುಂದಿರಿಸಲೋ ll*

*ಏಕ ವಿಂಶತಿ ಕುಭಾಷ್ಯವ ಜರಿದೆಯೊ ಗುರುಮಧ್ವಮುನಿರಾಯ ll*
#poojahegde #rrr #chiranjeevi #alluarjun #prabhas #pawankalyan #radheshyam #swaminarayansiddhant #raghuvirwadi #raghuvirvadi #ntr #laxminarayandev #maheshbabu #lndev #rrrmovie

*ಪುರಂದರದಾಸರು :*

*ಹರಿ ಶ್ರವಣ ಕೀರ್ತನ ಹರಿನಾಮ ಸ್ಮರಣ*
*ಹರಿಪಾದಸೇವನ ಹರಿಪೂಜೆ ವಂದನ*
*ಹರಿದಾಸ ಸಖ್ಯತ್ವ ಹರಿಗಾತ್ಮಾರ್ಪಣೆ*
*ಹರಿಭಕ್ತಿಯೇ ಮುಕ್ತ ಪಥ ತತ್ತ್ವ*
*ಪುರಂದರವಿಟ್ಠಲನೆ ಪರಮಾತ್ಮ ಸಿದ್ಧ*
*ವರಮಧ್ವಮತ ಶ್ರುತಿಯೋಳ್ ಪ್ರಸಿದ್ಧ ll*

*ಶ್ರೀವಾದಿರಾಜರು :*

*ನಿನ್ನ ಮತವೇ ವೇದಶಾಸ್ತ್ರಗಳ ಸಮ್ಮತವು*
*ನಿನ್ನ ಮತವೇ ಇಹ - ಸಾಧನವು*
*ಪನ್ನಂಗಶಯನ ಶ್ರೀಹಯವದನ ದಾಸರೊಳು*
*ನಿನ್ನ ಪೋಲುವರುಂಟೆ ಮಧ್ವಮುನಿರಾಯ ll*

*ಶ್ರೀವಿಜಯದಾಸರು :*

*ಪ್ರಾಣಗತಿ ಬಂದರು ಮಧ್ವಮತ ಬಿಡದಿರಿ l*
*ಪ್ರಾಣಧೃತು ನಾಮ ನಮ್ಮ ವಿಜಯವಿಟ್ಠಲಗರ್ಪಿಸಿ ll*

*ಹರಿದಾಸ ಹೃದಯ*

*ವೈಶಾಖ ಬಹುಳ ಷಷ್ಠಿ*

*ಉದ್ಧಾರಕರೆ ಮಧ್ವರು*

*ಮಧ್ವರಾಯರ ಭಾಗ್ಯ ಎಂಥದೋ ವರ್ಣಿಸಲು*
*ಶುದ್ಧ ಸತ್ತ್ವಾತ್ಮಕವಾದ ಶರೀರ*
*ಅದ್ವೈತ ಮತವೆಂಬೊ ಅರಣ್ಯವ ಪೊಕ್ಕು*
*ವಿಧ್ವಂಸ ಮಾಡಿ ವಾದಿಗಳನೆ ಗೆದ್ದು*
*ಪದ್ಧತಿ ತಪ್ಪದಂತೆ ಮತವನುದ್ಧರಿಸಿ*
*ವೃದ್ಧಿಗೈಸಿದರು ಸರ್ವಸಜ್ಜನರನ್ನು*
*ಸಿದ್ಧರಾವೆಂದು ಗೀರ್ವಾಣರೆಲ್ಲರು*
*ಎದ್ದೆದ್ದು ಕುಣಿದರು ಕರವ ಹೊಡೆದು*
*ವಿದ್ವಾಂಸನಾನೆಂದು ಅಹಂಕರಿಸದೆ ಇವರ*
*ಪಾದ ಪದ್ಮದಲ್ಲಿ ಅತಿದೃಢ ಭಕುತಿ ಮಾಡಿ*
*ಮಧ್ವರಾಯರೆ ನಮಗೆ ಉದ್ಧಾರಕರೆಂದು*
*ಪದೇಪದೆಗೆ ತಿಳಿದು ಕೊಂಡಾಡಿದರೆ*
*ಸಿದ್ಧಿದಾಯಕ ಸಿರಿಮೋಹನ್ನವಿಟ್ಠಲ*
*ಹೃದ್ದೃಷ್ಟಿಯಲಿ ನಿಂತು ಸಲಹುವನು ಬೇಗ ll - ಶ್ರೀಮೋಹನದಾಸರು.*

