ಅಪಘಾತದಿಂದ ಬಚಾವಾದ ವಿಮಾನ* ಅಜಿತ್ ಪವಾರ್ ನಾ ನೆನಪು ಮಾಡಿಕೊಂಡ ಪ್ರಯಾಣಿಕ*ಮಂಗಳೂರು ನೋಡ ಬನ್ನಿ( ದೃಶ್ಯ
*ಅಪಘಾತದಿಂದ ಬಚಾವಾದ ವಿಮಾನ* ಅಜಿತ್ ಪವಾರ್ ನಾ ನೆನಪು ಮಾಡಿಕೊಂಡ ಪ್ರಯಾಣಿಕ*
ಮಂಗಳೂರು ನೋಡ ಬನ್ನಿ( ದೃಶ್ಯ whatsapp ಕೃಪೆ)
#mangalore, #nammamangalore, #kudla, #mangalorean, #itsmangalore, #coastal
ಶನಿವಾರ ಮಂಗಳೂರಿಗೆ ಬರಬೇಕಾಗಿತ್ತು. ಲ್ಯಾಂಡಿಂಗ್ ಆಗುವಾಗ ನನಗೆ ವಿಡಿಯೊ ತೆಗೆಯುವ ಸಣ್ಣ ಹುಚ್ಚೊಂದಿದೆ. ಹಾಗೆಯೇ ಮೊಬೈಲ್ ಆನ್ ಮಾಡಿದೆ. ನೋಡಿದ್ರೆ ಪುಣ್ಯಾತ್ಮ ಇಂಡಿಗೋ ಪೈಲಟ್ ವೇಗವಾಗಿ ಬಜಪೆ ಪಟ್ಟಣದ ಮೇಲಿನಿಂದ ಸೀದಾ ಮುಂದಕ್ಕೆ ಹೋದ. ಕೆಳಗೆ ನೋಡಿದರೆ ಏರ್ ಪೋರ್ಟ್ ದಾಟಿ ಮಂಗಳ ಸ್ಟೇಡಿಯಂ ದಾಟಿ ಅರಬ್ಬೀ ಸಮುದ್ರದತ್ತ ಹೋಗ್ತಾ ಇದೆ. #SamsungGalaxy
#GalaxyS25Ultra (Latest current model)
#GalaxyS24Ultra
#SamsungUltra
#TeamGalaxy
#withGalaxy (
ನೋಡ್ತಾ ಇದೀನಿ...ಸೀದಾ ಸಮುದ್ರದ ಮೇಲೆ ಹೋಗ್ತಾ ಇದಾನೆ. ಕೆಳಗೆ ಎರಡು ಹಡಗುಗಳು ಕಾಣಿಸಿದವು. ಅದು ಬಿಟ್ರೆ ನೀಲಿ ನೀರೇ ನೀರು. ಐದಾರು ನಿಮಿಷ ಸಮುದ್ರದ ಮೇಲೆ ಅಡ್ಡಾಡಿ ಬಳಿಕ ಮಂಗಳೂರು ನಗರದ ಮೇಲೆ ಸುತ್ತಾಡಿ ನವಮಂಗಳೂರು ಬಂದರು, ನೇತ್ರಾವತಿ ನದಿ ಎಲ್ಲ ತೋರಿಸಿ ಕೊನೆಗೂ ಮರವೂರು ಬ್ರಿಜ್ ದಾಟಿ ನಮ್ಮ ಬಜಪೆ ಟೇಬಲ್ ಟಾಪ್ ಏರ್ ಪೋರ್ಟ್ ನಲ್ಲಿ ರಫ್ ಆಗಿಯೇ ಕೆಳಗಿಳಿಸಿದ.
#Karnataka #mangalorediaries, #mangaloretimes, #mangalorebeach, #explorepage, #karnatakatourism.
#mangalorefood, #mangalorefoodie, #chickengheeroast, #pabbas, #mangalorefoodies.
: #KA19, #hashtag_ka19.
ಮೊನ್ನೆಯಷ್ಟೇ ಬಾರಾಮತಿಯ ಟೇಬಲ್ ಟಾಪ್ ಏರ್ ಪೋರ್ಟ್ ನಲ್ಲಿ ಅಜಿತ್ ಪವಾರ್ ಗೆ ಆದದ್ದು ನೆನಪಾಗಿ ಒಳಗೇ ಪುಕುಪುಕು ಆಗ್ತಾ ಇತ್ತು.
