ನಟ ಉಪೇಂದ್ರ-ಪ್ರಿಯಾಂಕಾ ಮೊಬೈಲ್ ಹ್ಯಾಕ್;
#Priyankaupendra #upendra #kannada ಹೊರ ರಾಜ್ಯ ಮೂಲದ ಅಕೌಂಟ್‌ಗೆ ಲಕ್ಷಕ್ಕೂ ಅಧಿಕ ಹಣ ಟ್ರಾನ್ಸ್‌ಫರ್
ಬುದ್ಧಿವಂತ ಖ್ಯಾತಿಯ ನಟ ಉಪೇಂದ್ರ ಮತ್ತು ನಟಿ ಪ್ರಿಯಾಂಕಾ ಅವರ ಮೊಬೈಲ್ ಹ್ಯಾಕ್ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಿಯಾಂಕಾ ಅವರ ಮೊಬೈಲ್ ಸಂಖ್ಯೆಯ ಮೂಲಕ ಲಾಗಿನ್ ಮಾಡಿದ ಆರೋಪಿಗಳು, ಅವರ ಕುಟುಂಬದ ಸದಸ್ಯರು ಮತ್ತು ಮಗನಿಂದ ಐವತ್ತೈದು ಸಾವಿರ ರೂಪಾಯಿಗಳನ್ನು ನೀಡುವಂತೆ ಬೇಡಿಕೆ ಇಟ್ಟಿದ್ದರು.
#karnataka #uppi #yash #sandalwood
ರಾಜ್ಯದಲ್ಲಿ ಸೈಬರ್ ವಂಚನೆಗಳು ಹೆಚ್ಚಾಗುತ್ತಿದ್ದು ವಂಚಕರು ವಿದ್ಯಾವಂತರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಹೌಸ್ ಅರೆಸ್ಟ್ ಹೆಸರಲ್ಲಿ ಕೋಟಿ ಕೋಟಿ ಹಣವನ್ನು ವಂಚಿಸಲಾಗುತ್ತಿದೆ. ಇದೀಗ ಮತ್ತೊಂದು ಘಟನೆಯಲ್ಲಿ ನಟ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಮೊಬೈಲ್ ಹ್ಯಾಕ್ ಮಾಡಿ ವಂಚಕರು ಹಣ ಲಪಟಾಸಿದ್ದಾರೆ #bengaluru #fans #kiccha #upendrafansclub #realsta
ಈ ಬಗ್ಗೆ ಮಾತನಾಡಿರುವ ಉಪೇಂದ್ರ, ಪ್ರಿಯಾಂಕಾ ಮೊಬೈಲ್ ಹ್ಯಾಕ್ ಮಾಡಿ ತುರ್ತು ಹಣ ಕಳುಹಿಸುವಂತೆ ಕೇಳಿದ್ದಾರೆ. ಇದನ್ನು ನಂಬಿ ಮೂರರಿಂದ ನಾಲ್ಕು ಮಂದಿ ಹಣ ಕಳುಹಿಸಿದ್ದಾರೆ. ನನ್ನ ಮಗ ಆಯೂಷ್ ಮತ್ತು ಪ್ರಿಯಾಂಕಾಳ ಇಬ್ಬರು ಸ್ನೇಹಿತರು ತಲಾ 55,000 ಸಾವಿರ ರೂಪಾಯಿ ಕಳುಹಿಸಿದ್ದಾರೆ. ನಮಗೆ ಬಂದಿರುವ ಮಾಹಿತಿಯ ಪ್ರಕಾರ ಸುಮಾರು 1.5 ರಿಂದ 2 ಲಕ್ಷ ರೂ. ಹೋಗಿದೆ. ಬೇರೆ ಯಾರಾದರೂ ಹಣ ಕಳುಹಿಸಿದ್ದಾರೆಯೇ ಎಂದು ನಾವು ಪರಿಶೀಲಿಸಬೇಕಾಗಿದೆ ಎಂದು ಉಪೇಂದ್ರ ಹೇಳಿದ್ದಾರೆ. ಹೀಗಾಗಿ ಅಂತಹ ಸಂದೇಶ ಬಂದ ಕೂಡಲೇ ಜನರು ಹಣ ಕಳುಹಿಸಬೇಡಿ. ಈ ಬಗ್ಗೆ ಪೊಲೀಸರಿಗೆ ತಿಳಿಸಬೇಕೆಂದು ಉಪೇಂದ್ರ ವಿನಂತಿಸಿದ್ದಾರೆ. ಅಲ್ಲದೆ ಈ ಬಗ್ಗೆ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದೇವೆ ಎಂದರು.