ಶ್ರೀಮೋಹನದಾಸರು ಶ್ರೀವಿಜಯದಾಸರಿಗೆ ಪ್ರೀತಿ ಪಾತ್ರರಾದ ಸಾಕು ಮಕ್ಕಳು. ತಂದೆ ತಾಯಿಗುರು ಹೀಗೆ ಎಲ್ಲವೂ ಆದ ದಾಸರಿಂದ ದೀಕ್ಷೆ - ಅಂಕಿತವನ್ನು ಪಡೆದು ಅನೇಕ ಕೃತಿಗಳನ್ನು ರಚಿಸಿದರು. ಇಲ್ಲಿ ಶ್ರೀಮದಾಚಾರ್ಯರ ಮಹಿಮೆಗಳನ್ನು ವರ್ಣಿಸಿರುವರು. ಶ್ರೀವಿಜಯದಾಸರು *'ಮಧ್ವರಾಯರ ಕರುಣ ಪಡೆಯದವ ಧರೆಯೊಳಗೆ ಇದ್ದರೇನು ಇಲ್ಲದಿದ್ದರೇನು'*, *'ಅದ್ವೈತ ಮತಾರಣ್ಯ ದಾಹನ ಗುಣಸಾಂದ್ರ'* ಹೀಗೆಲ್ಲಾ ಹೇಳಿದ ಮಾತುಗಳನ್ನಾಲಿಸಿದ್ದ ಶ್ರೀಮೋಹನದಾಸರು ಮೇಲಿನ ಸದುಕ್ತಿಗಳನ್ನು ಹೇಳಿರುವುದರಲ್ಲಿ ಔಚಿತ್ಯವಿದೆ. 

. ಈಶ-ದಾಸ ಭಾವ ಸಿದ್ಧಿಸಲು, ನಿತ್ಯಾನಂದ ಸಾಧಿಸಲು ಆಚಾರ್ಯಮಧ್ವರ ಸಿದ್ಧಾಂತವನ್ನು ಅವಲಂಬಿಸದೆ ಅನ್ಯಗತಿಯಿಲ್ಲ. ಇವರ ಅನುಯಾಯಿ ಆಗದೆ ಅನ್ಯ ಮಾರ್ಗವಿಲ್ಲ. ಅದಕ್ಕೆ ದಾಸರು *'ಮಧ್ವರಾಯರೆ ನಮಗೆ ಉದ್ಧಾರಕರೆಂದು ಪದೇ ಪದೆಗೆ ತಿಳಿದು ಕೊಂಡಾಡು'* ಎಂದರು. 

          

*ಹರಿಪದವ ನೆನೆವಂಗೆ ನರಕದ ಭಯವಿಲ್ಲ l - ಶ್ರೀವಾ.*

*ಯಜ್ಞೋಪವೀತದ ಪ್ರಾಮುಖ್ಯತೆ* 

ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ |
ಆಯುಷ್ಯಮಗ್ರ್ಯಂ ಪ್ರತಿಮುಂಚ ಶುಭ್ರಂ ಯಜ್ಞೋಪವೀತಂ ಬಲಮಸ್ತು ತೇಜಃ ||

ಅರ್ಥ: ಯಜ್ಞೋಪವೀತವು ಪರಮ ಪವಿತ್ರವಾದದ್ದು, ಪ್ರಜಾಪತಿಗಿಂತಲೂ
ಮೊದಲೇ ಉತ್ಪನ್ನಗೊಂಡಿದ್ದು,ಆಯುಷ್ಯವನ್ನು ಹೆಚ್ಚಿಸುವಂತದ್ದು, ಮನುಷ್ಯನನ್ನು ಶುಭ್ರ ಮಾಡುವಂತದ್ದು, ಯಜ್ಞೋಪವೀತ ನಮ್ಮ ಬಲ ಹಾಗೂ ತೇಜಸ್ಸನ್ನು ಹೆಚ್ಚಿಸುವಂತದ್ದು. 
ಹಾಗಾಗಿ ಯಜ್ಞೋಪವೀತ ಧಾರಣೆಗೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವನ್ನು ನೀಡಲಾಗಿದೆ.