ನನ್ನ ಪಕ್ಕದಲ್ಲಿ ಹೈದರಾಬಾದಿನ ಮಧ್ಯವಯಸ್ಕನೊಬ್ಬನಿದ್ದ. ಅಮೆರಿಕದ ಫ್ಲೋರಿಡಾ ನಿವಾಸಿ. ಅಲ್ಲಿ ಕಳೆದ ವಾರವಿಡೀ ವಿಪರೀತ ಐಸ್ ಬಿದ್ದು ಊರೇ ಮುಳುಗಿತ್ತಂತೆ. ಈತ ಎರಡು ವಾರದ ರಜೆಯಲ್ಲಿದ್ದವರು ಹೈದ್ರಾಬಾದಿನಿಂದ ಸಂಸಾರ ಸಮೇತ ಸುಬ್ರಹ್ಮಣ್ಯಕ್ಕೆ ಹೊರಟಿದ್ದಾರೆ.
ದುಬೈ ವಿಮಾನವೊಂದು ಕೆಲವು ವರ್ಷದ ಹಿಂದೆ ಬಿದ್ದು ಬಹಳ ಜನ ಸತ್ತದ್ದು ಇದೇ ಏರ್ ಪೋರ್ಟ್ ನಲ್ಲಾ... ಅಂತ ಕೇಳಿದ. ಹೌದು ಅಂದೆ. ಏನಾಗಿತ್ತು ಅಂತ ಕೇಳಿದ. ಏನು ಹೇಳೋದು? ನೆನಪಿಗೆ ಬಂದದ್ದು ವಿವರಿಸಿದೆ.
ಇನ್ನೂ ವಿಮಾನ ಮಂಗಳೂರು ನಗರದ ಮೇಲೆ ಸುತ್ತು ಹೊಡೆಯುತ್ತಿತ್ತು. ಮೊಬೈಲ್ ಕ್ಯಾಮೆರಾ ಕೆಲಸ ಮಾಡ್ತಾನೇ ಇತ್ತು.
ಮಧ್ಯಾಹ್ನ ಊಟಕ್ಕೆ ಒಳ್ಳೇ ಹೋಟೆಲ್ ಯಾವುದಿದೆ ಎಂದು ಕೇಳಿದ. ನೀವು ನಾನ್ ವೆಜ್ಜಾ.. ಎಂದು ಕೇಳಿದೆ. ಹೌದು ಅಂದ. ಇಲ್ಲಿ ಒಳ್ಳೆಯ ಮೀನೂಟ ಸಿಗುತ್ತೆ. ಬಲ್ಮಠದಲ್ಲಿ ಫಿಶ್ ಮಾರ್ಕೆಟ್ ಅಂತ ಹೋಟೆಲಿದೆ ಅಂದೆ. ಇಲ್ಲ, ದೇವಸ್ಥಾನಕ್ಕೆ ಹೋಗ್ತಿದೀನಿ, ಇವತ್ತಿಗೆ ವೆಜ್ ಬೇಕು ಅಂದ. ವುಡ್ ಲ್ಯಾಂಡ್ಸ್ ಗೆ ಹೋಗಿ, you will like it ಅಂದೆ. ಥ್ಯಾಂಕ್ಯೂ... ನಾಳೆ ವಾಪಸ್ ಬರುವಾಗ ಫಿಶ್ ಮಾರ್ಕೆಟ್ ಗೆ ಹೋಗ್ತೀನಿ ಅಂದ.
ಇಳಿದ ಬಳಿಕ ವಿಡಿಯೊ ನೋಡಿದ್ರೆ ಖುಷಿಯಾಯ್ತು. ನಮ್ಮ ಮಂಗಳೂರು/ ಮೈಕಾಲ/ ಕೊಡಿಯಾಲ/ ಕುಡ್ಲ ನಗರದ ಪ್ರದಕ್ಷಿಣೆ ಸುಂದರವಾಗಿ ಮೂಡಿ ಬಂದಿದೆ. ಅರಬ್ಬೀ ಸಮುದ್ರದ ಬೀಚ್ ಕೂಡಾ ಮನತಣಿಸುವಂತಿದೆ.
(ಮೊಬೈಲ್ ಕ್ಯಾಮೆರಾ - ಸ್ಯಾಮ್ಸಂಗ್ ಎಸ್ 23 ಅಲ್ಟ್ರಾ)
#Radha'sHomeopathy , #HomeocareInternational
#SamsungPhotography
#MobilePhotography
#GalaxyAI
#Nightography
#ZoomTest
#200MP
#PhotoAssist #BestHomeopathyClinic #inTumkur
#nearestHomeopathicDoctors
#Dr.SadhanaMHomeopathyDoctor
#Muniswamygowda #Riya #YOGI #ಚೇತನ
#chetha #ChethanaMuniswamygowda
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