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ ಉಪೇಂದ್ರ, 'ಎಲ್ಲರಿಗೂ ನಮಸ್ಕಾರ.. ದಯವಿಟ್ಟು ಎಲ್ಲರಿಗೂ ಎಚ್ಚರಿಕೆ ಸಂದೇಶ ನೀಡುತ್ತಿದ್ದೇವೆ. ಪ್ರಿಯಾಂಕಾ ಅವರಿಗೆ ಒಂದು ನಂಬರ್‌ನಿಂದ ಕರೆ ಬಂದಿದೆ. ಪ್ರಿಯಾಂಕಾ ಆರ್ಡರ್ ಮಾಡಿದ ಪಾರ್ಸಲ್ ಒಂದು ಬರೋದಿತ್ತು. ಪಾರ್ಸಲ್ ಸಂಬಂಧಿಸಿದ ಮೆಸೇಜ್ ಇದು ಎಂದು ಅವಳು ಭಾವಿಸಿದ್ದಳು. ಹ್ಯಾಶ್ ಟ್ಯಾಗ್ ಒತ್ತಿ ಆ ನಂಬರ್ ಡಯಲ್ ಮಾಡಿ, ಈ ನಂಬರ್ ಡಯಲ್ ಮಾಡಿ ಎಂದು ಮೆಸೇಜ್ ಮಾಡಿದಾತ ಹೇಳಿದ್ದಾನೆ. ಅವಳು ಹಾಗೆ ಮಾಡಿದಳು. ಅಲ್ಲಿ ಆಗುತ್ತಿಲ್ಲ ಎಂದು ನನ್ನ ಮೊಬೈಲ್ನಿಂದಲೂ ಪ್ರಯತ್ನಿಸಿದ್ದಾಳೆ. ಹೀಗಾಗಿ, ನನ್ನ ಮೊಬೈಲ್ ಕೂಡ ಹ್ಯಾಕ್ ಆಗಿದೆ ಎನಿಸುತ್ತಿದೆ.
#kannadamusically #kannadatrolls #kannadadubsmash #superstar #kannadasongs #druvasarja
ಉಪೇಂದ್ರ ನಿರ್ದೇಶಕ ಹಾಗೂ ನಟ. ಇವರು ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಕುಂದಾಪುರದ ಸಮೀಪದಲ್ಲಿರುವ ಕೋಟೇಶ್ವರದಲ್ಲಿ ಜನಿಸಿದರು. ಇವರು ತಮ್ಮ ಮತ್ತು ಇತರರ ಚಿತ್ರಗಳಿಗೆ ಹಾಡುಗಳನ್ನು ರಚಿಸಿದ್ದಾರೆ. ೧೯೯೨ರಲ್ಲಿ ಬಿಡುಗಡೆಯಾದ ತರ್ಲೆನನ್ಮಗ ಚಿತ್ರದ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದಕ್ಕೂ ಮು೦ಚೆ ಕಾಶೀನಾಥ್ ಜತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು.
sandalwood #sandalwoodactress #sandalwoodadda #sandalwood_official #nammasandalwood #sandalwoodmovies #sandalwoodactor #sandalwood_adda #sandalwoodofficial #sandalwoodqueen #sandalwoodstudios #sandalwoodactors #sandalwoodoil #sandalwoodqueenramya #sandalwoodvideos
#Chetha #Muniswamy #gowda #Riya #YOGI
#ChethanaMuniswamygowda
#kicchasudeep #darshan #dboss #upendrauppi #mysore #puneethrajkumar #rashmikamandanna #mandya
#shivarajkumar #bangalore #ashikarangnath #sudeep #kannadiga
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