*ಒಕ್ಕಲಿಗರ ಸಂಘಗಳು ವಿಲೀನ, ಒಗ್ಗಟ್ಟಿನ ಪ್ರಕಟಣೆ*

*ಒಕ್ಕಲಿಗರ ಸಂಘಗಳು ವಿಲೀನ, ಒಗ್ಗಟ್ಟಿನ ಪ್ರಕಟಣೆ*

*ದುಬೈನ ಎರಡೂ ಒಕ್ಕಲಿಗರ ಸಂಘಗಳು ವಿಲೀನ, ಒಗ್ಗಟ್ಟಿನಲ್ಲಿ ಪ್ರಕರಣೆ ನೀಡಿದ ಪದಾಧಿಕಾರಿಗಳು!*
#vokkaliga #gowdru #gowda #vakkaligaru
*ಡಿಸೆಂಬರ್ 2ರಂದು ಸ್ನೇಹ ಸಮ್ಮೇಳನ ಕಾರ್ಯಕ್ರಮ*
 ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಯವರ ಆಶಿರ್ವಾದ ಹಾಗೂ ನಿರ್ಧಾರದಂತೆ ಒಕ್ಕಲಿಗರ ಸಂಘ ದುಬೈ, ಯುಎಇ ಹಾಗೂ ದುಬೈ ಒಕ್ಕಲಿಗರ ಸಂಘದ ಎಲ್ಲಾ ಕೋರ್ ಕಮಿಟಿ ಸದಸ್ಯರ ಸರ್ವಸಮ್ಮತದಿಂದ ವಿಲೀನಗೊಂಡು 'ದುಬೈ ಒಕ್ಕಲಿಗರ ಸಂಘ ಯುಎಇ' ಎಂಬ ಹೆಸರಿನಲ್ಲಿ ಒಗ್ಗಟ್ಟಿನಿಂದ ಕಾರ್ಯಾಚರಿಸಲಿದೆ ಎಂದು ಕಿರಣ್ ಗೌಡ ಹಾಗೂ ಡಾ. ರಶ್ಮಿ ನಂದಕಿಶೋರ್ ಜಂಟಿ ಹೇಳಿಕೆ ನೀಡಿದ್ದಾರೆ.

ಈ ಪ್ರಕಟನೆ ಕುರಿತು ಮಾಹಿತಿ ನೀಡಿದ ಡಾಕ್ಟರ್ ರಶ್ಮಿ ನಂದಕಿಶೋರ್, ಗುರೂಜಿ ಆಶಿರ್ವಾದದೊಂದಿಗೆ ಜುಲೈ 10ರಂದೇ ಎರಡೂ ಸಂಘದ ಒಟ್ಟಾಗಿದ್ದೇವೆ, ಮುಂದೆ ಒಗ್ಗಟ್ಟಿನಿಂದ ಸಮುದಾಯಪರ ಕೆಲಸ ನಿರ್ವಹಿಸುತ್ತೇವೆ ಎಂಬ ಸಂತೋಷದ ವಿಷಯವನ್ನು ನಿಮ್ಮ ಜೊತೆ ಹಂಚಿಕೊಳ್ಳುಲು ಇಷ್ಟ ಪಡುತ್ತೇನೆ ಎಂದರು.

ದುಬೈ ಒಕ್ಕಲಿಗರ ಸಂಘದ ಅಧ್ಯಕ್ಷ ಕಿರಣ್ ಗೌಡ ಮಾತನಾಡಿ, ಎರಡು ಸಂಘ ಒಂದಾಗಿದೆ, ಎಲ್ಲಾ ಕೋರ್ ಕಮಿಟಿ ಸದಸ್ಯರು ಒಂದಾಗಿದ್ದೇವೆ, ದುಬೈ ಒಕ್ಕಲಿಗರ ಸಂಘ ಯುಎಇಯ ಅಧಿಕೃತ ಹಾಗೂ ಏಕೈಕ ಒಕ್ಕಲಿಗರ ಸಂಘವಾಗಿ ಇನ್ನು ಮುಂದೆ ಯುಎಇಯಲ್ಲಿ ಸೇವೆ ಸಲ್ಲಿಸಲಿದೆ, ಎಲ್ಲರೂ ಒಟ್ಟಾಗಿ ಇದೇ ಡಿಸೆಂಬರ್ ಎರಡರಂದು 'ಸ್ನೇಹ ಸಮ್ಮೇಳನ' ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ, ಯುಎಇಯಲ್ಲಿ ನೆಲೆಸಿರುವ ಒಕ್ಕಲಿಗ ಸಮುದಾಯದ ಎಲ್ಲರೂ ಕುಟುಂಬ ಸಮೇತರಾಗಿ ಸ್ನೇಹಿತರನ್ನೂ ಜೊತೆಗೂಡಿ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
#gowdruhudugi#gowdruhuduga
#karnataka
#kannada
#mysore
#kempegowda 
ಈ ಸಂದರ್ಭದಲ್ಲಿ ಸಂಘದ ಪೋಷಕರಾದ ಡಾ. ರಶ್ಮಿ ನಂದಕಿಶೋರ್, & ಹರೀಶ್ ಕೋಡಿ, ಉಪಾಧ್ಯಕ್ಷ ಪುಟ್ಟರಾಜು ಗೌಡ ಹಾಗೂ ಇತರ ಕೋರ್ ಕಮಿಟಿ ಸದಸ್ಯರೂ ಉಪಸ್ಥಿತರಿದ್ದರು.
#gowdru, #gowdathi, #kodagugowda, #vokkaliga, #ಮತ್ತು #kempegowda
#Chetha #Muniswamy #gowda #Riya #YOGI #Chethana #chethanagowda
#ChethanaMuniswamygowda 
,

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

*ಆಂಥೂರಿಯಂ ಸಸ್ಯಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ: -*

ಕಮಲಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು ಹೀಗಿವೆ

*ನಾಟಿ ಕೋಳಿ ಸಾಕಾಣಿಕೆ ಎಲ್ಲ ವರ್ಗದ ಜನರ ಉದ್ಯಮ