ಅಂಗಡಿಯಿಂದ ತಂದ ಜನಿವಾರ ಸುಮ್ಮನೆ ಹಾಕಿಕೊಳ್ಳಬಾರದು.   ಅದಕ್ಕೆ ಸಂಸ್ಕಾರ ಮಾಡಿ,  ಯಜ್ಞೋಪವೀತಾಭಿಮಾನಿ ದೇವತೆಗಳನ್ನು ಪೂಜಿಸಿ, ವೇದವ್ಯಾಸ ದೇವರಿಗೆ ಸಮರ್ಪಿಸಿ, "ವಾಮನಾಯ ನಮ:" ಎಂದು ಬಲಿಚಕ್ರವರ್ತಿಯ ಅಹಂಕಾರ ಅಡಗಿಸಿ, ಸಮಸ್ತ ಭೂಮಂಡಲವನ್ನು ದಾನ ಪಡೆದ ವಾಮನ ರೂಪಿಯ ಸ್ಮರಿಸುತ್ತಾ 
ಶ್ರದ್ಧಾ ಭಕ್ತಿಯಿಂದ ಧರಿಸಬೇಕು.

ಜನಿವಾರದ ಒಂದೊಂದು ತಂತುವಿನಲ್ಲೂ ಒಂದೊಂದು ದೇವತೆಗಳನ್ನು ಆಹ್ವಾನಿಸಬೇಕು.  ಓಂಕಾರ, ಅಗ್ನಿ, ನಾಗ, ಸೋಮ, ಪಿತೃ ದೇವತೆಗಳು, ಪ್ರಜಾಪತಿಗಳು, ವಾಯು, ಸೂರ್ಯ ಮತ್ತು ವಿಶ್ವೇದೇವತೆಗಳನ್ನು, ಜೊತೆಗೆ ಮನುನಾಮಕ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಹರಿಯನ್ನು ಆಹ್ವಾನಿಸಬೇಕು.

ಮೊದಲ ತಂತುವಿನಲ್ಲಿ ಋಗ್ವೇದ, ಎರಡನೇಯದರಲ್ಲಿ ಯಜುರ್ವೇದ, ಮೂರನೇಯದರಲ್ಲಿ ಸಾಮವೇದ ಮತ್ತು ಗ್ರಂಥಿಯಲ್ಲಿ ಅಥರ್ವಣ ವೇದವನ್ನು ಅಭಿಮಂತ್ರಣ ಮಾಡಿರುತ್ತಾರೆ.  ಇಷ್ಟೆಲ್ಲಾ ಆದ ಮೇಲೆ ಆ ಜನಿವಾರವನ್ನು ಸೂರ್ಯನಿಗೆ ತೋರಿಸಿ ಧಾರಣೆ ಮಾಡಿರುತ್ತಾರೆ.   ಜನಿವಾರ ಧಾರಣೆ ಸಮಯದಲ್ಲಿ ಕನಿಷ್ಠ ಹತ್ತು ಗಾಯತ್ರಿ ಜಪ ಮಾಡಿ ಧರಿಸುತ್ತಾರೆ.


ಬ್ರಹ್ಮಚಾರಿ ಒಂದು ಜನಿವಾರ ಧರಿಸಿದರೆ, ಗೃಹಸ್ಥನು ಗೃಹಸ್ಥಾಶ್ರಮ ಸಿದ್ಧಿಗಾಗಿ ಎರಡು ಜನಿವಾರವನ್ನು ಧರಿಸುತ್ತಾನೆ.  ಉತ್ತರೀಯಾರ್ಥವಾಗಿ ಮೂರನೇ ಜನಿವಾರವನ್ನು ಧರಿಸುತ್ತಾರೆ.   ಮತ್ತು ಸಹಾಯಾರ್ಥ ಕೆಲವರು ನಾಲ್ಕನೇ ಜನಿವಾರ ಧರಿಸುವ ಸಂಪ್ರದಾಯವಿದೆ.


*ಬಲಗಿವಿಯಲ್ಲಿ ಜನಿವಾರ ಇಟ್ಟುಕೊಳ್ಳುವುದು*  --  ಮಲಮೂತ್ರ ವಿಸರ್ಜನೆ ಸಮಯದಲ್ಲಿ, ವಸ್ತ್ರ ಬದಲಾವಣೆ ಸಮಯದಲ್ಲಿ, ಯಜ್ಞೋಪವೀತವನ್ನು ಬಲಗಿವಿಯಲ್ಲಿ ಹಾಕಿಕೊಳ್ಳಬೇಕು.  ಬಲಗಿವಿಯ ಭಾಗದಲ್ಲಿರುವ ಒಂದು ವಿಶೇಷ ನರ ಉದರ ಭಾಗವನ್ನು ಸಂಪರ್ಕಿಸುತ್ತದೆ.  ಮಲಮೂತ್ರ ವಿಸರ್ಜನೆಯ ಸಮಯದಲ್ಲಿ ಜನಿವಾರವನ್ನು ಬಲಗಿವಿಯ ಮೇಲೆ ಹಾಕಿ ಕೊಂಡಾಗ ಆ ನರದ ಉತ್ತೇಜನವಾಗುತ್ತದೆ. ಇದರಿಂದ ಜೀರ್ಣ ಸಂಬಂಧಿ ಪ್ರಕ್ರಿಯೆಗಳು
ಸುಗಮವಾಗಿ ನಡೆಯುತ್ತವೆ. ಎಸಿಡಿಟಿ, ಉದರ ಸಂಬಂಧಿ ರೋಗಗಳು, ಮೂತ್ರೇಂದ್ರಿಯ ರೋಗಗಳು, ರಕ್ತದೊತ್ತಡ, ಹೃದಯ ಸಂಬಂಧಿ ರೋಗಗಳು ಹಾಗೂ ಹಲವು ಸಾಂಕ್ರಾಮಿಕ ರೋಗಗಳಿಂದ ಮುಕ್ತಿ ಸಿಗುತ್ತದೆ.  ಬಲಗಿವಿಯ ನರ ಗುಪ್ತೇಂದ್ರಿಯಗಳ ಜೊತೆ ಸಂಪರ್ಕವನ್ನು ಹೊಂದಿದೆ. ಮೂತ್ರ ವಿಸರ್ಜನೆಯ ಸಮಯದಲ್ಲಿ ಯಜ್ಞೋಪವೀತವನ್ನು ಬಲಗಿವಿಯ ಮೇಲೆ ಹಾಕಿಕೊಂಡಾಗ ಶುಕ್ರಾಣುಗಳ ರಕ್ಷಣೆಯಾಗುತ್ತದೆ.

ಜನ್ಮ ಅಥವಾ ಮರಣದ ಸೂತಕ ನಂತರ, ಹಾಗೂ ಕ್ಷೌರ ಮಾಡಿಸಿಕೊಂಡಾಗ, ಅಥವಾ ಯಾರದಾದರೂ ಸಾವಿನ ನಿಮಿತ್ತ ಸ್ಮಶಾನಕ್ಕೆ ಹೋಗಿದ್ದರೆ ,  ಅಥವಾ ಬೇರಾವುದೇ ಮೈಲಿಗೆ ಯಾಕೆಂದರೆ ಜನಿವಾರವನ್ನು ಬದಲಿಸಬೇಕು.


ದ್ವಿಜನೆಂದರೆ ಎರಡು ಬಾರಿ ಜನಿಸಿದವನು.  ಒಬ್ಬ ಮನುಷ್ಯ ಹುಟ್ಟುವಾಗ ಅವನಿಗೆ ಯಾವ ಸಂಸ್ಕಾರವೂ ಇರುವುದಿಲ್ಲ, ಅವನು ಒಬ್ಬ ದ್ವಿಜನಾಗಬೇಕಾದರೆ ಉಪನಯನವಾಗಬೇಕು.   ಉಪನಯನ ಎಂದರೆ ಸಮೀಪ ತರುವುದು, ಯಾವುದರ ಸಮೀಪ - ಬ್ರಹ್ಮಜ್ಞಾನದ ಸಮೀಪ.  ಉಪನಯನವಾದಾಗ ಮಾತ್ರ ದ್ವಿಜನಾಗುತ್ತಾನೆ.  ಷೋಡಶ ಸಂಸ್ಕಾರಗಳಲ್ಲಿ ಉಪನಯನವೂ ಒಂದು ಸಂಸ್ಕಾರ.  


ಜನಿವಾರವನ್ನು ಹತ್ತಿಯ ನೂಲಿನಿಂದ ತಯಾರಿಸುತ್ತಾರೆ.  ಇದರಲ್ಲಿ ಮೂರು ಎಳೆಗಳಿದ್ದು 96 ಅಂಗುಲ ಉದ್ಧವಿರಬೇಕು.  ಆ ಮೂರು ಎಳೆಗಳಲ್ಲೂ ಮೂರು ಮೂರು ಎಳೆಗಳಿದ್ದು ಒಂಭತ್ತು ಎಳೆಗಳಾಗುತ್ತವೆ.  ನಾವು ಯಜ್ಞೋಪವೀತ ಧರಿಸುವಾಗ ಎಡಭುಜದ ಮೇಲಿನಿಂದ ಬಲಭಾಗದಲ್ಲಿ ನಾಭಿಯವರೆಗೂ ಇರಬೇಕು.  ನಾಭಿಯ ಮೇಲಾಗಲಿ ಕೆಳಗಾಗಲೀ ಇರಬಾರದು.
#Chetha #Muniswamy #gowda #Riya #YOGI
#ChethanaMuniswamygowda 

ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಅನೇಕ ನಿಯಮಗಳನ್ನು ಅನಿವಾರ್ಯವಾಗಿ ಪಾಲಿಸಬೇಕಾಗುತ್ತದೆ. ಒಂದು ಸಲ ಜನಿವಾರವನ್ನು ಧರಿಸಿದ ಮೇಲೆ ಯಾವುದೇ ಕಾರಣಕ್ಕೂ ಜನಿವಾರವನ್ನು ಧರಿಸದೇ ಬಿಡುವಂತಿಲ್ಲ.   ಯಜ್ಞೋಪವೀತ ಅವನ ತಪ: ಶಕ್ತಿಯನ್ನು ಹೆಚ್ಚಿಸುತ್ತದೆ.  ಪೌರಾಣಿಕ ಕಥೆಯ ಪ್ರಕಾರ ಹಿಂದೆ ವೇನ ಎಂಬ ರಾಜ ಯಾವ ಯಜ್ಞ ಯಾಗ ಮಾಡಬೇಡಿ, ಆ ರಾಜನನ್ನೇ ಪೂಜಿಸಬೇಕು ಎಂದು ಆಜ್ಞೆಯಿತ್ತಾಗ ಬ್ರಾಹ್ಮಣರು ತಮ್ಮ ತಪ: ಶಕ್ತಿಯಿಂದಲೇ ಹೂಂಕಾರ ಮಾಡಿದಾಗ ಆ ರಾಜನೇ ಸತ್ತುಹೋದ.

ಬ್ರಾಹ್ಮಣ ಕ್ಷತ್ರಿಯ ಮತ್ತು ವೈಶ್ಯ ಈ ಮೂವರೂ ಜನಿವಾರ ಧರಿಸುತ್ತಾರೆ.   ಅದರಲ್ಲೂ ಬ್ರಾಹ್ಮಣ ತನ್ನ ನಿತ್ಯ ಕರ್ಮಾನುಷ್ಟಾನ ಯೋಗ್ಯತೆಗೆ ಜನಿವಾರ ಧರಿಸಲೇಬೇಕು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ

*ವಕೀಲರಿಗೆ ಬೇಷರತ್ತಾಗಿ ಕ್ಷಮೆ ಕೋರಿದ:ಸಂಪಾದಕ ವಿಶ್ವೇಶ್ವರ ಭಟ್ವ*